‘ಅದಕ್ಕಾಗಿ‘ ಮೆಡಿಕಲ್ ಶಾಪ್​ಗೆ ಹೋಗಿ ನಾಚಿಕೆಯಿಂದ ಮುದುಡಿಕೊಂಡು ಕೇಳಬೇಕಾಗಿಲ್ಲ, ಬಟನ್ ಒತ್ತಿದರೆ ಸಾಕು ಬರುತ್ತದೆ!

|

Updated on: Apr 27, 2023 | 3:16 PM

ಗಂಭೀರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಇಬ್ಬರು ಮೆಕ್ಯಾನಿಕಲ್ ಎಂಜಿನಿಯರ್‌ಗಳು ಕಾಂಡೋಮ್ ಮಾರಾಟ ಯಂತ್ರವನ್ನು ಕಂಡುಹಿಡಿದಿದ್ದಾರೆ. ಅದಾಗಲೇ ಆ ಯಂತ್ರವನ್ನು ಗುಜರಾತ್‌ನ ಸೂರತ್‌ನಲ್ಲಿ ಸ್ಥಾಪಿಸಲಾಗಿದೆ.

‘ಅದಕ್ಕಾಗಿ‘ ಮೆಡಿಕಲ್ ಶಾಪ್​ಗೆ ಹೋಗಿ ನಾಚಿಕೆಯಿಂದ ಮುದುಡಿಕೊಂಡು ಕೇಳಬೇಕಾಗಿಲ್ಲ, ಬಟನ್ ಒತ್ತಿದರೆ ಸಾಕು ಬರುತ್ತದೆ!
Condom Vending Machine
Follow us on

ನಮ್ಮ ದೇಶದಲ್ಲಿ ಲೈಂಗಿಕತೆ ಮತ್ತು ಪ್ರಣಯದ ವಿಚಾರಗಳು ಇನ್ನೂ ಮಡಿವಂತಿಕೆಯ ಪರಿಧಿಯಲ್ಲೇ ಗಿರಕಿ ಹೊಡೆಯುತ್ತಿದೆ. ಅದರ ಪರಿಕಲ್ಪನೆಗಳು ಇನ್ನೂ ನಿಷೇಧದ ಹೊಸ್ತಿಲು ದಾಟಿ ಬಂದಿಲ್ಲ. ಮಗುಮ್ಮಾಗಿ, ಇನ್ನೂ ಬೆಡ್​ ರೂಮಿನಲ್ಲಿಯೇ ಪವಡಿಸಿಬಿಟ್ಟಿದೆ. ಹಾಗಾಗಿಯೇ ಜನರು ಲೈಂಗಿಕತೆಯ ವಿಷಯಕ್ಕೆ ಬಂದಾಗ ಮುಖಗೇಡಿತನ ಮಾಡುತ್ತಾರೆ. ಲೈಂಗಿಕ ಸಂಬಂಧಿ ವಿಷಯಗಳನ್ನು ಇತರರಿಗೆ ತಿಳಿಸಲು ಹಿಂಜರಿಯುತ್ತಾರೆ. ವಾಸ್ತವವಾಗಿ, ಯಾವುದೇ ವೈದ್ಯರಾಗಲಿ ಅಥವಾ ಆರೋಗ್ಯ ಕಾರ್ಯಕರ್ತರು ಲೈಂಗಿಕತೆಯ ಬಗ್ಗೆ ಸಲಹೆ ನೀಡುವಾಗ ಅದರ ಬಗ್ಗೆ, ಅದರ ಬಳಕೆ ಬಗ್ಗೆ ಆಳವಾಗಿ ತಿಳಿಯಹೇಳುತ್ತಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಲಾಗುತ್ತದೆ. ಅದು ಸುರಕ್ಷಿತವಾಗಿರಲು ಮತ್ತು ಸಮಸ್ಯೆಗಳನ್ನು ಸೃಷ್ಟಿಸದಿರಲು ಹೇಳುತ್ತಾರೆ. ಅದೇ ಕಾಂಡೋಮ್ (Condom) ವಿಷಯ ಇಲ್ಲಿ ಹೇಳುತ್ತಿರುವುದು. ಜನರಲ್ಲಿಯಂತೂ ಇನ್ನೂ ಅದರ ಬಗ್ಗೆ ಯಾವುದೇ ಬದಲಾವಣೆ ಬಂದಿಲ್ಲ ಎಂದು ಯೋಚಿಸಿದ ದೂರದ ಗುಜರಾತಿನ (Gujarat) ಇಬ್ಬರು ಮೆಕ್ಯಾನಿಕಲ್​ ಎಂಜಿನಿಯರ್​ ಗೌಪ್ಯವಾಗಿ ಅದಕ್ಕಾಗಿ ಒಂದು ಯಂತ್ರವನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದಾರೆ. ಅದುವೇ ಕಾಂಡೋಮ್ ವೆಂಡಿಂಗ್​ ಮಷಿನ್​ (Condom Vending Machine).

ಸರ್ಕಾರಗಳು ಮತ್ತು ವೈದ್ಯ ಲೋಕ ಜನ ಸರಕ್ಷತೆ ಬಯಸಿ, ಲೈಂಗಿಕತೆಯ ಮೂಲಕ ಯಾವುದೇ ಲೈಂಗಿಕ ರೋಗಗಳು ಹರಡದಂತೆ, ಅದಕ್ಕೆ ತುತ್ತಾಗುವುದನ್ನು ತಪ್ಪಿಸಲು ಕಾಂಡೋಮ್‌ಗಳ ಬಳಕೆಯನ್ನು ಉತ್ತೇಜಿಸುತ್ತಾರೆ. ಇನ್ನು ಕಾಂಡೋಮ್ ಬಳಕೆ ಕುರಿತು ಟಿವಿ, ಪೇಪರ್ ಗಳಲ್ಲಿ ಬಹಿರಂಗವಾಗಿಯೇ ಜಾಹೀರಾತು ನೀಡಲಾಗುತ್ತದೆ. ಆದಾಗ್ಯೂ, ಜನತೆ ಕಾಂಡೋಮ್​​ ಬಳಕೆಯ ಬಗ್ಗೆ ಪೂರ್ವಾಗ್ರಹ ಹೊಂದಿರತ್ತಾರೆ. ಮೆಡಿಕಲ್ ಶಾಪ್ ಗೆ ಹೋಗಿ ಕಾಂಡೋಮ್ ಕೊಳ್ಳಲು ಅಂಜಿಕೊಳ್ಳುತ್ತಾರೆ. ಅನೇಕ ಬಾರಿ ಅಂತಹ ಪ್ರಸಂಗಗಳು ನಮ್ಮ ಗಮನಕ್ಕೂ ಬಂದಿರುತ್ತದೆ… ಮೆಡಿಕಲ್ ಶಾಪ್ ಗೆ ಬಂದು ಕಾಂಡೋಮ್ ಬೇಕೆಂದು ಕೇಳುವಾಗ ನಾಚಿಕೆಯಿಂದ ಮುದುಡಿ ಹೋಗುತ್ತಾರೆ. ನಾನಾ ಕಸರತ್ತು ಮಾಡಿ ಕಾಂಡೋಮ್​​ಗಾಗಿ ಬೇಡಿಕೆಯಿಡುತ್ತಾರೆ.

ಈ ಗಂಭೀರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಇಬ್ಬರು ಮೆಕ್ಯಾನಿಕಲ್ ಎಂಜಿನಿಯರ್‌ಗಳು ಕಾಂಡೋಮ್ ಮಾರಾಟ ಯಂತ್ರವನ್ನು ಕಂಡುಹಿಡಿದಿದ್ದಾರೆ. ಅದಾಗಲೇ ಆ ಯಂತ್ರವನ್ನು ಗುಜರಾತ್‌ನ ಸೂರತ್‌ನಲ್ಲಿ ಸ್ಥಾಪಿಸಲಾಗಿದೆ. ಸೂರತ್ ನಗರದ ದಾಭೋಲಿ ಚಾರ್ ರಸ್ತಾದಲ್ಲಿರುವ ಶ್ಯಾಮ್ ಮೆಡಿಕಲ್ ನಲ್ಲಿ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ.

ಈ ವೆಂಡಿಂಗ್ ಮೆಷಿನ್ ಅನ್ನು ಬಳಸುವುದು ತುಂಬಾ ಸುಲಭ ಎಂದು ತಯಾರಕರು ಹೇಳುತ್ತಾರೆ. ಮೆಡಿಕಲ್ ಶಾಪ್ ಗೆ ಹೋಗಿ.. ಅಲ್ಲಿದ್ದವರನ್ನು ಕೇಳದೆ.. ನೇರವಾಗಿ ಮೆಷಿನ್ ನಲ್ಲಿ ಗುಂಡಿ ಒತ್ತಿ ಯಂತ್ರದಲ್ಲಿ ನಾಲ್ಕು ವಿಧದ ಕಾಂಡೋಮ್‌ಗಳನ್ನು ಪಡೆಯಬಹುದಾಗಿದೆ. ಯಂತ್ರದಲ್ಲಿ ಕಾಂಡೋಮ್ ಬಾಕ್ಸ್ ಗಳ ಫೋಟೋಗಳಿವೆ. ಅವುಗಳ ಕೆಳಗೆ ಒಂದು ಬಟನ್ ಇದೆ. ನಿಮಗೆ ಬೇಕಾದ ಯಾವುದೇ ಸಂಖ್ಯೆ ಇರುತ್ತದೆ. ಅವುಗಳನ್ನು ಒತ್ತಿದರೆ ಸಾಕು ಕಾಂಡೋಮ್​​ಗಳು ಹೊರಬರುತ್ತವೆ. ಇನ್ನು ಅದರ ಬೆಲೆ ತೆರಲು ಯಂತ್ರದ ಪರದೆಯ ಮೇಲೆ QR ಕೋಡ್ ಇರುತ್ತದೆ. ಅದನ್ನು ಸ್ಕ್ಯಾನ್ ಮಾಡುವ ಮೂಲಕ ಪಾವತಿಸಬಹುದಾಗಿದೆ. ಪಾವತಿ ಪೂರ್ಣಗೊಂಡ ನಂತರ, ಕಾಂಡೋಮ್​​ ಯಂತ್ರದಿಂದ ದಪದಪನೆ ಬೀಳುತ್ತದೆ. ಅಲ್ಲಿಗೆ ಗ್ರಾಹಕ ತನ್ನ ನಾಚಿಕೆಯನ್ನು ಬಿಟ್ಟು, ಕಾಂಡೋಮ್​ ಕೈಗೆ ತೆಗೆದುಕೊಂಡು, ಖುಷ್ ಖುಷ್​ಯಾಗಿ ಜಾಗ ಖಾಲಿ ಮಾಡಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Thu, 27 April 23