ಟೆಕ್ಕಿಗಳು ವಿಚ್ಛೇದನ ಪಡೆಯುತ್ತಿದ್ದಂತೆ ಕೋರ್ಟ್ ಅವರಣದಲ್ಲೇ ಪತಿಯ ಕಾರಿನ ಗ್ಲಾಸ್ ಪೀಸ್ ಪೀಸ್..

ನೆಲಮಂಗಲ: ಪ್ರಿಯಾಂಕಾ ಹಾಗೂ ಶರತ್ ಇಬ್ಬರೂ ಪರಸ್ಪರ ಪ್ರೀತಿಸಿ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದ ಟೆಕ್ಕಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಹಿನ್ನೆಲೆಯಲ್ಲಿ ನಿನ್ನೆ ಪತಿಯೊಂದಿಗೆ ವಿಚ್ಛೇದನ ಪಡೆದ ಪತ್ನಿಯು ಕೋರ್ಟ್ ಆವರಣದಲ್ಲೇ ಪತಿಯ ಕಾರಿನ ಗಾಜು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ನೊಂದ ಪತಿರಾಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನೆಲಮಂಗಲದ ಸುಭಾಷ್‌ನಗರದ ಯುವತಿಯೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರು […]

ಟೆಕ್ಕಿಗಳು ವಿಚ್ಛೇದನ ಪಡೆಯುತ್ತಿದ್ದಂತೆ ಕೋರ್ಟ್ ಅವರಣದಲ್ಲೇ ಪತಿಯ ಕಾರಿನ ಗ್ಲಾಸ್ ಪೀಸ್ ಪೀಸ್..
Updated By: ಸಾಧು ಶ್ರೀನಾಥ್​

Updated on: Sep 08, 2020 | 12:30 PM

ನೆಲಮಂಗಲ: ಪ್ರಿಯಾಂಕಾ ಹಾಗೂ ಶರತ್ ಇಬ್ಬರೂ ಪರಸ್ಪರ ಪ್ರೀತಿಸಿ 2018ರಲ್ಲಿ ಮದುವೆಯಾಗಿದ್ದರು. ಮದುವೆಯಾಗಿದ್ದ ಟೆಕ್ಕಿಗಳ ದಾಂಪತ್ಯ ಜೀವನದಲ್ಲಿ ಬಿರುಕು ಹಿನ್ನೆಲೆಯಲ್ಲಿ ನಿನ್ನೆ ಪತಿಯೊಂದಿಗೆ ವಿಚ್ಛೇದನ ಪಡೆದ ಪತ್ನಿಯು ಕೋರ್ಟ್ ಆವರಣದಲ್ಲೇ ಪತಿಯ ಕಾರಿನ ಗಾಜು ಪುಡಿ ಪುಡಿ ಮಾಡಿರುವ ಘಟನೆ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲದ ಕೋರ್ಟ್ ಅವರಣದಲ್ಲಿ ಈ ಘಟನೆ ನಡೆದಿದ್ದು, ನೊಂದ ಪತಿರಾಯ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನೆಲಮಂಗಲದ ಸುಭಾಷ್‌ನಗರದ ಯುವತಿಯೊಂದಿಗೆ ಕಳೆದ ಎರಡು ವರ್ಷಗಳ ಹಿಂದೆ ತುಮಕೂರು ಜಿಲ್ಲೆ ತಿಪಟೂರು ಮೂಲದ ಶರತ್ ಎನ್ನುವ ವ್ಯಕ್ತಿಯೊಂದಿಗೆ ಮದುವೆಯಾಗಿತ್ತು. ಸಂಸಾರದಲ್ಲಿ ಸರಿಹೊಂದದ ಕಾರಣ ಇಬ್ಬರು ಇಚ್ಚಿಸಿ ನೆಲಮಂಗಲದ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.

ನಿನ್ನೆ ಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥದ ಬಳಿಕ ಪತ್ನಿ ಕೋರ್ಟ್ ಆವರಣದಲ್ಲೇ ನಿಂತಿದ್ದ ತನ್ನ ಪತಿಯ ಕಾರಿನ ಗಾಜನ್ನು ಪುಡಿ ಮಾಡಿದ್ದಾಳೆ. ಹೆಂಡತಿಯಿಂದ ಬಿಡುಗಡೆಯಾದರೂ ‘ಮುಕ್ತಿ’ ಸಿಕ್ಕಿಲ್ಲವೆಂದು, ರಾಮೇಶ್ವರಕ್ಕೆ ಹೋದ್ರು ಶನೇಶ್ವರನ ಕಾಟ ತಪ್ಪಲಿಲ್ಲ ಅನ್ನೋ ಗಾದೆ ಮಾತಿನಂತೆ ನೊಂದ ಪತಿ ನ್ಯಾಯಕ್ಕಾಗಿ ನೆಲಮಂಗಲ ಟೌನ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ನೆಲಮಂಗಲ ಟೌನ್ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.