WhatsApp Message ನೋಡಿ ಈ ಯುವಕರು ಮಾಡಿರುವ ಕೆಲಸ ನಿಜಕ್ಕೂ ಮಾದರಿಯಾಗಿದೆ!

|

Updated on: Jun 06, 2020 | 4:17 PM

ಮೈಸೂರು: ವಾಟ್ಸಾಪ್ ಗ್ರೂಪ್ ಗೆಳೆಯರೆಂದ್ರೆ ಅದರಲ್ಲಿ ಕೆಲಸಕ್ಕೆ ಬಾರದ ವಿಚಾರಗಳನ್ನ ಶೇರ್ ಮಾಡ್ತಾ ಕಾಲ ಕಳೆಯುವ ಮಂದಿ ಅನ್ನೋ ಮಾತು ಹೆಚ್ಚು ಚಾಲ್ತಿಯಲ್ಲಿದೆ. ಆದರೆ ವಾಟ್ಸಾಪ್ ಗ್ರೂಪ್ ನಲ್ಲಿ ಬಂದ ಮೆಸೇಜ್ ನೋಡಿ ಮೈಸೂರಿನ ಯುವಕರು ಮಾಡಿದ ಕಾರ್ಯ ನಿಜಕ್ಕೂ ಮಾದರಿಯಾಗಿದೆ. ಮೈಸೂರಿನ ಮೃಗಾಲಯ ಸಂಕಷ್ಟದಲ್ಲಿದೆ ನೆರವಾಗಿ ಅಂತ ಗ್ರೂಪ್ ನ ಸದಸ್ಯರೊಬ್ಬರು ಮೆಸೇಜ್ ಶೇರ್ ಮಾಡಿದ್ದೆ ತಡ ಗ್ರೂಪ್ ಸದಸ್ಯರೆಲ್ಲ ಸೇರಿ ಚಿರತೆ ಸೇರಿ‌ ಮೂರ್ನಾಲ್ಕು ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಆ ಮೆಸೇಜ್ […]

WhatsApp Message ನೋಡಿ ಈ ಯುವಕರು ಮಾಡಿರುವ ಕೆಲಸ ನಿಜಕ್ಕೂ ಮಾದರಿಯಾಗಿದೆ!
Follow us on

ಮೈಸೂರು: ವಾಟ್ಸಾಪ್ ಗ್ರೂಪ್ ಗೆಳೆಯರೆಂದ್ರೆ ಅದರಲ್ಲಿ ಕೆಲಸಕ್ಕೆ ಬಾರದ ವಿಚಾರಗಳನ್ನ ಶೇರ್ ಮಾಡ್ತಾ ಕಾಲ ಕಳೆಯುವ ಮಂದಿ ಅನ್ನೋ ಮಾತು ಹೆಚ್ಚು ಚಾಲ್ತಿಯಲ್ಲಿದೆ. ಆದರೆ ವಾಟ್ಸಾಪ್ ಗ್ರೂಪ್ ನಲ್ಲಿ ಬಂದ ಮೆಸೇಜ್ ನೋಡಿ ಮೈಸೂರಿನ ಯುವಕರು ಮಾಡಿದ ಕಾರ್ಯ ನಿಜಕ್ಕೂ ಮಾದರಿಯಾಗಿದೆ.

ಮೈಸೂರಿನ ಮೃಗಾಲಯ ಸಂಕಷ್ಟದಲ್ಲಿದೆ ನೆರವಾಗಿ ಅಂತ ಗ್ರೂಪ್ ನ ಸದಸ್ಯರೊಬ್ಬರು ಮೆಸೇಜ್ ಶೇರ್ ಮಾಡಿದ್ದೆ ತಡ ಗ್ರೂಪ್ ಸದಸ್ಯರೆಲ್ಲ ಸೇರಿ ಚಿರತೆ ಸೇರಿ‌ ಮೂರ್ನಾಲ್ಕು ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಅಷ್ಟೆ ಅಲ್ಲದೆ ಆ ಮೆಸೇಜ್ ನ್ನು ಇತರ ಗ್ರೂಪ್ ಗಳಿಗೂ ಕಳುಹಿಸಿ ಬೇರೆಯವರೂ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳಲು ಸ್ಪೂರ್ತಿಯಾಗಿದ್ದಾರೆ.

ಮೈಸೂರಿನ ರಂಗಭೂಮಿ ಯುವ ಕಲಾವಿದರು ಹಾಗೂ ಸಮಾನ ಮನಸ್ಕರು ಸೇರಿ ಮಾಡಿರುವ ಕಲಾ ಬಾಯ್ಸ್ ಗ್ರೂಪ್ ನಲ್ಲಿ ಮೊದಲಿಗೆ ಮೆಸೇಜ್ ಬಂದಿದೆ. ಇದನ್ನ ಗ್ರೂಪ್ ನ ಸದಸ್ಯರು ಪ್ರಾಣಿ ದತ್ತು ತೆಗೆದುಕೊಳ್ಳಲು ತೀರ್ಮಾನಿಸಿದ ನಂತರ ಮತ್ತೆ ಆ ಮೆಸೇಜ್ ನ್ನ ಬೇರೆ ಗ್ರೂಪ್ ಗಳಿಗೆ ಫಾರ್ವಡ್ ಮಾಡಿದ್ದಾರೆ.

ಆ ಗ್ರೂಪ್ ನ ಸದಸ್ಯರು ಸ್ಪೂರ್ತಿ ಪಡೆದು ಧ್ವಜ ಸಿನಿಮಾ ನಾಯಕ ನಟ ಹಾಗೂ ಅವರ ಸ್ನೇಹಿತರೆಲ್ಲ ಸೇರಿ ಚಿರತೆ, ಅನಕೊಂಡ, ರಿಂಗ್ ಟೇಲ್ಡ್ ಲೆಮೂರ್ ಪ್ರಾಣಿಗಳನ್ನ ದತ್ತು ತೆಗೆದುಕೊಂಡಿದ್ದಾರೆ. ಕೇವಲ ಹರಟೆ ಪಾರ್ಟಿಗಳಿಗೆ ಒಟ್ಟಿಗೆ ಸೇರುವುದಕಷ್ಟೆ ಸೀಮಿತವಾಗಿದ್ದ ವಾಟ್ಸ್ ಆಫ್ ಗ್ರೂಪ್ ಪ್ರಾಣಿಗಳನ್ನ ದತ್ತು ತೆಗೆದುಕೊಳ್ಳುವ ಮೂಲಕ ಉಪಯುಕ್ತವಾಗಿದೆ.

ನೀವೂ ಪ್ರಾಣಿ ದತ್ತು ತೆಗೆದುಕೊಳ್ಳಬಹುದು..
ಲಾಕ್ ಡೌನ್ ಸಂದರ್ಭದಲ್ಲಿ ಮೈಸೂರು ಮೃಗಾಲಯ ತೀರ ಸಂಕಷ್ಟಕ್ಕೆ ಸಿಲುಕಿತ್ತು. ಮೃಗಾಲಯ ನಿರ್ವಹಣೆಗೆ ಪ್ರತಿ ತಿಂಗಳು ಎರಡು ಕೋಟಿ ಹಣ ಬೇಕಿತ್ತು. ಇಂತಹ ಸಂದರ್ಭದಲ್ಲಿ‌ ಸಾಕಷ್ಟು ಜನರು ಪ್ರಾಣಿಗಳನ್ನ ದತ್ತು ತೆಗೆದುಕೊಂಡರು. ಮೊದಲಿನಿಂದಲೂ ಮೃಗಾಲಯ ದತ್ತು ತೆಗೆದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ಸಾರ್ವಜನಿಕರು ಮೃಗಾಲಯದಲ್ಲಿರುವ ತಮಗಿಷ್ಟದ ಪ್ರಾಣಿಗಳನ್ನು ತೆಗೆದುಕೊಳ್ಳಬಹುದಾಗಿದೆ. ಇದರಲ್ಲಿ 1 ಸಾವಿರದಿಂದ 1 ಲಕ್ಷದ 75 ಸಾವಿರದವರೆಗು ಪ್ರಾಣಿಗಳ ದತ್ತು ತೆಗೆದುಕೊಳ್ಳಬಹುದು. ಒಂದು ಸಾವಿರ ರೂಪಾಯಿಗಳಿಗೆಲ್ಲ ಲವ್ ಬರ್ಡ್ಸ್ ಮಾದರಿಯ ಸಣ್ಣ ಪಕ್ಷಿಗಳು, 35 ಸಾವಿರಕ್ಕೆ ಚಿರತೆ, 1 ಲಕ್ಷಕ್ಕೆ ಹುಲಿ, 1.75 ಲಕ್ಷಕ್ಕೆ ಆನೆಯನ್ನು ಒಂದು ವರ್ಷಕ್ಕೆ ದತ್ತು ತೆಗೆದುಕೊಳ್ಳಬಹುದು.
-ದಿಲೀಪ್ ಚೌಡಹಳ್ಳಿ

Published On - 4:16 pm, Sat, 6 June 20