ಭಾರಿ ಮಳೆ: ಎತ್ತಿನ ಗಾಡಿಯಲ್ಲಿ ನದಿಯ ಪ್ರವಾಹಕ್ಕೆ ಸಿಲುಕಿದ್ದವರ ರಕ್ಷಣೆ

ಭಾರಿ ಮಳೆ: ಎತ್ತಿನ ಗಾಡಿಯಲ್ಲಿ ನದಿಯ ಪ್ರವಾಹಕ್ಕೆ ಸಿಲುಕಿದ್ದವರ ರಕ್ಷಣೆ

ವಿಜಯಪುರ: ಜಿಲ್ಲೆಯಲ್ಲಿ ‌ನಿನ್ನೆ‌ ರಾತ್ರಿ ಸುರಿದ ಮಳೆಗೆ ದೋಣಿ ನದಿ ತುಂಬಿ ಹರಿಯುತ್ತಿದ್ದು, ದೋಣಿ ನದಿಯ ಸೇತುವೆ ಮುಳುಗಡೆಯಾಗಿದೆ. ಆದರೆ ಮುಳುಗಿದ ಸೇತುವೆಯ ಮೇಲೆ ನದಿ ನೀರು ದಾಟಲು ಹೋದ ಎತ್ತಿನ ಬಂಡಿಯೊಂದು ನೀರಿನ ಪ್ರವಾಹಕ್ಕೆ ಸಿಲುಕಿ ಪರದಾಡಿರುವ ಘಟನೆ ತಾಳಿಕೋಟೆ ಪಟ್ಟಣದಲ್ಲಿ ನಡೆದಿದೆ.

ತುಂಬಿ ಹರಿಯುತ್ತಿರುವ ದೋಣಿ ನದಿ ಸೇತುವೆ ದಾಟಲು ಹೋದ ಎತ್ತಿನ ಬಂಡಿಯಲ್ಲಿದ್ದ ಮೂವರು ನೀರಿನ ಪ್ರವಾಹಕ್ಕೆ ಸಿಲುಕಿದ್ದಾರೆ. ಇದರಿಂದ ಕೆಲ ಕಾಲ ಭಯಗೊಂಡಿದ್ದ ಎತ್ತಿನ ಗಾಡಿಯಲ್ಲಿದ್ದ ಮೂವರನ್ನು ಸ್ಥಳಿಯ‌ ಜನರ ಸಹಾಯದಿಂದ ಹರ ಸಾಹಸ ಪಟ್ಟು ರಕ್ಷಿಸಲಾಗಿದೆ. ಇನ್ನು ಎತ್ತಿನ ಗಾಡಿಯಲ್ಲಿದ್ದವರು ಹಡಗಿನಾಳ ಗ್ರಾಮದಿಂದ ತಾಳಿಕೋಟೆ ಪಟ್ಟಣಕ್ಕೆ ಬರುತ್ತಿದ್ದರು ಎನ್ನಲಾಗಿದೆ.

Click on your DTH Provider to Add TV9 Kannada