ಸಿನಿಮಾ ಹುಚ್ಚು ಕೊರೊನಾದಂತೆ ವೇಗವಾಗಿ ಹರಡಲಿ: ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಿಚ್ಚ ಸುದೀಪ್​ ಆಶಯ

ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ ಗೋವಾದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸುದೀಪ್​ ಈ ಆಶಯ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಹುಚ್ಚು ಕೊರೊನಾದಂತೆ ವೇಗವಾಗಿ ಹರಡಲಿ: ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಿಚ್ಚ ಸುದೀಪ್​ ಆಶಯ
ಸುದೀಪ್​
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: ರಾಜೇಶ್ ದುಗ್ಗುಮನೆ

Updated on: Jan 16, 2021 | 9:23 PM

ಪಣಜಿ: ಸಿನಿಮಾ ಕ್ರೇಜ್​ ಕೊರೊನಾದಂತೆ ಹರಡಲಿ. ಸಿನಿಮಾ ಮುಂದಿನ ಕೊರೊನಾ ಆಗಲಿ ಎಂದು ಕಿಚ್ಚ ಸುದೀಪ್​ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಆಶಯ ವ್ಯಕ್ತಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭ ಗೋವಾದಲ್ಲಿ ನಡೆಯಿತು. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಸುದೀಪ್​ ಈ ಆಶಯ ವ್ಯಕ್ತಪಡಿಸಿದ್ದಾರೆ. ಸಿನೆಮಾ ಎನ್ನುವುದು ನಿಮ್ಮನ್ನು ಜಗತ್ತಿನಾದ್ಯಂತ ಕರೆದೊಯ್ಯುತ್ತದೆ ಮತ್ತು ಪ್ರಪಂಚದ ಸಂಸ್ಕೃತಿಗೆ ನಿಮ್ಮನ್ನು ಹತ್ತಿರವಾಗಿಸುತ್ತದೆ. ಸಾಕಷ್ಟು ಜ್ಞಾನ ನೀಡುತ್ತದೆ ಹೀಗಾಗಿ, ಸಿನಿಮಾ ಕ್ರೇಜ್​ ಕೊರೊನಾದಂತೆ ಹರಡಲಿ ಎಂದು ಅಭಿಪ್ರಾಯ ಪಟ್ಟರು. ಅಲ್ಲದೆ, ಕಾರ್ಯಕ್ರಮಕ್ಕೆ ಮಖ್ಯ ಅತಿಥಿಯಾಗಿ ಆಹ್ವಾನಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಭಾರತದ ಅಂತರರಾಷ್ಟ್ರೀಯ ಸಿನಿಮಾ ಉತ್ಸವವನ್ನು (IFFI) ಆಯೋಜಿಸಲು ಸಿನಿಮಾ ಉದ್ಯಮ ಮತ್ತು ಇತರ ಕ್ಷೇತ್ರಗಳು ಜೊತೆಗೂಡಿ ಸರ್ಕಾರಕ್ಕೆ ನೆರವಾಬೇಕೆಂದು ಕೇಂದ್ರ ವಾರ್ತಾ ಮತ್ತು ಪ್ರಚಾರ ಇಲಾಖೆ ಸಚಿವರು ಪ್ರಕಾಶ್ ಜಾವಡೇಕರ್ ಆಗ್ರಹಿಸಿದರು. ಪ್ರತಿ ವರ್ಷ ಆಯೋಜಿಲಾಗುವ ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಇಂದು ಮಾತಾಡಿದ ಸಚಿವರು ಸರ್ಕಾರೇತರ ಸಂಸ್ಥೆಗಳು ಈ ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

‘ಪ್ರತಿ ವರ್ಷ ಈ ಉತ್ಸವವನ್ನು ಕೇಂದ್ರ ಮತ್ತು ಗೋವಾ ಸರ್ಕಾರಗಳು ಮಾತ್ರ ಯಾಕೆ ಆಚರಿಸುತ್ತಿವೆ? ಸಿನಿಮಾ ಮತ್ತು ಇತರ ಕ್ಷೇತ್ರಗಳೂ ಇದರಲ್ಲಿ ಭಾಗವಹಿಸಬೇಕು,’ ಎಂದು ಜಾವಡೇಕರ್ ಹೇಳಿದರು.

ಸಂಸ್ಕೃತಿ ಮತ್ತು ಕಲೆಯನ್ನು ಉತ್ತೇಜಿಸುವ ಮತ್ತು ಪ್ರಮೋಟ್ ಮಾಡುವ ಜವಾಬ್ದಾರಿ ಸರ್ಕಾರದ್ದು ಅಂದ ಮಾತ್ರಕ್ಕೆ ಸರ್ಕಾರವೇ ಎಲ್ಲವನ್ನೂ ಮಾಡಲಿ ಅಂತ ಅಂದಕೊಳ್ಳುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ’, ಎಂದು ಸಚಿವರು ಹೇಳಿದರು. ಮುಂಬರುವ ವರ್ಷಗಳಲ್ಲಿ ಐಎಫ್​ಎಫ್ಐ ಆಯೋಜಿಸಲು ಮುಂದೆ ಬರುವಂತೆ ಖಾಸಗಿ ಸಂಸ್ಥೆಗಳನ್ನು ಸಚಿವರು ಆಹ್ವಾನಿಸಿದರು.

ಪ್ರಕಾಶ್ ಜಾವಡೇಕರ್

ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ನಡೆಯಬೇಕಿದ್ದ 51ನೇ ಐಎಫ್​ಎಫ್ಐಯನ್ನು ಕೊವಿಡ್-19 ಪಿಡುಗಿನಿಂದಾಗಿ ಮುಂದೂಡಲಾಗಿತ್ತು. ಪಣಜಿಯ ಡಾ. ಶ್ಯಾಮಾ ಪ್ರಸಾದ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಇಂದು ಆರಂಭಗೊಂಡ ಉತ್ಸವ ಜನೆವರಿ 24ರವರೆಗೆ ನಡೆಯಲಿದೆ.

‘ಈ ಬಾರಿಯ ಉತ್ಸವನ್ನು ‘ಹೈಬ್ರೀಡ್ ಮೋಡ್’ನಲ್ಲಿ ಆಚರಿಸಲಾಗುತ್ತಿದ್ದು ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಿ ವರ್ಚ್ಯೂಯಲ್ ಆಗಿ ಸಿನಿಮಾ ಮತ್ತಿತರ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. ದೈಹಿಕ ಸ್ಕ್ರೀನಿಂಗ್ ಆಯಾಮಮವನ್ನೂ ಒಳಗೊಂಡಿರುವ ಹೈಬ್ರಿಡ್ ಆವೃತ್ತಿಯನ್ನು ಆರಂಭಿಸಿರುವುದು ಬದಲಾಗುತ್ತಿರುವ ವಿದ್ಯಮಾನಗಳಿಗೆ ಐಎಫ್​ಎಫ್ಐ ಹೊಂದಿಕೊಳ್ಳುತ್ತಿರುವುದರ ದ್ಯೋತಕವಾಗಿದೆ’ ಎಂದು ಜಾವಡೇಕರ್ ಹೇಳಿದರು.

‘ಸಿನಿಮಾಗಳನ್ನು 7 ಥೇಟರ್​ಗಳಲ್ಲಿ ಪ್ರದರ್ಶಿಲಾಗುತ್ತಿದೆ, ಆದರೆ ಉತ್ಸವದಲ್ಲಿ ಭಾಗವಹಿಸಿರುವ ಎಲ್ಲ ಪ್ರತಿನಿಧಿಗಳಿಗೆ ಆನಲೈನ್​ನಲ್ಲಿ ವೀಕ್ಷಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಕೊವಿಡ್​ನಿಂದಾಗಿ ವೃತ್ತಪತ್ರಿಕೆಗಳ ಸರ್ಕ್ಯುಲೇಷನ್ ಗಣನೀಯವಾಗಿ ಇಳಿಮುಖಗೊಂಡಿದೆ, ಆದರೆ ಅವುಗಳ ಡಿಜಿಟಲ್ ಅವೃತ್ತಿಗಳು ಭಾರಿ ಪ್ರಗತಿ ಸಾಧಿಸಿವೆ. ಟೆಕ್ನಾಲಜಿ ಕ್ಷಿಪ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವುದು ನಮಗೆ ಲಾಭದಾಯಕವಾಗಿದೆ,’ ಎಂದು ಸಚಿವರು ಹೇಳಿದರು.

ಇಂಡಿಯನ್ ಪರ್ಸಾನಾಲಿಟಿ ಆಫ್ ದಿ ಈಯರ್ ಪ್ರಶಸ್ತಿಯನ್ನು, ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ, ಚಿತ್ರ ಸಾಹಿತಿ ಬಿಸ್ವಜಿತ್ ಚಟರ್ಜೀ ಅವರಿಗೆ ನೀಡಿ ಗೌರವಿಸಲಾಗುವುದೆಂದು ಸಚಿವರು ಸಮಾರಂಭದಲ್ಲಿ ಘೋಷಿಸಿದರು. ಸಿನಿಮಾ ರಂಗಕ್ಕೆ ಅಪ್ರತಿಮ ಸೇವೆ ಸಲ್ಲಿಸಿದ ವ್ಯಕ್ತಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

‘ಬೀಸ್​ ಸಾಲದ ಬಾದ್’, ’ನೈಟ್ ಇನ್ ಲಂಡನ್’ ಮತ್ತು ‘ಏಪ್ರಿಲ್ ಫೂಲ್’ ನಂಥ ಅವಿಸ್ಮರಣಿಯ ಚಿತ್ರಗಳಲ್ಲಿ ನಟಿಸಿರುವ 84-ವರ್ಷ ಪ್ರಾಯದ ಚಟರ್ಜೀ ಅವರಿಗೆ ಈ ವರ್ಷ ಮಾರ್ಚ್​ನ​ಲ್ಲಿ ನಡೆಯುವ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರದಾನ ಸಂಮಾರಂಭದಲ್ಲಿ ಗೌರವಿಸಲಾಗುವುದು.

ಸಮಾರಂಭದ ಭಾಗವಾಗಿದ್ದ, ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ ಮಾತನಾಡಿ, ಭಾರತದ ಅಂತರರಾಷ್ಟ್ರೀಯ ಫಿಲ್ಮೋತ್ಸವನ್ನು ಕೊವಿಡ್-19 ಪಿಡುಗಿನ ಅವಧಿಯಲ್ಲೇ ಆಯೋಜಿಲಾಗಿದ್ದರೂ, ಎಲ್ಲ ಸರಕ್ಷತೆ ಮತ್ತು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ವಿಶ್ವದ ನಾನಾ ಭಾಗಗಳಿಂದ ಆಯ್ಕೆಯಾಗಿರುವ ಅತ್ಯುತ್ತಮ ಚಿತ್ರಗಳ ಪ್ರದರ್ಶನಗಳೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದರರು, ನಿರ್ಮಾಪಕ-ನಿರ್ದೇಶಕರು, ತಂತ್ರಜ್ಞರೊಂದಿಗೆ ವಿಚಾರ ಗೋಷ್ಠಿಗಳನ್ನು ಫಿಲ್ಮೋತ್ಸವದಲ್ಲಿ ನಡೆಸಲಾಗುವುದು.

ಹಿರಿಯ ನಟ ಬಿಸ್ವಜೀತ್ ಚಟರ್ಜೀ

ಇಂದು ಪ್ರದರ್ಶನಗೊಂಡ ಮೊಟ್ಟಮೊದಲ ಚಿತ್ರವೆಂದರೆ, ಡೆನ್ಮಾರ್ಕಿನ ಥಾಮಸ್ ವಿಂಟರ್ಬರ್ಗ್ ಅವರ ‘ಅನದರ್ ರೌಂಡ್’. ಕ್ಯಾನೆ ಚಿತ್ರೋತ್ಸವದಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದ ಮ್ಯಾಡ್ಸ್ ಮಿಕ್ಕೆಲ್ಸನ್ ನಟಿಸಿರುವ ಈ ಚಿತ್ರವು ಆಸ್ಕರ್​ ಪ್ರಶಸ್ತಿಗೆ ಡೆನ್ಮಾರ್ಕಿನ ಅಧಿಕೃತ ಎಂಟ್ರಿಯಾಗಿದೆ.

51 ನೇ ಭಾರತದ ಅಂತರರಾಷ್ಟ್ರೀಯ ಫಿಲ್ಮೋತ್ಸವದ ಬೇರೆ ಬೇರೆ ವಿಭಾಗಗಳಲ್ಲಿ ಒಟ್ಟು 224 ಚಿತ್ರಗಳು ಪ್ರದರ್ಶನಗೊಳ್ಳಲಿದ್ದು ಅವುಗಳಲ್ಲಿ 15 ಚಿತ್ರಗಳು ಗೋಲ್ಡನ್ ಪೀಕಾಕ್ ಪ್ರಶಸ್ತಿಗೆ ಸೆಣಸಲಿವೆ.

ಇರ್ಫಾನ್ ಖಾನ್, ಸುಶಾಂತ್ ಸಿಂಗ್ ರಜಪೂತ್, ರಿಷಿ ಕಪೂರ್ ಮತ್ತು ಹಾಲಿವುಡ್ ನಟ ಚಾಂದ್ವಿಕ್ ಬೋಸ್ಮ​ನ್ ಅವರೊಂದಿಗೆ ಕಳೆದ ವರ್ಷ ವಿಧಿವಶರಾದ ಒಟ್ಟು 28 ಕಲಾವದರಿಗೆ ಅವರ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಭಾರತದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರಕಟ: ಪ್ರಶಸ್ತಿಗೆ ಭಾಜನರಾದ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಗಾಯಕ ಬಿಸ್ವಜಿತ್ ಚಟರ್ಜಿ

ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ