ಮತ್ತೆ ಉಲ್ಬಣಿಸಿದ ಮಂಗನ ಕಾಯಿಲೆ: ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಮತ್ತೆ ಉಲ್ಬಣಿಸಿದ ಮಂಗನ ಕಾಯಿಲೆ: ಚಿಕಿತ್ಸೆ ಫಲಿಸದೆ ಮಹಿಳೆ ಸಾವು

ಶಿವಮೊಗ್ಗ: ಮಂಗನಕಾಯಿಲೆ ಉಲ್ಬಣಿಸಿ ಸಾಗರ ತಾಲೂಕಿನ ಸೀಗೆಮಕ್ಕಿ ಗ್ರಾಮದ ಮಹಿಳೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹೂವಮ್ಮ(58) ಮೃತಪಟ್ಟಿದ್ದಾರೆಂದು ಟಿವಿ9ಗೆ ಶಿವಮೊಗ್ಗ DHO ರಾಜೇಶ್ ಸುರಗಿಹಳ್ಳಿ ಸ್ಪಷ್ಟಪಡಿಸಿದ್ದಾರೆ. ಶಂಕಿತ ಜ್ವರ ಹಿನ್ನೆಲೆಯಲ್ಲಿ 247 ಜನರ ರಕ್ತ ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 7 ಜನರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿತ್ತು. 7 ಜನರ ಪೈಕಿ 6 ಜನ ಗುಣಮುಖರಾಗಿದ್ದಾರೆ. ತೀರ್ಥಹಳ್ಳಿ, ಸಾಗರದಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. […]

sadhu srinath

|

Jan 12, 2020 | 2:09 PM

ಶಿವಮೊಗ್ಗ: ಮಂಗನಕಾಯಿಲೆ ಉಲ್ಬಣಿಸಿ ಸಾಗರ ತಾಲೂಕಿನ ಸೀಗೆಮಕ್ಕಿ ಗ್ರಾಮದ ಮಹಿಳೆ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಲಸಿಕೆ ಹಾಕಿಸಿಕೊಳ್ಳಲು ನಿರಾಕರಿಸಿದ ಹಿನ್ನೆಲೆಯಲ್ಲಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಹೂವಮ್ಮ(58) ಮೃತಪಟ್ಟಿದ್ದಾರೆಂದು ಟಿವಿ9ಗೆ ಶಿವಮೊಗ್ಗ DHO ರಾಜೇಶ್ ಸುರಗಿಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಶಂಕಿತ ಜ್ವರ ಹಿನ್ನೆಲೆಯಲ್ಲಿ 247 ಜನರ ರಕ್ತ ಮಾದರಿಯನ್ನು ಪರೀಕ್ಷೆ ಮಾಡಲಾಗಿತ್ತು. ಈ ಪೈಕಿ 7 ಜನರಲ್ಲಿ ಕೆಎಫ್‌ಡಿ ಸೋಂಕು ಪತ್ತೆಯಾಗಿತ್ತು. 7 ಜನರ ಪೈಕಿ 6 ಜನ ಗುಣಮುಖರಾಗಿದ್ದಾರೆ. ತೀರ್ಥಹಳ್ಳಿ, ಸಾಗರದಲ್ಲಿ ಚಿಕಿತ್ಸೆ ನೀಡಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. 6 ಪ್ರಾಥಮಿಕ ಕೇಂದ್ರಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದೇವೆ. ಅರಳಗೋಡು, ಕಾರ್ಗಲ್, ತುಮರಿ ಮಂಡಗದ್ದೆ, ಮಾಳೂರು, ಕನ್ನಂಗಿಯಲ್ಲಿ ಜನರಿಗೆ 3 ಬಾರಿ ಲಸಿಕೆಯನ್ನು ಹಾಕಲಾಗಿದೆ ಎಂದು DHO ರಾಜೇಶ್ ಸುರಗಿಹಳ್ಳಿ ತಿಳಿಸಿದರು. ಕಳೆದ ವರ್ಷ ಮಂಗನಕಾಯಿಲೆಯಿಂದ 25ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು.

Follow us on

Related Stories

Most Read Stories

Click on your DTH Provider to Add TV9 Kannada