
ಗದಗ: ಬಸ್ ಚಕ್ರಕ್ಕೆ ಸಿಲುಕಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ಗದಗ ನಗರದ ಮುಳಗುಂದ ನಾಕಾ ಬಳಿ ನಡೆದಿದೆ. ಉಡಚಪ್ಪ ಪೂಜಾರ(25) ಮೃತ ಯುವಕ.
ಬಸ್ ಓವರ್ ಟೆಕ್ ಮಾಡಲು ಹೋಗಿ ಯಮನ ದಾರಿ ಹಿಂಬಾಲಿಸಿದ್ದಾನೆ. ಗದಗ ತಾಲೂಕಿನ ನಾಗಾವಿ ನಿವಾಸಿಯಾಗಿರೋ ಉಡಚಪ್ಪ ಓವರ್ ಟೆಕ್ ಮಾಡುವ ವೇಳೆ ಬಸ್ ಪಕ್ಕದಲ್ಲಿ ವೇಗವಾಗಿ ಹೋಗುತ್ತಿದ್ದಾಗೆ ಬೈಕ್ ಕಲ್ಲಿಗೆ ಸ್ಕಿಡ್ ಆಗಿದೆ. ಉಡಚಪ್ಪ ನೆಲಕ್ಕೆ ಉರುಳುತ್ತಿದ್ದಂತೆ ಬಸ್ನ ಹಿಂಬದಿಯ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗದಗ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.