ಜಮೀನಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಐವರ ರಕ್ಷಣೆ, ಬೆಣ್ಣಿಹಳ್ಳದಲ್ಲಿ NDRF ಕಾರ್ಯಾಚರಣೆ
ಧಾರವಾಡ: ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಐವರನ್ನು NDRF ತಂಡ ರಕ್ಷಿಸಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಬಳಿ ಪ್ರವಾಹ ಸಂಭವಿಸಿದ್ದು, ರಾತ್ರಿಯಿಡೀ ನೀರಿನ ಮಧ್ಯೆಯೇ ಕಾದು ಕುಳಿತಿದ್ದವರ ಜೀವವನ್ನು ರಕ್ಷಿಸಲಾಗಿದೆ. ನಿನ್ನೆ ಜಮೀನಿಗೆ ಹೋದಾಗ ಪ್ರವಾಹದಿಂದಾಗಿ ನೀರು ಸುತ್ತುವರೆದಿತ್ತು. ಹೀಗಾಗಿ ರಾತ್ರಿ ಪೂರ್ತಿ ನೀರಿನಲ್ಲೆ ಸಮಯ ಕಳೆಯುವಂತ ಪರಿಸ್ಥಿತಿ ಎದುರಾಗಿತ್ತು. ಕಲ್ಲಪ್ಪ ಹಡಪದ, ನವೀನ ಹಡಪದ, ರವಿ, ಚನ್ನವ್ವ ಮತ್ತು ಶೇಖವ್ವ ಪ್ರವಾಹಕ್ಕೆ ಸಿಲುಕಿ ನಿನ್ನೆಯಿಂದ ನೀರಿನ ಮಧ್ಯೆಯೇ ರಾತ್ರಿಯಿಡಿ ಕೂಗಿ ಕೂಗಿ ಜನರನ್ನು ಕರೆದಿದ್ದಾರೆ. […]

ಧಾರವಾಡ: ಬೆಣ್ಣಿಹಳ್ಳದ ಪ್ರವಾಹಕ್ಕೆ ಸಿಲುಕಿದ್ದ ಐವರನ್ನು NDRF ತಂಡ ರಕ್ಷಿಸಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಸೊಟಕನಾಳ ಬಳಿ ಪ್ರವಾಹ ಸಂಭವಿಸಿದ್ದು, ರಾತ್ರಿಯಿಡೀ ನೀರಿನ ಮಧ್ಯೆಯೇ ಕಾದು ಕುಳಿತಿದ್ದವರ ಜೀವವನ್ನು ರಕ್ಷಿಸಲಾಗಿದೆ. ನಿನ್ನೆ ಜಮೀನಿಗೆ ಹೋದಾಗ ಪ್ರವಾಹದಿಂದಾಗಿ ನೀರು ಸುತ್ತುವರೆದಿತ್ತು. ಹೀಗಾಗಿ ರಾತ್ರಿ ಪೂರ್ತಿ ನೀರಿನಲ್ಲೆ ಸಮಯ ಕಳೆಯುವಂತ ಪರಿಸ್ಥಿತಿ ಎದುರಾಗಿತ್ತು.
ಕಲ್ಲಪ್ಪ ಹಡಪದ, ನವೀನ ಹಡಪದ, ರವಿ, ಚನ್ನವ್ವ ಮತ್ತು ಶೇಖವ್ವ ಪ್ರವಾಹಕ್ಕೆ ಸಿಲುಕಿ ನಿನ್ನೆಯಿಂದ ನೀರಿನ ಮಧ್ಯೆಯೇ ರಾತ್ರಿಯಿಡಿ ಕೂಗಿ ಕೂಗಿ ಜನರನ್ನು ಕರೆದಿದ್ದಾರೆ. ಆದರೆ ಬೆಳಗ್ಗೆ ಧ್ವನಿ ಕೇಳಿ ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ವಿಷಯ ಮುಟ್ಟಿಸಿ ಐವರನ್ನು ರಕ್ಷಿಸಿದ್ದಾರೆ.