
ಮೈಸೂರು: ನವರಾತ್ರಿಯ ಮೊದಲ ದಿನವಾದ ಇಂದು ತನ್ನಿಬ್ಬರು ಮಕ್ಕಳನ್ನು ಕೊಂದು, ತಾಯಿಯೊಬ್ಬಳು ನೇಣಿಗೆ ಶರಣಾಗಿದ್ದಾಳೆ. ಮೈಸೂರಿನ ಗಾಯತ್ರಿಪುರಂ 2ನೇ ಹಂತದ ಮನೆಯಲ್ಲಿ ಈ ಮನಕಲಕುವ ಘಟನೆ ನಡೆದಿದೆ.
ಖಾಸಗಿ ಕಂಪನಿಯಲ್ಲಿ ಡಿಪ್ಲೊಮಾ ಇಂಜಿನಿಯರ್ ಆಗಿರುವ ಮುಜಾಮಿಲ್. ಎರಡು ದಿನಗಳ ಹಿಂದೆ ಪತ್ನಿಯ ಮೊಬೈಲ್ ಕಿತ್ತುಕೊಂಡಿದ್ದ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಪತಿ-ಪತ್ನಿಯರ ನಡುವೆ ಗಲಾಟೆಯೂ ಆಗಿತ್ತು.
ಪತಿರಾಯ ಮುಜಾಮಿಲ್, ಮನೆಯಲ್ಲಿದ್ದ ವೇಳೆಯೇ ಮಕ್ಕಳನ್ನ ಕೊಂದು ಸೂಫಿಯಾ ನೇಣಿಗೆ ಶರಣಾಗಿದ್ದಾರೆ. ಉದಯಗಿರಿ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.