ವಾಯುವಿಹಾರಕ್ಕೆ ತೆರಳಿದ್ದ ದಂಪತಿಯನ್ನ ತಿವಿದು, ಪರಾರಿಯಾದ ಕಾಡಾನೆ!
ದಾವಣಗೆರೆ: ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕಾಡಾನೆ ತಿವಿದಿರುವ ಘಟನೆ ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಶೈಲೇಂದ್ರ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿನ್ನೆ ಇದೇ ಕಾಡಾನೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರತ್ಯಕ್ಷವಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ತಿಪ್ಪೇಸ್ವಾಮಿ ಗೆ ತಿವಿದಿತ್ತು. ಒಂದೇ ರಾತ್ರಿ 30 ಕಿಲೋಮೀಟರ್ ಪ್ರಯಾಣಿಸಿ ಕೋಗಲೂರಿನಲ್ಲಿ ದಂಪತಿಗೆ ತಿವಿದಿದೆ. ಕೋಗಲೂರು ಸಮೀಪ ಇರುವ ಜಮೀನಿನಲ್ಲಿ ಆನೆ ಓಡಾಡುತ್ತಿತ್ತು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು […]
ದಾವಣಗೆರೆ: ವಾಯುವಿಹಾರಕ್ಕೆ ತೆರಳಿದ್ದ ದಂಪತಿಗೆ ಕಾಡಾನೆ ತಿವಿದಿರುವ ಘಟನೆ ಚನ್ನಗಿರಿ ತಾಲೂಕಿನ ಕೋಗಲೂರು ಗ್ರಾಮದ ಬಳಿ ನಡೆದಿದೆ. ಘಟನೆಯಲ್ಲಿ ಶೈಲೇಂದ್ರ ದಂಪತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಿನ್ನೆ ಇದೇ ಕಾಡಾನೆ ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಬಳಿಯ ತುಂಗಭದ್ರಾ ನದಿಯಲ್ಲಿ ಪ್ರತ್ಯಕ್ಷವಾಗಿತ್ತು. ಆಗ ಅರಣ್ಯ ಇಲಾಖೆ ಸಿಬ್ಬಂದಿ ತಿಪ್ಪೇಸ್ವಾಮಿ ಗೆ ತಿವಿದಿತ್ತು.
ಒಂದೇ ರಾತ್ರಿ 30 ಕಿಲೋಮೀಟರ್ ಪ್ರಯಾಣಿಸಿ ಕೋಗಲೂರಿನಲ್ಲಿ ದಂಪತಿಗೆ ತಿವಿದಿದೆ. ಕೋಗಲೂರು ಸಮೀಪ ಇರುವ ಜಮೀನಿನಲ್ಲಿ ಆನೆ ಓಡಾಡುತ್ತಿತ್ತು, ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಆನೆ ಬೆದರಿಸಿ ಕಾಡಾನೆಯನ್ನು ಊರಿಂದ ಹೊರ ಅಟ್ಟಿದ್ದಾರೆ.
ಈ ಕಾಡಾನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ವನ್ಯಜೀವಿಧಾಮದಿಂದ ತಪ್ಪಿಸಿಕೊಂಡು ಬಂದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಈಗ ದಾವಣಗೆರೆ ತಾಲೂಕಿನ ಮಾಯಕೊಂಡ ಮಾರ್ಗವಾಗಿ ಚಿತ್ರದುರ್ಗ ಜಿಲ್ಲೆಗೆ ಹೋಗಿರುವ ಅನುಮಾನ ವ್ಯಕ್ತವಾಗಿದ್ದು, ಚನ್ನಗಿರಿ ವಲಯ ಅರಣ್ಯಾಧಿಕಾರಿಗಳ ನೇತ್ರತ್ವದಲ್ಲಿ ಕಾಡಾನೆಗಾಗಿ ಶೋಧ ಕಾರ್ಯ ಕೈಗೊಂಡಿದ್ದಾರೆ.
Published On - 11:40 am, Thu, 13 February 20