ಬೆಂಗಳೂರು ಪೂರ್ವ ವಲಯ ಅಧಿಕಾರಿಗಳ ತುರ್ತು ಸಭೆ ಕರೆದ ಸಚಿವ ಸೋಮಣ್ಣ

ಬೆಂಗಳೂರು: ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ಒಬ್ಬಬ್ಬ ಸಚಿವರನ್ನು ನೇಮಿಸಿದ ಬೆನ್ನಲ್ಲೇ ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವ ವಿ ಸೋಮಣ್ಣ ತಮ್ಮ ನೇಮಕವಾಗುತ್ತಿದ್ದಂತೆ ತಕ್ಷಣವೇ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ವಸಂತನಗರದಲ್ಲಿ ನಡೆಯುತ್ತಿರುವ ಈ ಪೋರ್ವ ವಲಯದ ಸಭೆಗೆ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳು, ಕಾರ್ಪೋರೇಟರ್‌ಗಳನ್ನು ಆಹ್ವಾನಿಸಲಾಗಿದೆ. ಉಸ್ತುವಾರಿ ಸಚಿವರ ಜೊತೆಗೆ ಎಂಟು ಜನ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಕೂಡಾ ವಲಯ ಸಂಯೋಜಕರಾಗಿ ಸರ್ಕಾರ ನೇಮಿಸಿದ್ದು ವಿವರ […]

ಬೆಂಗಳೂರು ಪೂರ್ವ ವಲಯ ಅಧಿಕಾರಿಗಳ ತುರ್ತು ಸಭೆ ಕರೆದ ಸಚಿವ ಸೋಮಣ್ಣ
Guru

| Edited By:

Jul 09, 2020 | 8:31 PM

ಬೆಂಗಳೂರು: ಕೊರೊನಾ ನಿಯಂತ್ರಿಸಲು ಇನ್ನಿಲ್ಲದ ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ಒಬ್ಬಬ್ಬ ಸಚಿವರನ್ನು ನೇಮಿಸಿದ ಬೆನ್ನಲ್ಲೇ ಬೆಂಗಳೂರು ಪೂರ್ವ ವಲಯದ ಉಸ್ತುವಾರಿ ಸಚಿವ ವಿ ಸೋಮಣ್ಣ ತಮ್ಮ ನೇಮಕವಾಗುತ್ತಿದ್ದಂತೆ ತಕ್ಷಣವೇ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ. ವಸಂತನಗರದಲ್ಲಿ ನಡೆಯುತ್ತಿರುವ ಈ ಪೋರ್ವ ವಲಯದ ಸಭೆಗೆ ಬಿಬಿಎಂಪಿ ಪೂರ್ವವಲಯದ ಅಧಿಕಾರಿಗಳು, ಕಾರ್ಪೋರೇಟರ್‌ಗಳನ್ನು ಆಹ್ವಾನಿಸಲಾಗಿದೆ.

ಉಸ್ತುವಾರಿ ಸಚಿವರ ಜೊತೆಗೆ ಎಂಟು ಜನ ಹಿರಿಯ ಐಎಎಸ್‌ ಅಧಿಕಾರಿಗಳನ್ನು ಕೂಡಾ ವಲಯ ಸಂಯೋಜಕರಾಗಿ ಸರ್ಕಾರ ನೇಮಿಸಿದ್ದು ವಿವರ ಹೀಗಿದೆ. ಬೆಂಗಳೂರು ಪೂರ್ವ ವಲಯ ಸಂಯೋಜಕರಾಗಿ ತುಷಾರ್‌ ಗಿರಿನಾಥ್‌, ಬೆಂಗಳೂರು ಪಶ್ಚಿಮ ವಲಯ ಸಂಯೋಜಕರಾಗಿ ರಾಜೇಂದ್ರ ಕುಮಾರ್‌ ಕಠಾರಿಯಾ, ಬೆಂಗಳೂರು ದಕ್ಷಿಣ ವಲಯ ಸಂಯೋಜಕರಾಗಿ ಮುನಿಷ್‌ ಮೌದ್ಗಿಲ್‌, ಬೊಮ್ಮನಹಳ್ಳಿ ವಲಯ ಸಂಯೋಜಕರಾಗಿ ಕ್ಯಾ. ಪಿ ಮಣಿವಣ್ಣನ್‌, ಯಲಹಂಕ ವಲಯ ಸಂಯೋಜಕರಾಗಿ ನವೀನ್‌ರಾಜ್‌ ಸಿಂಗ್‌, ಮಹದೇವಪುರ ವಲಯ ಸಂಯೋಜಕರಾಗಿ ಡಾ. ಎನ್‌ ಮಂಜುಳ, ದಾಸರಹಳ್ಳಿ ವಲಯ ಸಂಯೋಜಕರಾಗಿ ಪಿಸಿ ಜಾಫರ್‌ ಹಾಗೂ ರಾಜರಾಜೇಶ್ವರಿನಗರ ವಲಯ ಸಂಯೋಜಕರಾಗಿ ಡಾ. ಆರ್‌ ವಿಶಾಲ್‌ ಅವರನ್ನ ನೇಮಿಸಲಾಗಿದೆ.

ಈ ಅಧಿಕಾರಿಗಳು ತಮ್ಮ ತಮ್ಮ ವಲಯಗಳ ಅಪ್‌ಟುಡೇಟ್‌ ಮಾಹಿತಿಯನ್ನ ಬಿಬಿಎಪಿ ಕಮಿಷನರ್‌ ಅನಿಲ್‌ಕುಮಾರ್‌ಗೆ ನೀಡಬೇಕು. ಹಾಗೇನೇ ಉಸ್ತುವಾರಿ ಸಚಿವರಿಗೂ ನೀಡಬೇಕು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada