ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ಉದ್ಯೋಗ ನೀಡಲು ವೆಬ್​ಸೈಟ್ ಲಾಂಚ್​

ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ಉದ್ಯೋಗ ನೀಡಲು ವೆಬ್​ಸೈಟ್ ಲಾಂಚ್​

ರಾಮನಗರ: ಕೊವಿಡ್‌ 19 ಬಳಿಕ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕರು ತಮ್ಮ ಮುಂದಿನ ಜೀವನದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನೊಂದೆಡೆ ಊರು ಸೇರಿರುವ ಕಾರ್ಮಿಕರಿಂದಾಗಿ ಕಾರ್ಖಾನೆಗಳು ಬಾಗಿಲು ತೆರೆದರೂ, ಕಾರ್ಯನಿರ್ವಹಣೆಯೆ ದೊಡ್ಡ ಸಮಸ್ಯೆಯಾಗಿದೆ. ಇಂತಹ ಸ್ಥಿತಿಯಲ್ಲಿ ರಾಮನಗರ ಜಿಲ್ಲಾಡಳಿತ ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ ವೆಬ್‌ಸೈಟ್‌ಯೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗ ಕಲ್ಪಿಸುವ […]

sadhu srinath

|

May 20, 2020 | 4:30 PM

ರಾಮನಗರ: ಕೊವಿಡ್‌ 19 ಬಳಿಕ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕರು ತಮ್ಮ ಮುಂದಿನ ಜೀವನದ ಬಗ್ಗೆ ಹಾಗೂ ಉದ್ಯೋಗದ ಬಗ್ಗೆ ಚಿಂತಿಸುತ್ತಿದ್ದಾರೆ. ಇನ್ನೊಂದೆಡೆ ಊರು ಸೇರಿರುವ ಕಾರ್ಮಿಕರಿಂದಾಗಿ ಕಾರ್ಖಾನೆಗಳು ಬಾಗಿಲು ತೆರೆದರೂ, ಕಾರ್ಯನಿರ್ವಹಣೆಯೆ ದೊಡ್ಡ ಸಮಸ್ಯೆಯಾಗಿದೆ.

ಇಂತಹ ಸ್ಥಿತಿಯಲ್ಲಿ ರಾಮನಗರ ಜಿಲ್ಲಾಡಳಿತ ದೇಶದಲ್ಲೇ ಮೊದಲ ಬಾರಿಗೆ ಕಾರ್ಮಿಕರಿಗೆ ಉದ್ಯೋಗ ನೀಡುವ ಸಲುವಾಗಿ ವೆಬ್‌ಸೈಟ್‌ಯೊಂದನ್ನು ಜಾರಿಗೆ ತಂದಿದೆ. ಈ ಮೂಲಕ ಉದ್ಯೋಗದಾತರು ಹಾಗೂ ಕಾರ್ಮಿಕರ ನಡುವೆ ಮಾಹಿತಿ ವಿನಿಮಯ ಮಾಡಿ ಉದ್ಯೋಗ ಕಲ್ಪಿಸುವ ವಿನೂತನ ಪ್ರಯೋಗ ನಡೆಸಿದೆ.

ಜಿಲ್ಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಕಾರ್ಮಿಕರಿದ್ದಾರೆ. ಇದರಲ್ಲಿ ಬಹುತೇಕರು ಊರು ಬಿಟ್ಟಿದ್ದಾರೆ. ಇನ್ನೊಂದಷ್ಟು ಕಾರ್ಮಿಕರು ಬೆಂಗಳೂರು ಬಿಟ್ಟು, ರಾಮನಗರ ಸೇರಿದ್ದಾರೆ. ಇಂತಹವರು ಉದ್ಯೋಗ ಇಲ್ಲದೇ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಊರು ಬಿಟ್ಟ ಕಾರ್ಮಿಕರಿಲ್ಲದೇ, ಕಾರ್ಖಾನೆಗಳು ಸಹ ಸಂಕಷ್ಟದಲ್ಲಿವೆ. ಹೀಗಾಗಿ, ಜಿಲ್ಲಾಡಳಿತವು ಇವರಿಬ್ಬರ ನಡುವಿನ ಸಂವನಹಕ್ಕೆಂದು ವೆಬ್‌ತಾಣವನ್ನು ಬಿಡುಗಡೆ ಮಾಡಿದೆ.

ರಾಮನಗರ ಜಿಲ್ಲಾಡಳಿತದ ವಿನೂತನ ಪ್ರಯತ್ನ: www.ramanagarcovid19.co.in ಈ ಲಿಂಕ್‌ ಮೂಲಕ ಕಾರ್ಮಿಕರು ಮಾತ್ರವಲ್ಲ, ಉದ್ಯೋಗ ನೀಡುವವರು ಸಹ ರಿಜಿಸ್ಟರ್‌ ಮಾಡಿಕೊಳ್ಳಬಹುದು. ಇವರಿಬ್ಬರ ಮಾಹಿತಿ ಸಂಗ್ರಹಿಸಿ, ತಾತ್ಕಲಿಕ ಉದ್ಯೋಗ ಕಲ್ಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ಮಾಡಲಿದೆ. ಕೈಗಾರಿಕೆಗಳು, ಕಾರ್ಮಿಕರು ಹಾಗೂ ಜಿಲ್ಲೆಯಲ್ಲಿರುವ ವಲಸೆ ಕಾರ್ಮಿಕರ ನೋಂದಣಿ ಮಾಡಿಕೊಳ್ಳುವ ವಿನೂತನ ಪ್ರಯತ್ನ ಇದಾಗಿದೆ.

ಜಿಲ್ಲೆಯಲ್ಲಿರುವ ಕಾರ್ಮಿಕರು ಹಾಗೂ ಬೇರೆ ರಾಜ್ಯ ಹಾಗೂ ಜಿಲ್ಲೆಗೆ ತೆರಳದೆ ಇಲ್ಲೇ ಉಳಿದಿರುವ ವಲಸೆ ಕಾರ್ಮಿಕರು ಈ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಮಾಹಿತಿಯನ್ನು ಸಂಗ್ರಹಿಸಿ ಅವಶ್ಯಕತೆ ಇರುವ ವಿಭಾಗಗಳಲ್ಲಿ ಕಾರ್ಮಿಕರಿಗೆ ಕೆಲಸ ಪಡೆಯಲು ಅನುಕೂಲ ಮಾಡಿಕೊಡುವುದು ಜಿಲ್ಲಾಡಳಿತದ ಕೆಲಸ.

ಅನಕ್ಷರಸ್ಥರೂ ಉದ್ಯೋಗ ಪಡೆದುಕೊಳ್ಳಬಹುದು: ಇನ್ನು ಕಾರ್ಖಾನೆಗಳಲ್ಲಿ ಸಹಾಯಕರ ಅವಶ್ಯಕತೆ ಇದ್ದರೆ, ಅದನ್ನು ಸಹ ಉದ್ಯೋಗ ನೀಡುವವರು ಲಿಂಕ್‌ ಮೂಲಕ ಬೇಡಿಕೆ ಸಲ್ಲಿಸಬಹುಹು. ಅನಕ್ಷರಸ್ಥರು ಉದ್ಯೋಗಕ್ಕಾಗಿ ಲಿಂಕ್‌ ಇಲ್ಲವೇ ಜಿಲ್ಲಾಡಳಿತದ ಕಂಟ್ರೋಲ್‌ ರೂಂ, ವಾರ್‌ ರೂಂಗಳಿಗೆ ನೇರವಾಗಿ ಭೇಟಿ ನೀಡಿ, ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದು. ಈ ಮೂಲಕ ಅನಕ್ಷರಸ್ಥರು ಸಹ ಉದ್ಯೋಗ ಪಡೆದುಕೊಳ್ಳಬಹುದಾಗಿದೆ.

ಜಿಲ್ಲಾಡಳಿತವು ಉದ್ಯೋಗ ಬೇಕಿರುವ ಹಾಗೂ ಉದ್ಯೋಗ ನೀಡುವವರ ನಡುವೆ ಮಾಹಿತಿ ವಿನಿಮಯ ಕೆಲಸ ಮಾಡಲಿದೆ. ತಾತ್ಕಲಿಕವಾಗಿ ಕೆಲಸ ಪಡೆಯುವವರು, ಕಂಪನಿಯ ನಿಯಮಾವಳಿಗಳಿಗೆ ಒಳಪಡಲಿದ್ದಾರೆ. ಲಾಕ್‌ಡೌನ್‌ ಬಳಿಕ ಅಗತ್ಯವಿದ್ದರೆ ತಮ್ಮ ಮೂಲ ದಾಖಲೆಗಳನ್ನು ಸಲ್ಲಿಸಿ, ತಾತ್ಕಲಿಕ ಉದ್ಯೋಗವನ್ನು ಖಾಯಂ ಮಾಡಿಕೊಳ್ಳುವುದು ಕಾರ್ಖಾನೆಗಳ ನಿಯಮಾವಳ ಮೇಲೆ ನಿಂತಿದೆ.

ಕಳೆದ ಮೂರು ದಿನಗಳಲ್ಲಿ ಬರೊಬ್ಬರಿ 618 ಮಂದಿ ಉದ್ಯೋಗಕ್ಕಾಗಿ ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರೆ, 10 ಕಂಪನಿಗಳು ತಮಗೆ ಕಾರ್ಮಿಕರ ಅಗತ್ಯ ಇದೆ ಎಂದು ಬೇಡಿಕೆ ಸಲ್ಲಿಸಿದೆ. ಈ ಮೂಲಕ ಜಿಲ್ಲಾಡಳಿತವು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದರಲ್ಲಿ ಎಲ್ಲ ವರ್ಗದ ಕಾರ್ಮಿಕರಿದ್ದು, ಅನಕ್ಷರಸ್ಥರು ನೇರವಾಗಿ ಜಿಲ್ಲಾಡಳಿತ ಭವನದಲ್ಲಿಯೇ ನೋಂದಾಯಿಸಿಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

Follow us on

Related Stories

Most Read Stories

Click on your DTH Provider to Add TV9 Kannada