
ಕೊಪ್ಪಳ: ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದಕ್ಕೆ ಕ್ಲರ್ಕ್‌ಗೆ ಧರ್ಮದೇಟು ಬಿದ್ದಿದೆ. ಕುಕನೂರ ತಾಲೂಕಿನ ತಳಕಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಳಕಲ್ ಗ್ರಾಮದ ಮಹಿಳೆಯೊಂದಿಗೆ ಅನುಚಿತ ವರ್ತನೆ ಮಾಡಿದ್ದ ಕುಕನೂರ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ಲರ್ಕ್ ಹನುಮಂತಪ್ಪಗೆ ತಳಕಲ್‌ನಲ್ಲಿ ಸ್ಥಳೀಯರು ಥಳಿಸಿದ ವಿಡಿಯೋ ವೈರಲ್ ಆಗಿದೆ.
ಮದ್ಯದ ಅಮಲಿನಲ್ಲಿದ್ದ ಹನುಮಂತಪ್ಪ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ್ದ ಹೀಗಾಗಿ ಹನುಮಂತಪ್ಪನ ಕೈಕಾಲು ಕಟ್ಟಿ ಹಾಕಿ ಸ್ಥಳೀಯರು ಹಿಗ್ಗಾ ಮುಗ್ಗ ಥಳಿಸಿದ್ದಾರೆ. ನಂತರ ಪೊಲೀಸರಿಗೊಪ್ಪಿಸಿದ್ದಾರೆ. ಸದ್ಯ ಕ್ಲರ್ಕ್ ಹನುಮಂತಪ್ಪ ನ್ಯಾಯಾಂಗ ಬಂಧನದಲ್ಲಿದ್ದಾನೆ.
Published On - 7:47 am, Wed, 16 September 20