‘ತನಿಖಾಧಿಕಾರಿ ಸಂದೀಪ್ ಪಾಟೀಲರನ್ನು ಬದಲಾಯಿಸಬೇಡಿ’

ಬೆಂಗಳೂರು: ಬೆಂಗಳೂರನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸುವಂತೆ ವಾಯ್ಸ್ ಆಫ್ ಪಬ್ಲಿಕ್ ಟೀಂ ಸದಸ್ಯರು ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಆಗ್ರಹ ಮಾಡಿದ್ದಾರೆ. ವಕೀಲ ಅಮೃತೇಶ್ ನೇತೃತ್ವದಲ್ಲಿ ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಮನವಿ ಮಾಡಲಾಗಿದ್ದು, ಡ್ರಗ್ ಜಾಲ ಭೇದಿಸುವಲ್ಲಿ ಸಿಸಿಬಿ ಪ್ರಯತ್ನ ಯಶಸ್ವಿಯಾಗಲಿ. ಜೊತೆಗೆ ಈ ವಿಚಾರವಾಗಿ ರಾಜಕೀಯ ಮಾಡೋದು ಬೇಡ, ತನಿಖಾಧಿಕಾರಿ ಸಂದೀಪ್ ಪಾಟೀಲ್ ಅವರನ್ನು ಬದಲಾಯಿಸಬೇಡಿ ಎಂದಿದ್ದಾರೆ. ಡ್ರಗ್ಸ್ ಜಾಲದಲ್ಲಿ ಗೌರವಾನ್ವಿತ ವ್ಯಕ್ತಿಗಳು, ಹೈಫೈ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಾರ್ಪೊರೇಟರ್​ಗಳು ಹಾಗೂ ಸಿನಿಮಾ […]

‘ತನಿಖಾಧಿಕಾರಿ ಸಂದೀಪ್ ಪಾಟೀಲರನ್ನು ಬದಲಾಯಿಸಬೇಡಿ’

Updated on: Sep 09, 2020 | 4:37 PM

ಬೆಂಗಳೂರು: ಬೆಂಗಳೂರನ್ನು ಡ್ರಗ್ಸ್ ಜಾಲದಿಂದ ಮುಕ್ತಗೊಳಿಸುವಂತೆ ವಾಯ್ಸ್ ಆಫ್ ಪಬ್ಲಿಕ್ ಟೀಂ ಸದಸ್ಯರು ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಆಗ್ರಹ ಮಾಡಿದ್ದಾರೆ.

ವಕೀಲ ಅಮೃತೇಶ್ ನೇತೃತ್ವದಲ್ಲಿ ಸಿಸಿಬಿ ಕಚೇರಿ ಎದುರು ಫ್ಲೆಕ್ಸ್ ಹಿಡಿದು ಮನವಿ ಮಾಡಲಾಗಿದ್ದು, ಡ್ರಗ್ ಜಾಲ ಭೇದಿಸುವಲ್ಲಿ ಸಿಸಿಬಿ ಪ್ರಯತ್ನ ಯಶಸ್ವಿಯಾಗಲಿ. ಜೊತೆಗೆ ಈ ವಿಚಾರವಾಗಿ ರಾಜಕೀಯ ಮಾಡೋದು ಬೇಡ, ತನಿಖಾಧಿಕಾರಿ ಸಂದೀಪ್ ಪಾಟೀಲ್ ಅವರನ್ನು ಬದಲಾಯಿಸಬೇಡಿ ಎಂದಿದ್ದಾರೆ.

ಡ್ರಗ್ಸ್ ಜಾಲದಲ್ಲಿ ಗೌರವಾನ್ವಿತ ವ್ಯಕ್ತಿಗಳು, ಹೈಫೈ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಾರ್ಪೊರೇಟರ್​ಗಳು ಹಾಗೂ ಸಿನಿಮಾ ರಂಗದವರೂ ಇದ್ದಾರೆ. ಹಾಗಾಗಿ ಎಲ್ಲರೂ ತಪಾಸಣೆಗೆ ಒಳಗಾಗಬೇಕು, CCB ಅಧಿಕಾರಿಗಳ ತನಿಖೆಗೆ ಯಾವುದೇ ತೊಂದರೆ ಆಗೋದು ಬೇಡ ಎಂದು ಮನವಿ ಮಾಡಿದ್ದಾರೆ.