
ವಿಜಯಪುರ: ಮುಳವಾಡ ಏತ ನೀರಾವರಿ ಯೋಜನೆಯ ಕಾಲುವೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಕೊಲ್ಹಾರ ತಾಲೂಕಿನ ತೆಲಗಿ ಗ್ರಾಮದ ಬಳಿಯ ಕಾಲುವೆಯಲ್ಲಿ ಮೊಸಳೆ ನೋಡಿ ಕೆಲ ಕ್ಷಣ ಜನ ಭಯಭೀತರಾಗಿದ್ದರು. ಸದ್ಯ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಾಯದೆ ಗ್ರಾಮದ ಯುವಕರೇ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ.
ಯುವಕರು ಕಾಲುವೆಯಲ್ಲಿ ಆಶ್ರಯ ಪಡೆದಿದ್ದ ಮೊಸಳೆಯನ್ನು ಹಗ್ಗದಿಂದ ಕಟ್ಟಿ ಅದನ್ನು ಅಲ್ಲಿಂದ ಮೇಲಕೆತ್ತಿ ಜನರಲ್ಲಿದ್ದ ಭಯವನ್ನು ದೂರ ಮಾಡಿದ್ದಾರೆ. ನಂತರ ತೆಲಗಿ ಗ್ರಾಮಸ್ಥರು ಸೆರೆ ಹಿಡಿದ ಮೊಸಳೆಯನ್ನು ಅರಣ್ಯ ಇಲಾಖೆಯವರಿಗೆ ಒಪ್ಪಿಸಿದ್ದಾರೆ. ಅಧಿಕಾರಿಗಳು ಮೊಸಳೆಯನ್ನು ಕೃಷ್ಣಾ ನದಿಗೆ ಬಿಟ್ಟಿದ್ದಾರೆ.

Published On - 2:49 pm, Thu, 22 October 20