ಅವಾಜ್​ ಹಾಕಿದ ಮಹಿಳೆ.. ಕೊನೆಗೆ ಸಚಿವರ ಜೇಬಿನಲ್ಲಿದ್ದ ಹಣ ತಗೊಂಡು ಸುಮ್ಮನಾದಳು!

ಅವಾಜ್​ ಹಾಕಿದ ಮಹಿಳೆ.. ಕೊನೆಗೆ ಸಚಿವರ ಜೇಬಿನಲ್ಲಿದ್ದ ಹಣ ತಗೊಂಡು ಸುಮ್ಮನಾದಳು!

ಬೆಂಗಳೂರು: ಹಣ ಎಂತಹವರನ್ನೂ ಕ್ಷಣ ಮಾತ್ರದಲ್ಲಿ ಬದಲಿಸಿ ಬಿಡುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಪ್ರತ್ಯಕ್ಷ ಘಟನೆಯೊಂದು ಬೆಂಗಳೂರಿನ ಸಾಯಿಬಾಬಾ ಲೇಔಟ್​ನಲ್ಲಿ ನಡೆದಿದೆ.

ಬೆಂಗಳೂರಿನಲ್ಲಿ ಭಾರಿ ಮಳೆಯಿಂದಾಗಿ ಕೆಲವು ನಗರದ ನಿವಾಸಿಗಳು ಸಂಕಷ್ಟಕ್ಕಿಡಾಗಿದ್ದಾರೆ. ಹೀಗಾಗಿ ಇಂದು ಸಚಿವ ಭೈರತಿ ಬಸವರಾಜು ಹಾನಿಗೊಳಗಾದ ನಗರಗಳಿಗೆ ಭೇಟಿ ನೀಡಿದ್ದರು. ಈ ವೇಳೆ ಸಾಯಿಬಾಬಾ ಲೇಔಟ್ ನಿವಾಸಿಯಾಗಿರುವ ಮಹಿಳೆಯೊಬ್ಬರು ರೋಷಾವೇಶದಲ್ಲಿ ನಮ್ಮ ಸಮಸ್ಯೆ ಯಾರು ಬಗಹರಿಸಬೇಕು? ಅಂತಾ ಸಚಿವರನ್ನು ಪ್ರಶ್ನೆ ಮಾಡಿದ್ದಾಳೆ.

ಆ ಸಮಯದಲ್ಲಿ ಮಹಿಳೆಯ ಸಮಸ್ಯೆಯನ್ನು ಸಮಾಧಾನವಾಗಿಯೇ ಆಲಿಸಿದ ಸಚಿವ ಭೈರತಿ ಬಸವರಾಜು, ತಮ್ಮ ಜೇಬಿನಲ್ಲಿದ್ದ ಐನೂರು ರುಪಾಯಿಯ ಹತ್ತು ಹದಿನೈದು ನೋಟುಗಳನ್ನು ಮಹಿಳೆಗೆ ನೀಡಿದ್ದಾರೆ. ಹಣ ನೋಡಿದ ಕೂಡಲೇ ಸೈಲೆಂಟ್​ ಆದ ಮಹಿಳೆ ತನ್ನ ರೋಷಾವೇಶವನ್ನೆಲ್ಲಾ ಮರೆತು, ದೇವರು ನಿಮ್ಮನ್ನು ಚೆನ್ನಾಗಿಡಲಿ ಅಂತ ಸಚಿವರಿಗೆ ಹರಸಿ, ಅಲ್ಲಿಂದ ಖುಷಿಯಲ್ಲಿ ಮನೆಗೆ ತೆರಳಿದ್ದಾಳೆ.

Click on your DTH Provider to Add TV9 Kannada