
ಮಂಗಳೂರು: ಕಾರು ಮತ್ತು ಬೈಕ್ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಶಾಲೆಯ ಬಳಿ ಸಂಭವಿಸಿದೆ. ಕಟ್ಟದಬೈಲು ಗ್ರಾಮದ ಮಿಥುನ್(18), ಭವಿತ್(19) ಮೃತ ದುರ್ದೈವಿಗಳು.
ನರಿಮೊಗರು ಶಾಲಾ ಬಳಿ ತಡರಾತ್ರಿ ಬೈಕ್ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ಪರಿಣಾಮ ಕುರಿಯ ಗ್ರಾಮದ ಇಡಬೆಟ್ಟು ಸಮೀಪದ ಕಟ್ಟದಬೈಲು ನಿವಾಸಿ ಐತ್ತಪ್ಪ ಎಂಬುವವರ 18 ವರ್ಷದ ಮಗ ಮಿಥುನ್ ಹಾಗೂ ಐತ್ತಪ್ಪ ಅವರ ಸಹೋದರ, ಮೆಸ್ಕಾಂ ಪವರ್‌ಮ್ಯಾನ್ ಉಮೇಶ್ ಎಂಬುವವರ 19 ವರ್ಷದ ಮಗ ಭವಿತ್ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.