ಇಂದೇ ಸೋಂಕು ದೃಢಪಟ್ಟಿದ್ದ ಮಹಿಳೆ ಕೊರೊನಾಗೆ ಬಲಿ!

|

Updated on: May 20, 2020 | 5:19 PM

ಯಾದಗಿರಿ: ಮಹಾಮಾರಿ ಕೊರೊನಾ ವೈರಸ್​ಗೆ ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಇಂದೇ ಸೋಂಕು ದೃಢಪಟ್ಟಿದ್ದ 55 ವರ್ಷದ ಮಹಿಳೆ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ಮಹಿಳೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು. ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್​ಗೆ ವಾಪಸ್ ಅಗಿದ್ದರು. ಎಂಪಾಡ್ ತಾಂಡದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ನಿನ್ನೆ ರಾತ್ರಿಯೇ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಇಂದೇ ಸೋಂಕು ದೃಢಪಟ್ಟಿದ್ದ ಮಹಿಳೆ ಕೊರೊನಾಗೆ ಬಲಿ!
Follow us on

ಯಾದಗಿರಿ: ಮಹಾಮಾರಿ ಕೊರೊನಾ ವೈರಸ್​ಗೆ ಯಾದಗಿರಿ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಇಂದೇ ಸೋಂಕು ದೃಢಪಟ್ಟಿದ್ದ 55 ವರ್ಷದ ಮಹಿಳೆ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಗುರುಮಠಕಲ್ ತಾಲೂಕಿನ ಮಹಿಳೆ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದರು.

ಮಹಾರಾಷ್ಟ್ರದಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್​ಗೆ ವಾಪಸ್ ಅಗಿದ್ದರು. ಎಂಪಾಡ್ ತಾಂಡದ ಸರ್ಕಾರಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ನಿನ್ನೆ ರಾತ್ರಿಯೇ ಜಿಲ್ಲಾ ಕೊವಿಡ್ ಆಸ್ಪತ್ರೆಗೆ ಮಹಿಳೆಯನ್ನು ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.