ದಾವಣಗೆರೆಗೆ ಬಂದು ಉಚಿತವಾಗಿ 2 ಕುದುರೆ ತೆಗೆದುಕೊಂಡು ಹೋದ ದರ್ಶನ್! ಕೊಟ್ಟವರು ಯಾರು?
ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ. ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು. ಲಾಕ್ ಡೌನ್ […]

ದಾವಣಗೆರೆ: ಮೊದಲಿನಿಂದಲೂ ಕುದುರೆಗಳ ಮೇಲೆ ಅತೀವ ಪ್ರೀತಿ ಇಟ್ಟುಕೊಂಡಿರುವ ನಟ ದರ್ಶನ್ಗೆ, ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಉಚಿತವಾಗಿ ನೀಡಿದ್ದಾರೆ.
ಮಾಜಿ ಸಚಿವ ಮಲ್ಲಿಕಾರ್ಜುನ ದಾವಣಗೆರೆ ನಗರದ ಕಲ್ಲೇಶ್ವರ ರೈಸ್ ಮಿಲ್ ಬಳಿ ಕುದುರೆ ಸಾಕಿದ್ದಾರೆ. ವಿಚಾರ ತಿಳಿದ ನಟ ದರ್ಶನ್ ಇಂದು ದಾವಣಗೆರೆಗೆ ಭೇಟಿ ನೀಡಿ, ಎಸ್ ಎಸ್ ಮಲ್ಲಿಕಾರ್ಜುನ ಅವರಿಂದ ವಿದೇಶಿ ತಳಿಯ ಭಾರೀ ಬೆಲೆಬಾಳುವ ಎರಡು ಕುದುರೆಗಳನ್ನ ಉಡುಗೂರೆಯಾಗಿ ಪಡೆದುಕೊಂಡರು.
ಲಾಕ್ ಡೌನ್ ಆದ ಬಳಿಕ ಕೆಲಸ ಇಲ್ಲವಾಗಿದೆ. ಅದಕ್ಕೇ ಕುರಿ, ಕೋಳಿ, ಕುದುರೆ ಸಾಕ್ತಾ ಇದ್ದೇನೆ. ಎಸ್ ಎಸ್ ಮಲ್ಲಿಕಾರ್ಜುನ ಉತ್ತಮ ತಳಿಯ ಕುದುರೆ ಸಾಕಿದ್ದಾರೆ ಎಂಬ ಮಾಹಿತಿ ಇತ್ತು. ಇದೇ ವಿಚಾರಕ್ಕೆ ಪೋನ್ ಮಾಡಿದ್ದೆ. ಬನ್ನಿ ತಗೊಂಡು ಹೋಗಿ ಎಂದು ಮಲ್ಲಿಕಾರ್ಜುನ ಹೇಳಿದ್ದರು. ಹೀಗಾಗಿ ಇಂದು ಕುದುರೆಗಳನ್ನ ತೆಗೆದುಕೊಂಡು ಹೋಗುತ್ತಿರುವೆ ಎಂದು ದರ್ಶನ್ ಹೇಳಿದರು.
ಕುದುರೆಗಳ ಬೆಲೆಯ ಬಗ್ಗೆ ದರ್ಶನ್ ಪ್ರತಿಕ್ರಿಯಿಸಿದ್ದು ಹೀಗೆ.. ಇನ್ನು ಕುದುರೆಗಳ ಬೆಲೆ ಕೇಳಿದ ಪತ್ರಕರ್ತರಿಗೆ, ಎಸ್ ಎಸ್ ಮಲ್ಲಿಕಾರ್ಜುನ ಅಂತವರಿಗೆ ನಾವು ಹಣ ಕೊಡಕ್ಕೆ ಆಗುತ್ತಾ ಎಂದು ನಟ ದರ್ಶನ್ ತಮಾಷೆಯ ಉತ್ತರ ನೀಡಿದರು.
ಜಸ್ಟ್ ಸ್ಮೈಲ್ ಮಾಡಿ ನಿರ್ಗಮಿಸಿದರು! ಇದೇ ಸಂದರ್ಭದಲ್ಲಿ, ಪದೇ ಪದೇ ಕಾಂಗ್ರೆಸ್ ಯುವ ನಾಯಕರನ್ನು ಭೇಟಿ ಮಾಡುತ್ತಿದ್ದೀರಿ! ಹೀಗಾಗಿ ನೀವು ಕಾಂಗ್ರೆಸ್ ಸೇರುತ್ತಿರಾ? ಎಂದು ಪತ್ರಕರ್ತರು ಪ್ರಶ್ನೆ ಮಾಡಿದಾಗ, ದರ್ಶನ್ ಜಸ್ಟ್ ಒಂದು ಸ್ಮೈಲ್ ನೀಡಿ ಅಲ್ಲಿಂದ ನಿರ್ಗಮಿಸಿದ್ದಾರೆ.
Published On - 2:31 pm, Mon, 31 August 20