ಆನೇಕಲ್ನ ಮೊದಲ ಕೊರೊನಾ ಪಾಸಿಟಿವ್ ವ್ಯಕ್ತಿ ಖಾಸಗಿ ಆಸ್ಪತ್ರೆಯಲ್ಲಿ ಸಾವು
ಆನೇಕಲ್: ಬೆಂಗಳೂರಿನಲ್ಲಿ 1,236ನೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ತಮಿಳುನಾಡಿನ ವೇಲೂರಿನಿಂದ ಬಂದಿದ್ದ ಸೋಂಕಿತ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಈತ ಆನೇಕಲ್ನಲ್ಲಿ ಮೊದಲ ಪಾಸಿಟೀವ್ ವ್ಯಕ್ತಿ. ಫಿಸಿಯೋಥೆರಪಿಸ್ಟ್ ಆಗಿದ್ದ ಮೃತ ಸೋಂಕಿತ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 17ರಂದು ಆಸ್ಪತ್ರೆಗೆ ದಾಖಲಾಗಿದ್ದ. ಮೇ 18 ರಂದು ಈತನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ಇಂದು P-1,236 ಮೃತಪಟ್ಟಿದ್ದಾರೆ. ಮೃತ ಸೋಂಕಿತ 6 ವರ್ಷದಿಂದ […]
ಆನೇಕಲ್: ಬೆಂಗಳೂರಿನಲ್ಲಿ 1,236ನೇ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ. ತಮಿಳುನಾಡಿನ ವೇಲೂರಿನಿಂದ ಬಂದಿದ್ದ ಸೋಂಕಿತ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ಮೃತಪಟ್ಟಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ. ಈತ ಆನೇಕಲ್ನಲ್ಲಿ ಮೊದಲ ಪಾಸಿಟೀವ್ ವ್ಯಕ್ತಿ.
ಫಿಸಿಯೋಥೆರಪಿಸ್ಟ್ ಆಗಿದ್ದ ಮೃತ ಸೋಂಕಿತ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮೇ 17ರಂದು ಆಸ್ಪತ್ರೆಗೆ ದಾಖಲಾಗಿದ್ದ. ಮೇ 18 ರಂದು ಈತನಿಗೆ ಕೊರೊನಾ ತಗುಲಿರುವುದು ದೃಢಪಟ್ಟಿತ್ತು. ಇಂದು P-1,236 ಮೃತಪಟ್ಟಿದ್ದಾರೆ.
ಮೃತ ಸೋಂಕಿತ 6 ವರ್ಷದಿಂದ ಬೆಂಗಳೂರಿನಲ್ಲಿ ಪತ್ನಿ ಹಾಗೂ ಮಗು ಜೊತೆ ವಾಸವಾಗಿದ್ದರು. ಮಾರ್ಚ್ 22ರಂದು ತಮಿಳುನಾಡಿನ ವೇಲೂರಿಗೆ ಈ ಕುಟುಂಬ ಹೋಗಿದೆ. ಲಾಕ್ಡೌನ್ ಘೋಷಣೆಯಾದ ನಂತರ ಮೇ 6ರಂದು ಹೆಬ್ಬಗೋಡಿಯ ಅನಂತನಗರಕ್ಕೆ ಬಂದಿದ್ರು.
ಚಂದಾಪುರದ ಜಿಪಿಆರ್ ಬಡಾವಣೆ ಸೇರಿದಂತೆ ಹಲವು ಕಡೆ ಈತ ಸುತ್ತಾಡಿದ್ದ. ಅಪಾರ್ಟ್ಮೆಂಟ್ನಲ್ಲಿದ್ದಾಗ ತನ್ನ ಸ್ನೇಹಿತ, ಮನೆಯಲ್ಲಿ ಕೆಲಸ ಮಾಡುವಾಕೆ ಹಾಗೂ ಸೆಕ್ಯೂರಿಟಿ ಜೊತೆ ಸಂಪರ್ಕ ಹೊಂದಿದ್ದ. ಈತನಿಗೆ ಸೋಂಕು ದೃಢವಾಗುತ್ತಿದ್ದಂತೆ ಅಪಾರ್ಟ್ಮೆಂಟ್, ಏರಿಯಾ ಸೀಲ್ಡೌನ್ ಮಾಡಲಾಗಿತ್ತು. ಆತನ ಪತ್ನಿ ಸೇರಿದಂತೆ ಪ್ರಾಥಮಿಕ ಸಂಪರ್ಕ ಹೊಂದಿದ್ದವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇಂದು ನಾರಾಯಣ ಹೆಲ್ತ್ ಕೇರ್‌ನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ.