BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ. BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, […]

BBMPಗೆ ಹಣ ದಾಹ: ಟೆಸ್ಟ್ ಮಾಡಿಸದಿದ್ದರೂ ಕೊರೊನಾ ಪಾಸಿಟಿವ್ ಎಂದರು ..
ಆಯೇಷಾ ಬಾನು Edited By: ಸಾಧು ಶ್ರೀನಾಥ್​

Updated on: Oct 01, 2020 | 5:05 PM

ಬೆಂಗಳೂರು: ಮಹಾಮಾರಿ ಕೊರೊನಾಗೆ ಭಯ ಪಡುತ್ತಿರುವ ಜನರಿಗೆ BBMP ಮಾಡುತ್ತಿರುವ ಎಡವಟ್ಟಿನಿಂದ ಮತ್ತಷ್ಟು ಜೀವ ಭಯ ಶುರುವಾಗಿದೆ. BBMP ಜನರ ಜೀವನದ ಜೊತೆ ಆಟವಾಡುತ್ತಿದೆ. ಕೊರೊನಾ ಟೆಸ್ಟಿಂಗ್ ವಿಚಾರದಲ್ಲಿ ಮತ್ತೆ ಮತ್ತೆ ಎಡವಟ್ಟು ಮಾಡುತ್ತಿದೆ.

BBMPಯವರು ಟೆಸ್ಟಿಂಗ್ ಮಾಡಿಸದೆ ಕೊರೊನಾ ಪಾಸಿಟಿವ್​ ಎಂದು ಕರೆ ಮಾಡಿದ್ದಾರಂತೆ. ಹೌದು ಬೊಮ್ಮನಹಳ್ಳಿಯ ವಾಣಿ, ವಿದ್ಯಾ, ರಂಜಿತಾ ಎಂಬ ಮೂವರು ಮಹಿಳೆಯರಿಗೆ BBMP ಕರೆ ಮಾಡಿ ಕೊರೊನಾ ಪಾಸಿಟಿವ್​ ಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಸೆ. 24ರಂದು ಬನಶಂಕರಿಗೆ ಹೋಗಿದ್ದ ವಾಣಿ, ವಿದ್ಯಾ, ರಂಜಿತಾ ಬನಶಂಕರಿ ಮೆಟ್ರೋ ನಿಲ್ದಾಣದ ಬಳಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಲು BBMP ಯವರು ಮನವಿ ಮಾಡಿದ್ದಾರೆ. ಆದರೆ ವಾಣಿ, ವಿದ್ಯಾ, ರಂಜಿತಾ ಟೆಸ್ಟಿಂಗ್​ಗೆ ನಿರಾಕರಿಸಿದ್ದಾರೆ. ಕೊನೆಗೆ ನಿಮ್ಮ ಮೊಬೈಲ್ ನಂಬರ್ ಕೊಡಿ ಎಂದು ಮನವಿ ಮಾಡಿದ್ದಾರೆ.

ಬಳಿಕ ಮೊಬೈಲ್​ಗೆ ಬಂದ ಓಟಿಪಿಯನ್ನೂ ಪಡೆದಿದ್ದಾರೆ. ನಂತರ ಸೆಪ್ಟೆಂಬರ್ 26 ರಂದು ಪಾಸಿಟಿವ್ ಬಂದಿದೆ ಎಂದು ಕರೆ ಮಾಡಿದ್ದಾರೆ. ಟೆಸ್ಟ್ ಮಾಡಿಸದೆ ಪಾಸಿಟಿವ್ ಹೇಗೆ ಬಂತೆಂಬ ಪ್ರಶ್ನೆ ಈ ಮೂವರೂ ಮಹಿಳೆಯರಿಗೆ ಕಾಡುತ್ತಿದೆ. ಹಾಗಾದ್ರೆ ಪಾಸಿಟಿವ್ ಲೆಕ್ಕ ತೋರಿಸಿ ಹಣ ನುಂಗುವ ಪ್ಲ್ಯಾನ್​? ಮಾಡಲಾಗುತ್ತಿದೆಯಾ. ಈ ರೀತಿ ಅದೆಷ್ಟು ಮಂದಿಗೆ ಸುಳ್ಳು ಹೇಳಿ ಚಿಕಿತ್ಸೆ ನೆಪದಲ್ಲಿ ಹಣ ಕೀಳುತ್ತಿದ್ದಾರೆ ಎಂಬ ಅನುಮಾನಗಳು ಬರುತ್ತಿವೆ. ಸರ್ಕಾರವೇ ಹೀಗೆ ಸುಲಿಗೆ ಮಾಡಲು ನಿಂತರೆ ಬಡ ಜನ ಎಲ್ಲಿಗೆ ಹೋಗಬೇಕು. ರಾಜ್ಯ ಸರ್ಕಾರ ಈಗಲಾದರೂ ಈ ಬಗ್ಗೆ ಗಮನ ಹರಿಸಿ ಜನರನ್ನು ಕಾಪಾಡಬೇಕಿದೆ.

ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Loading...
Unable to load recommendations.
Follow Us