ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ: CCB ಮುಖ್ಯಸ್ಥ ಸಂದೀಪ್​ ಪಾಟೀಲ್

  • Updated On - 1:50 pm, Tue, 8 September 20
ವಿರೇನ್ ಖನ್ನಾ ಮನೆಯಲ್ಲಿ ಪೊಲೀಸ್ ಸಮವಸ್ತ್ರ ಪತ್ತೆ: CCB ಮುಖ್ಯಸ್ಥ ಸಂದೀಪ್​ ಪಾಟೀಲ್

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಆರೋಪಿ ವಿರೇನ್​ ಖನ್ನಾ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದರು. ಈ ವೇಳೆ ವಿರೇನ್​ ಖನ್ನಾ ಮನೆಯಲ್ಲಿ ನಕಲಿ ಪೊಲೀಸ್ ಸಮವಸ್ತ್ರ ಪತ್ತೆಯಾಗಿದೆ. ಈ ಬಗ್ಗೆ ಬೆಂಗಳೂರಿನಲ್ಲಿ ಸಿಸಿಬಿ ಮುಖ್ಯಸ್ಥ ಸಂದೀಪ್​ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಕೋರ್ಟ್​ನಿಂದ ವಾರಂಟ್​ ಪಡೆದು 2 ಕಡೆ ದಾಳಿ ನಡೆಸಿದ್ದೇವೆ. ವಿರೇನ್​ ಖನ್ನಾ ಮನೆ ಮೇಲೂ ದಾಳಿ ನಡೆಸಿ ಶೋಧಿಸಿದ್ದಾರೆ. ಸಿಸಿಬಿ ಅಧಿಕಾರಿಗಳ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ. ರಿಚ್ಮಂಡ್ ಟೌನ್​ನ ಲ್ಯಾಂಗ್​ಫೋರ್ಡ್​ ರಸ್ತೆಯಲ್ಲಿರುವ ಖನ್ನಾ ಮನೆಯಲ್ಲಿ ನಕಲಿ ಪೊಲೀಸ್ ಸಮವಸ್ತ್ರ ಪತ್ತೆಯಾಗಿದೆ.

ಯಾವ ಕಾರಣಕ್ಕೆ ಅವರ ಮನೆಯಲ್ಲಿ ಅದನ್ನು ಇಟ್ಟಿದ್ದರು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ಮಾಡಬೇಕಾಗಿದೆ. ಖನ್ನಾ ಮನೆಯಲ್ಲಿ ಸಾಕಷ್ಟು ವಸ್ತುಗಳು ಪತ್ತೆಯಾಗಿವೆ. ಸಿಕ್ಕ ವಸ್ತುಗಳ ಬಗ್ಗೆ ಮಾಹಿತಿಯನ್ನ ಕಲೆಹಾಕುತ್ತಿದ್ದೇವೆ ಎಂದು ಸಂದೀಪ್​ ಪಾಟೀಲ್ ತಿಳಿಸಿದ್ದಾರೆ.

ಖನ್ನಾ ಮನೆಯಲ್ಲಿ ಮಾದಕ ವಸ್ತು ಕೂಡ ಪತ್ತೆ:
ಇನ್ನು ವಿರೇನ್ ಖನ್ನಾ ಮನೆಯಲ್ಲಿ ಮಾದಕ ವಸ್ತು ಕೂಡ ಪತ್ತೆಯಾಗಿದೆ. ಸಿಸಿಬಿ ಇನ್ಸ್​ಪೆಕ್ಟರ್ ಮೊಹಮ್ಮದ್​ ಸಿರಾಜ್​ ಮಾದಕ ವಸ್ತುವನ್ನು ಜಪ್ತಿ ಮಾಡಿದ್ದಾರೆ. ಈ ಬಗ್ಗೆ ಎನೇ ಪ್ರಶ್ನೆ ಕೇಳಿದ್ರು ವಿರೇನ್ ಖನ್ನಾ ಮಾತ್ರ ಯಾವುದಕ್ಕೂ ಉತ್ತರಿಸುತ್ತಿಲ್ಲ.


ಇದನ್ನೂ ಓದಿ:
ಕಸ್ಟಡಿಯಲ್ಲಿರುವ ಆರೋಪಿ ವಿರೇನ್ ಖನ್ನಾ ಮನೆ ಮೇಲೂ CCB ದಾಳಿ, ಎಲ್ಲೆಲ್ಲಿ?

Click on your DTH Provider to Add TV9 Kannada