ಸೈಕ್ಲಿಂಗ್ ಬಳಿಕ ಭದ್ರಾ ನದಿಯಲ್ಲಿ ಈಜಲುಹೋದ ಗೆಳೆಯರು ನೀರುಪಾಲು
ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಡ್ಡಗೋಪೇನಹಳ್ಳಿಯ ಆಂಜನೇಯ ಬಂಡೆ ಬಳಿ ನಡೆದಿದೆ. ರಾಜೇಶ್(38) ಮತ್ತು ಮನೋಜ್(17) ನೀರುಪಾಲಾದವರು ಎಂದು ತಿಳಿದುಬಂದಿದೆ. ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹೊರ ತೆಗೆದರು. ಇಬ್ಬರು ಸ್ನೇಹಿತರು ಸೈಕ್ಲಿಂಗ್ ಹೋದ ಬಳಿಕ ಭದ್ರಾ ನದಿಗೆ ಈಜಲು ಇಳಿದಿದ್ದರು ಎಂದು ಹೇಳಲಾಗಿದೆ. ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿವಮೊಗ್ಗ: ಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ದೊಡ್ಡಗೋಪೇನಹಳ್ಳಿಯ ಆಂಜನೇಯ ಬಂಡೆ ಬಳಿ ನಡೆದಿದೆ. ರಾಜೇಶ್(38) ಮತ್ತು ಮನೋಜ್(17) ನೀರುಪಾಲಾದವರು ಎಂದು ತಿಳಿದುಬಂದಿದೆ.
ಮೃತದೇಹಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಹೊರ ತೆಗೆದರು. ಇಬ್ಬರು ಸ್ನೇಹಿತರು ಸೈಕ್ಲಿಂಗ್ ಹೋದ ಬಳಿಕ ಭದ್ರಾ ನದಿಗೆ ಈಜಲು ಇಳಿದಿದ್ದರು ಎಂದು ಹೇಳಲಾಗಿದೆ. ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us



