ಗೆಲ್ಲಲೇಬೇಕಿರುವ ಸಿಎಸ್ಕೆಗೆ ಇಂದು ಬಲಿಷ್ಠ ಡೆಲ್ಲಿಯ ಸವಾಲು
ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯಲ್ಲಿಂದು ಡಬಲ್ ಹೆಡ್ಡರ್ಗಳ ಸೂಪರ್ ಶನಿವಾರ. ಈವತ್ತಿನ ಮೊದಲ ಅಂದರೆ ಟೂರ್ನಿಯ 33ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ನಡುವೆ ನಡೆದರೆ 34ನೇ ಪಂದ್ಯ ಚೆನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆಯಲಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಮುಂಬೈನೊಂದಿಗೆ 12 ಅಂಕ ಗಳಿಸಿದ್ದರೂ ನೆಟ್ ರನ್ ರೇಟ್ನಲ್ಲಿ ಕೊಂಚ ಹಿಂದಿರುವುದದಿಂದ ಡೆಲ್ಲಿ ಟೀಮು ಎರಡನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 5ನ್ನು ಸೋತು ಕೇವಲ 6 […]

ಇಂಡಿಯನ್ ಪ್ರಿಮೀಯರ್ ಲೀಗ್ 13ನೇ ಆವೃತಿಯಲ್ಲಿಂದು ಡಬಲ್ ಹೆಡ್ಡರ್ಗಳ ಸೂಪರ್ ಶನಿವಾರ. ಈವತ್ತಿನ ಮೊದಲ ಅಂದರೆ ಟೂರ್ನಿಯ 33ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ತಾನ ರಾಯಲ್ಸ್ ನಡುವೆ ನಡೆದರೆ 34ನೇ ಪಂದ್ಯ ಚೆನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಧ್ಯೆ ನಡೆಯಲಿದೆ. ಪಾಯಿಂಟ್ಸ್ ಟೇಬಲ್ನಲ್ಲಿ ಮುಂಬೈನೊಂದಿಗೆ 12 ಅಂಕ ಗಳಿಸಿದ್ದರೂ ನೆಟ್ ರನ್ ರೇಟ್ನಲ್ಲಿ ಕೊಂಚ ಹಿಂದಿರುವುದದಿಂದ ಡೆಲ್ಲಿ ಟೀಮು ಎರಡನೇ ಸ್ಥಾನದಲ್ಲಿದೆ. ಆಡಿರುವ 8 ಪಂದ್ಯಗಳಲ್ಲಿ 5ನ್ನು ಸೋತು ಕೇವಲ 6 ಅಂಕ ಗಳಿಸಿರುವ ಚೆನೈ 6ನೇ ಸ್ಥಾನದಲ್ಲಿದೆ.
ಪ್ಲೇ ಆಫ್ ಹಂತ ತಲುಪುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಚೆನೈ ಇಂದು ಗೆಲ್ಲಲೇ ಬೇಕು. ಕಳೆದ 5 ಪಂದ್ಯಗಳಲ್ಲಿ 2ರಲ್ಲಿ ಮಾತ್ರ ಗೆದ್ದಿರುವ ಮಹೇಂದ್ರಸಿಂಗ್ ಧೋನಿ ಪಡೆಗೆ ಇನ್ನು ಮುಂದಿನ ಹಾದಿ ದುರ್ಗಮವಾಗಿದೆ. ಹೈದರಾಬಾದ್ ವಿರುದ್ಧ ಧೋನಿ ಹೊಸ ಕಾರ್ಯತಂತ್ರಗಳನ್ನು
ಪ್ರಯೋಗಿಸಿ ಯಶ ಕಂಡರಾದರೂ, ಇವತ್ತು ಸಹ ಅದೃಷ್ಟ ಅವರ ಪರವಾಗಿರುತ್ತದೆ ಅಂತ ಹೇಳಲಾಗಲ್ಲ.
ಆಲ್ರೌಂಡರ್ ಸ್ಯಾಮ್ ಕರನ್ ಅವರನ್ನು ಇಂದು ಸಹ ಮೇಲಿನ ಕ್ರಮಾಂಕದಲ್ಲಿ ಆಡಿಸುವ ನಿರೀಕ್ಷೆಯಿದೆ. ಫಫ್ ಡು ಫ್ಲೆಸ್ಸಿ ಮತ್ತು ಶೇನ್ ವಾಟ್ಸನ್ ಇನ್ನಿಂಗ್ಸ್ ಆರಂಭಿಸಿದರೆ, ಕರನ್ ಮೂರನೇ ಸ್ಥಾನದಲ್ಲಾಡಬಹುದು. ನಿಮಗೆ ನೆನಪಿರಬಹುದು, ಹೈದರಾಬಾದ್ ವಿರುದ್ಧ ಆಡಿದ ಪಂದ್ಯದಲ್ಲಿ ಕರನ್ ಮತ್ತು ಡು ಪ್ಲೆಸ್ಸಿ ಇನ್ನಿಂಗ್ಸ್ ಆರಂಬಿಸಿದ್ದರು. ನಂತರದ ಕ್ರಮಾಂಕಗಳಲ್ಲಿ ಅಂಬಟಿ ರಾಯುಡು, ಮತ್ತು ಧೋನಿ ಆಡುತ್ತಾರೆ.
ಬ್ಯಾಟಿಂಗ್ ಲೈನ್ಅಪ್ ಮತ್ತಷ್ಟು ಸುಭದ್ರಗೊಳಿಸಲು ಪಿಯುಷ್ ಸ್ಥಾನದಲ್ಲಿ ಇಂದು ಕೇದಾರ್ ಜಾಧವ್ ಅವರನ್ನು ವಾಪಸ್ಸು ತರುವ ಸಾಧ್ಯತೆಯಿದೆ. ಉಳಿದಂತೆ ಕೆಳ ಕ್ರಮಾಂಕದಲ್ಲಿ ಇಬ್ಬರು ಅಲ್ರೌಂಡರ್ಗಳು–ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೊ ಆಡಲಿದ್ದಾರೆ. ಉತ್ತಮವಾಗಿ ಬೌಲ್ ಮಾಡುತ್ತಿರುವ
ದೀಪಕ್ ಚಹರ್ ಮತ್ತು ಶಾರ್ದುಲ್ ಠಾಕುರ್ ಅವರ ಸ್ಥಾನಗಳು ಅಬಾಧಿತ, ಕರ್ನ್ ಶರ್ಮ ಸಹ ಇವತ್ತಿನ ಅಡುವ ಇಲೆವೆನ್ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ.
ಪ್ರಸಕ್ತ ಐಪಿಎಲ್ನಲ್ಲಿ ಉಳಿದೆಲ್ಲ ತಂಡಗಳಿಗಿಂತ ಸರ್ವಶಕ್ತ ಅನಿಸುತ್ತಿರುವ ಡೆಲ್ಲಿ ಟೀಮಗೆ ಯಾವ ವಿಭಾಗದಲ್ಲೂ ಸಮಸ್ಯೆಗಳಿದ್ದಂತಿಲ್ಲ. ಕಗಿಸೊ ರಬಾಡ ಜೊತೆ ಬೌಲಿಂಗ್ ದಾಳಿ ಆರಂಭಿಸುವ ಌನ್ರಿಖ್ ನೊರ್ಕಿಯ ಐಪಿಎಲ್ ಇತಿಹಾಸದಲ್ಲೇ ಅತಿವೇಗದ (156.2 ಕಿ.ಮೀ/ಗಂಟೆ) ಎಸೆತವನ್ನು ಬೌಲ್ ಮಾಡಿ ಬ್ಯಾಟ್ಸ್ಮನ್ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ರಬಾಡ ಸಹ 154 ಕಿ.ಮೀ/ಗಂಟೆಗಿಂತ ಜಾಸ್ತಿ ವೇಗದಲ್ಲಿ ಬೌಲ ಮಾಡಿದ್ದಾರೆ. ಹಾಗಾಗಿ ಬ್ಯಾಟ್ಸ್ಮನ್ಗಳಲ್ಲಿ ‘ಇನ್ ಸೆ ಬಚ್ ಕೆ ರೆಹನಾ’ ಎಂಬ ಭಾವನೆ ಮೂಡಿರಲಿಕ್ಕೂ ಸಾಕು.
ಶ್ರೇಯಸ್ ಅಯ್ಯರ್ ಅವರ ಟೀಮು ಯಾಕೆ ಹೆಚ್ಚು ಸಮತೋಲಿತವೆನಿಸುತ್ತಿದೆಯೆಂದರೆ, ಅದು ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ ಸಾಧಾರಣ ಮೊತ್ತ ಗಳಿಸಿದರೂ ಅದರ ಬೌಲರ್ಗಳು ಆ ಮೊತ್ತವನ್ನು ಯಶಸ್ವೀಯಾಗಿ ಡಿಫೆಂಡ್ ಮಾಡಿಕೊಳ್ಳುತ್ತಿದ್ದಾರೆ. ಇಂಥ ಖ್ಯಾತಿ ಕ್ಲೈವ್ ಲಾಯ್ಡ್ ನೇತೃತ್ವದ 80ರ ದಶಕದ ವೆಸ್ಟ್ ಇಂಡೀಸ್ ಟೀಮಿಗಿತ್ತು.
ಅಯ್ಯರ್, ತಾನೊಬ್ಬ ಉತ್ತಮ
ನಾಯಕ ಆಂತ ಪ್ರತಿ ಪಂದ್ಯದಲ್ಲಿ ಸಾಬೀತು ಮಾಡುತ್ತಿದ್ದಾರೆ. ನಾಯಕತ್ವದ ವಿಷಯದಲ್ಲಿ ಈ ಬಾರಿಯ ಟೂರ್ನಿಯಲ್ಲಿ ಅಘೋಷಿತ ಸ್ಫರ್ದೆ ನಡೆಯುತ್ತಿರುವುದು ಒಂದು ಉತ್ತಮ ಬೆಳವಣಿಗೆ. ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕ ಕೆಎಲ್ ರಾಹುಲ್ ಗಮನ ಸೇಳೆಯುವ ರೀತಿಯಲ್ಲಿ ಟೀಮನ್ನು ಲೀಡ್ ಮಾಡುತ್ತಿರುವರಾದರೂ ಅದೃಷ್ಟ ದೇವತೆ ಅವರಿಂದ ಮುನಿಸಿಕೊಂಡಿರುವಂತಿದೆ. ಬ್ಯಾಟಿಂಗ್ನಲ್ಲೂ ಅಯ್ಯರ್ ಮತ್ತು ರಾಹುಲ್ ತಮ್ಮ ಹೊಣೆಯರಿತು ಆಟವಾಡುತ್ತಿರುವುದರಿಂದ ತಮ್ಮ ಟೀಮುಗಳಿಗೆ ಅವರು ಸ್ಫೂರ್ತಿದಾಯಕರಾಗಿದ್ದಾರೆ.
ಶಿಖರ್ ಧವನ್ ಸತತ ಎರಡು ಅರ್ಧ ಶತಕಗಳನ್ನು ಬಾರಿಸಿರುವುದು ಅಯ್ಯರ್ ಮೇಲಿನ ಒತ್ತಡವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದೆ. ಅವರ ಪಾರ್ಟ್ನರ್ ಪೃಥ್ವಿ ಶಾ ಒಂದರೆಡು ಪಂದ್ಯಗಳಲ್ಲಿ ಫೇಲಾಗಿರುವುದು ನಿಜ, ಆದರೆ ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಅಜಿಂಕ್ಯಾ ರಹಾನೆ ತನ್ನ ಖ್ಯಾತಿಗೆ ತಕ್ಕ ಆಟವಾಡದಿರುವುದು ಡೆಲ್ಲಿಗೆ ಸ್ವಲ್ಪ ಆತಂಕವನ್ನು ಮೂಡಿಸಿದೆ. ರಿಷಬ್ ಪಂತ್ ಫಿಟ್ ಆದರೆ ರಹಾನೆ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಪಂತ್ ಕೇವಲ ಬ್ಯಾಟ್ಸ್ಮನ್ ಸಾಮರ್ಥ್ಯದಲ್ಲಿ ಆಡುತ್ತಾರೆ ಮತ್ತು ಆಲೆಕ್ಸ್ ಕೇರಿ ವಿಕೆಟ್ ಕೀಪರ್ ಅಗಿ ಮುಂದುವರಿಯುತ್ತಾರೆ. ಟೀಮಿನ ಥಿಂಕ್ ಟ್ಯಾಂಕ್, ಕೇರಿಯನ್ನು ಡ್ರಾಪ್ ಮಾಡುವ ನಿರ್ಧಾರ ತೆಗೆದುಕೊಂಡರೆ ಅವರ ಸ್ಥಾನದಲ್ಲಿ ಶಿಮ್ರನ್ ಹೆಟ್ಮೆಯರ್ ತಂಡಕ್ಕೆ ವಾಪಸ್ಸಾಗುತ್ತಾರೆ.

ರವಿಚಂದ್ರನ್ ಅಶ್ವಿನ್ ಮತ್ತು ಅಕ್ಸರ್ ಪಟೇಲ್ ಇವತ್ತು ಕೂಡ ಚೆನೈ ಬ್ಯಾಟ್ಸ್ಮನ್ಗಳು ರನ್ ಗಳಿಸಲು ತಿಣುಕಾಡುವಂತೆ ಮಾಡಬಹುದು.
