AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಎಲೆಕ್ಷನ್​ನಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡ್ತೇನೆ: ಯಡಿಯೂರಪ್ಪ ಘೋಷಣೆ

ಬೆಳಗಾವಿ: ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಬೈಎಲೆಕ್ಷನ್ ನಡೆಯುತ್ತಿದ್ದು, ಹದಿನೈದೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ಬೈಎಲೆಕ್ಷನ್​ನಲ್ಲಿ ಗೆದ್ದು ಬರುವವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶಿರಗುಪ್ಪಿಯಲ್ಲಿ ಹೇಳಿದ್ದಾರೆ. ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರ ವ್ಯಾಪ್ತಿಯ ಶಿರಗುಪ್ಪಿಯಲ್ಲಿ ನಾಳೆ ಯಲ್ಲಾಪುರ, ರಾಣೆಬೆನ್ನೂರು ಕ್ಷೇತ್ರಗಳಿಗೆ ಹೋಗುತ್ತೇನೆ. ಮೂರೂವರೆ ವರ್ಷಗಳ ಕಾಲ ಸ್ವಚ್ಛ ಆಡಳಿತ ನೀಡುತ್ತೇವೆ. ಕಾಂಗ್ರೆಸ್ ನಾಯಕರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಅವರು ಹೇಳಿದರು. ಅಥಣಿ ಕ್ಷೇತ್ರದಲ್ಲಿ 40 ರಿಂದ 50 ಸಾವಿರ ಮತಗಳ […]

ಬೈಎಲೆಕ್ಷನ್​ನಲ್ಲಿ ಗೆದ್ದು ಬಂದವರಿಗೆ ಸಚಿವ ಸ್ಥಾನ ನೀಡ್ತೇನೆ: ಯಡಿಯೂರಪ್ಪ ಘೋಷಣೆ
ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ
Follow us
ಸಾಧು ಶ್ರೀನಾಥ್​
|

Updated on:Nov 23, 2019 | 5:07 PM

ಬೆಳಗಾವಿ: ಡಿಸೆಂಬರ್ 5ರಂದು ರಾಜ್ಯದ 15 ಕ್ಷೇತ್ರಗಳಲ್ಲಿ ಬೈಎಲೆಕ್ಷನ್ ನಡೆಯುತ್ತಿದ್ದು, ಹದಿನೈದೂ ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ. ಬೈಎಲೆಕ್ಷನ್​ನಲ್ಲಿ ಗೆದ್ದು ಬರುವವರಿಗೆ ಸಚಿವ ಸ್ಥಾನ ನೀಡುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಶಿರಗುಪ್ಪಿಯಲ್ಲಿ ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಕಾಗವಾಡ ಕ್ಷೇತ್ರ ವ್ಯಾಪ್ತಿಯ ಶಿರಗುಪ್ಪಿಯಲ್ಲಿ ನಾಳೆ ಯಲ್ಲಾಪುರ, ರಾಣೆಬೆನ್ನೂರು ಕ್ಷೇತ್ರಗಳಿಗೆ ಹೋಗುತ್ತೇನೆ. ಮೂರೂವರೆ ವರ್ಷಗಳ ಕಾಲ ಸ್ವಚ್ಛ ಆಡಳಿತ ನೀಡುತ್ತೇವೆ. ಕಾಂಗ್ರೆಸ್ ನಾಯಕರ ಟೀಕೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದು ಅವರು ಹೇಳಿದರು.

ಅಥಣಿ ಕ್ಷೇತ್ರದಲ್ಲಿ 40 ರಿಂದ 50 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ. ಕಾಗವಾಡ ಕ್ಷೇತ್ರದಲ್ಲೂ ಉತ್ತಮ ವಾತಾವರಣ ಇದೆ. 15 ಕ್ಷೇತ್ರಗಳಲ್ಲೂ ನಾವು ಗೆಲುವು ಸಾಧಿಸುತ್ತೇವೆ. ಮತ್ತೊಮ್ಮೆ ನಾನು ಈ ಕ್ಷೇತ್ರಗಳಿಗೆ ಪ್ರಚಾರಕ್ಕೆ ಬರುತ್ತೇನೆ. ಲಕ್ಷಣ ಸವದಿ-ಮಹೇಶ್ ಕುಮಟಳ್ಳಿ ಕೆಲಸ ಮಾಡಲು ಶುರು ಮಾಡಿದ್ದಾರೆ. ಒಂದೇ ತಾಯಿಯ ಮಕ್ಕಳಂತೆ ಕೆಲಸ ಮಾಡಲು ಅವರು ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ತಿಳಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಎಲ್ಲ ವರ್ಗದ ಮುಖಂಡರು ಸಹಕಾರ ನೀಡಿದ್ದಾರೆ. ವಿಶೇಷವಾಗಿ ವೀರಶೈವ ಸಮಾಜದ ಬಂಧುಗಳಿಗೆ ಹೇಳಲು ಇಷ್ಟ ಪಡುತ್ತೇನೆ. ವೀರಶೈವ ಮುಖಂಡರ ಒಂದು ವೋಟು ಸಹ ಬೇರೆ ಪಕ್ಷಕ್ಕೆ ಹೋಗಬಾರದು. ವೀರಶೈವ ಸಮಾಜದ ಒಂದು ಓಟು ಆಗ ಕಡೆ ಹೋದರೆ ಎಷ್ಟರ ಮಟ್ಟಿಗೆ ಸರಿ ಎಂದು ನೀವು ಯೋಚನೆ ಮಾಡಿ. ಪಕ್ಷ ವಿರೋಧಿಗಳು, ಪಕ್ಷ ದ್ರೋಹಿಗಳಿಗೆ ಪಾಠ ಕಲಿಸಿ ಎಂದು ಮಾತು ಮುಗಿಸಿದ ಬಿಎಸ್ ವೈ, ಭಾಷಣ‌ ಮುಗಿಸಿ ಗೋಕಾಕ್ ಕಡೆ ಹೊರಟರು.

Published On - 5:06 pm, Sat, 23 November 19