IMA ವಂಚನೆ: ಉನ್ನತ ಪೊಲೀಸ್ ಅಧಿಕಾರಿಗಳ ವಿರುದ್ಧವೂ CBIನಿಂದ ಚಾರ್ಜ್‌ಶೀಟ್ ದಾಖಲು
ಬೆಂಗಳೂರು: IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಇಂದು ಸಪ್ಲಿಮೆಂಟರಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಮನ್ಸೂರ್ ಖಾನ್ ಸೇರಿದಂತೆ 28 ಜನರ ವಿರುದ್ಧ ಆರೋಪಟ್ಟಿಯನ್ನು ತನಿಖಾ ಸಂಸ್ಥೆ ಸಿದ್ಧಪಡಿಸಿದೆ. ಅಂದಿನ, ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ, CID ಆರ್ಥಿಕ ಅಪರಾಧಗಳ ವಿಭಾಗದ ಇನ್ಸ್ಪೆಕ್ಟರ್ ಜನರಲ್, ಪೂರ್ವ ವಿಭಾಗದ DCP ಹಾಗೂ ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ರನ್ನು ಒಳಗೊಂಡಂತೆ ಪ್ರಕರಣದಲ್ಲಿ ಆರೋಪಿತರಾಗಿರುವ ಖಾಸಗಿ ವ್ಯಕ್ತಿಗಳನ್ನು ಸಹ ಸೇರಿ 28 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ. ಮೇಲ್ಕಂಡ ಆರೋಪಿಗಳು IMA […]

ಬೆಂಗಳೂರು: IMA ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ CBIನಿಂದ ಇಂದು ಸಪ್ಲಿಮೆಂಟರಿ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಮನ್ಸೂರ್ ಖಾನ್ ಸೇರಿದಂತೆ 28 ಜನರ ವಿರುದ್ಧ ಆರೋಪಟ್ಟಿಯನ್ನು ತನಿಖಾ ಸಂಸ್ಥೆ ಸಿದ್ಧಪಡಿಸಿದೆ.
ಅಂದಿನ, ಬೆಂಗಳೂರು ಉತ್ತರ ವಿಭಾಗದ ಸಹಾಯಕ ಆಯುಕ್ತ, CID ಆರ್ಥಿಕ ಅಪರಾಧಗಳ ವಿಭಾಗದ ಇನ್ಸ್ಪೆಕ್ಟರ್ ಜನರಲ್, ಪೂರ್ವ ವಿಭಾಗದ DCP ಹಾಗೂ ಕಮರ್ಷಿಯಲ್ ಸ್ಟ್ರೀಟ್ ಇನ್ಸ್ಪೆಕ್ಟರ್ರನ್ನು ಒಳಗೊಂಡಂತೆ ಪ್ರಕರಣದಲ್ಲಿ ಆರೋಪಿತರಾಗಿರುವ ಖಾಸಗಿ ವ್ಯಕ್ತಿಗಳನ್ನು ಸಹ ಸೇರಿ 28 ಜನರ ವಿರುದ್ಧ ಆರೋಪಪಟ್ಟಿ ಸಲ್ಲಿಕೆಯಾಗಿದೆ.
ಮೇಲ್ಕಂಡ ಆರೋಪಿಗಳು IMA ವಿರುದ್ಧ ಸೂಕ್ತ ವೆರಿಫಿಕೇಶನ್ ಮಾಡಿರುವುದಿಲ್ಲ. ಜೊತೆಗೆ, KPID ಕಾಯ್ದೆಯಡಿ ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ. ಕಾನೂನಿನಡಿ ಸೂಕ್ತ ತನಿಖೆ ನಡೆಸದೆ ಕಂಪನಿಗೆ ಕ್ಲೀನ್ ಚಿಟ್ ನೀಡಿದ್ದರು.
ಈ ಎಲ್ಲಾ ಕಾರಣಗಳಿಂದ IMA ಸಂಸ್ಥೆ ತನ್ನ ವಂಚನೆ ಮುಂದುವರೆಸಲು ಆರೋಪಿಗಳಿಗೆ ಸಹಕಾರಿಯಾಯ್ತು ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. 4 ಸಾವಿರ ಕೋಟಿಗೂ ಅಧಿಕ ಮೌಲ್ಯದ ಹಗರಣವೆಂದು IMA ವಿರುದ್ಧ 4 ಪ್ರಕರಣಗಳನ್ನು CBI ದಾಖಲಿಸಿಕೊಂಡಿದೆ.
CBI files a supplementary chargesheet against 28 accused including MD/CEO of a private company based in Bengaluru, in connection with IMA scam case in the designated court in Bengaluru: Central Bureau of Investigation (CBI) pic.twitter.com/cNQ37901ks
— ANI (@ANI) October 17, 2020