‘ತಲಕಾವೇರಿಯಲ್ಲಿ ಪೂಜೆ ಜವಾಬ್ದಾರಿ ನಮಗೇ ಬೇಕೆಂಬ ಹಠ ನಮ್ಮಲ್ಲಿ ಇಲ್ಲ’
ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಪೂಜೆ ವಿಚಾರದಲ್ಲಿ ಮೊದಲ ಬಾರಿಗೆ ಅರ್ಚಕ ಮನೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೊಡವ, ಅಮ್ಮ ಕೊಡವು ಸಮುದಾಯವನ್ನು ಗೌರವಿಸ್ತೇವೆ. ನಾವು ತಲಕಾವೇರಿಯಲ್ಲಿ ಪೂಜೆ ಸಲ್ಲಿಸ್ತಿರುವುದಕ್ಕೆ ದಾಖಲೆ ಇದೆ. ನಮ್ಮ ವಿರುದ್ಧ ಆಕ್ಷೇಪ ಎತ್ತಿದವರ ಬಳಿ ದಾಖಲೆ ಇದೆಯಾ? ಅವರ ಬಳಿ ದಾಖಲೆಗಳು ಇದ್ದರೆ ನೀಡಲಿ ಎಂದ ಅರ್ಚಕರು ಸೂಕ್ಷ್ಮವಾಗಿ ಹೇಳಿದ್ದಾರೆ. ಈ ಬಗ್ಗೆ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗುತ್ತೇವೆ. ಶತಮಾನದ ಹಿಂದೆ ನಮ್ಮನ್ನು ಕರೆಸಿ […]

ಮಡಿಕೇರಿ: ಕೊಡಗು ಜಿಲ್ಲೆ ತಲಕಾವೇರಿಯಲ್ಲಿ ಪೂಜೆ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿ ಪೂಜೆ ವಿಚಾರದಲ್ಲಿ ಮೊದಲ ಬಾರಿಗೆ ಅರ್ಚಕ ಮನೆಯವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಕೊಡವ, ಅಮ್ಮ ಕೊಡವು ಸಮುದಾಯವನ್ನು ಗೌರವಿಸ್ತೇವೆ. ನಾವು ತಲಕಾವೇರಿಯಲ್ಲಿ ಪೂಜೆ ಸಲ್ಲಿಸ್ತಿರುವುದಕ್ಕೆ ದಾಖಲೆ ಇದೆ. ನಮ್ಮ ವಿರುದ್ಧ ಆಕ್ಷೇಪ ಎತ್ತಿದವರ ಬಳಿ ದಾಖಲೆ ಇದೆಯಾ? ಅವರ ಬಳಿ ದಾಖಲೆಗಳು ಇದ್ದರೆ ನೀಡಲಿ ಎಂದ ಅರ್ಚಕರು ಸೂಕ್ಷ್ಮವಾಗಿ ಹೇಳಿದ್ದಾರೆ.
ಈ ಬಗ್ಗೆ ಸರ್ಕಾರ ಕೈಗೊಳ್ಳುವ ತೀರ್ಮಾನಕ್ಕೆ ಬದ್ಧರಾಗುತ್ತೇವೆ. ಶತಮಾನದ ಹಿಂದೆ ನಮ್ಮನ್ನು ಕರೆಸಿ ಅವಕಾಶ ಕೊಡಲಾಗಿತ್ತು. ಅದನ್ನ ಮುಂದುವರೆಸಿಕೊಂಡು ಬರುತ್ತಿದ್ದೇವೆ. ನಮಗೇ ಜವಾಬ್ದಾರಿ ಬೇಕೆಂಬ ಹಠ ನಮ್ಮಲ್ಲಿ ಇಲ್ಲ ಎಂದು ಅರ್ಚಕ ಕುಟುಂಬದ ವಕ್ತಾರ ಜಯಪ್ರಕಾಶ್ ರಾವ್ ಹೇಳಿದ್ದಾರೆ.
ಕೆಲ ದಿನಗಳ ಹಿಂದೆ ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿದಿತ್ತು. ಈ ವೇಳೆ ಬೆಟ್ಟದ ತಪ್ಪಲಲ್ಲೇ ವಾಸವಿದ್ದ ತಲಕಾವೇರಿ ದೇಗುಲದ ಪ್ರಧಾನ ಅರ್ಚಕರಾದ ನಾರಾಯಣಾಚಾರ್ ಅವರ ಕುಟುಂಬದ ಐದು ಮಂದಿ ಭೂಕುಸಿತದ ಘಟನೆಯಲ್ಲಿ ನಾಪತ್ತೆಯಾಗಿದ್ದರು. ಅಲ್ಲಿಂದೀಚೆಗೆ ತಲಕಾವೇರಿಯಲ್ಲಿ ಪೂಜೆ ಮಾಡುವ ಬಗ್ಗೆ ಗೊಂದಲಗಳು ಶುರುವಾಗಿವೆ.
Published On - 2:27 pm, Mon, 31 August 20