ನಮ್ಮ ಕಾಲದಲ್ಲಿ Drugs ದಂಧೆ ಬಗ್ಗೆ ನಾವು ಕೇಳಿರಲಿಲ್ಲ -ಸಚಿವ BC ಪಾಟೀಲ್
ಮೈಸೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಮಾಜಿ ನಟ ಹಾಗೂ ಸಚಿವ BC ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ನಾನು ಕೂಡ 20 ವರ್ಷಗಳ ಕಾಲ ಚಿತ್ರರಂಗದಲ್ಲಿ ಇದ್ದೆ. ನಮ್ಮ ಕಾಲದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನಾವು ಕೇಳಿರಲಿಲ್ಲ ಎಂದು ಮೈಸೂರಿನಲ್ಲಿ ಕೃಷಿ ಖಾತೆ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ. ಈಗ ಈ ವಿಚಾರ ಕೇಳುತ್ತಿದ್ದೇನೆ. ಇದು ದುರದೃಷ್ಟಕರ ಸಂಗತಿ. ಸಿದ್ದರಾಮಯ್ಯನವರು ಹೇಳಿದಂತೆ ಎಲ್ಲ ಕಾಲದಲ್ಲೂ ಈ ರೀತಿ ಇತ್ತು. ಸಿನಿಮಾರಂಗ, ಸೆಲೆಬ್ರಿಟಿಗಳಾಗಿದ್ದಕ್ಕೆ ಡ್ರಗ್ಸ್ […]

ಮೈಸೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಆರೋಪ ಕೇಸ್ಗೆ ಸಂಬಂಧಿಸಿ ಮಾಜಿ ನಟ ಹಾಗೂ ಸಚಿವ BC ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ನಾನು ಕೂಡ 20 ವರ್ಷಗಳ ಕಾಲ ಚಿತ್ರರಂಗದಲ್ಲಿ ಇದ್ದೆ. ನಮ್ಮ ಕಾಲದಲ್ಲಿ ಡ್ರಗ್ಸ್ ದಂಧೆ ಬಗ್ಗೆ ನಾವು ಕೇಳಿರಲಿಲ್ಲ ಎಂದು ಮೈಸೂರಿನಲ್ಲಿ ಕೃಷಿ ಖಾತೆ ಸಚಿವ ಬಿ.ಸಿ. ಪಾಟೀಲ್ ಹೇಳಿಕೆ ನೀಡಿದ್ದಾರೆ.
ಈಗ ಈ ವಿಚಾರ ಕೇಳುತ್ತಿದ್ದೇನೆ. ಇದು ದುರದೃಷ್ಟಕರ ಸಂಗತಿ. ಸಿದ್ದರಾಮಯ್ಯನವರು ಹೇಳಿದಂತೆ ಎಲ್ಲ ಕಾಲದಲ್ಲೂ ಈ ರೀತಿ ಇತ್ತು. ಸಿನಿಮಾರಂಗ, ಸೆಲೆಬ್ರಿಟಿಗಳಾಗಿದ್ದಕ್ಕೆ ಡ್ರಗ್ಸ್ ವಿಚಾರಕ್ಕೆ ಮಹತ್ವ ಪಡೆಯುತ್ತಿದೆ.
ನಟ ನಟಿಯರು ಸಮಾಜಕ್ಕೆ ಮಾದರಿಯಾಗಬೇಕು ಸಿನಿಮಾ ರಂಗದವರನ್ನು ಫ್ಯಾನ್ಸ್ ಅನುಕರಿಸುತ್ತಾರೆ. ಹಾಗಾಗಿ, ನಟ ನಟಿಯರು ಈ ರೀತಿಯ ತಪ್ಪು ಮಾಡಿದರೆ ಅಭಿಮಾನಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ನಟ ನಟಿಯರು ಸಮಾಜಕ್ಕೆ ಮಾದರಿಯಾಗಬೇಕು ಎಂದು ಸಚಿವರು ಹೇಳಿದರು.



