AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಸೇವಿಸಲು ಯೋಗ್ಯವಾದ ರುಚಿಕರ ಹಣ್ಣಿನ ಸಲಾಡ್

ಬೇಸಿಗೆಯಲ್ಲಿ ಹೆಚ್ಚು ಹಣ್ಣುಗಳನ್ನು ತಿನ್ನುವ ಮೂಲಕ ದೇಹವನ್ನು ತಂಪಾಗಿರಿಸಿಟ್ಟುಕೊಳ್ಳಬಹುದು. ಹಣ್ಣುಗಳನ್ನು ಹಾಗೆಯೇ ತಿನ್ನುವ ಬದಲು ಸಲಾಡ್ ಮಾಡಿಕೊಳ್ಳುವ ಮೂಲಕ ತಿನ್ನಬಹುದು.

ಬೇಸಿಗೆಯಲ್ಲಿ ಸೇವಿಸಲು ಯೋಗ್ಯವಾದ ರುಚಿಕರ ಹಣ್ಣಿನ ಸಲಾಡ್
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 15, 2023 | 1:27 PM

ಬೇಸಿಗೆಯ ಬಿಸಿಲಿನ ತಾಪವು ತುಂಬಾನೇ ಅಹಿತಕರವಾಗಿದೆ. ಮತ್ತು ಈ ಬೇಸಿಗೆಯಲ್ಲಿ ದೇಹದಲ್ಲಿ ನೀರಿನಾಂಶವನ್ನು ಉಳಿಸಿಕೊಳ್ಲುವುದು ಮುಖ್ಯವಾಗಿರುತ್ತದೆ. ಹೀಗಾಗಿ ನೀರು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವನೆ ಮಾಡಬೇಕಾಗುತ್ತದೆ. ಹಣ್ಣುಗಳು ನಮ್ಮ ದೇಹವನ್ನು ತಂಪಾಗಿರಿಸುತ್ತದೆ. ಮತ್ತು ಸಾಕಷ್ಟು ಜಲಸಂಚಯನವನ್ನು ಒದಗಿಸುತ್ತದೆ. ಜೊತೆಗೆ ಇವುಗಳು ಮೆಗ್ನೇಸಿಯಂ, ಪೊಟ್ಯಾಸಿಯಂ, ಕಬ್ಬಿಣದಂತಹ ಅಗತ್ಯ ಜೀವಸತ್ವಗಳು ಮತ್ತು ಖನಿಜಗಳ ಉಗ್ರಾಣವಾಗಿದೆ. ಅವುಗಳು ನಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಕಾಲೋಚಿತ ರೋಗಗಳ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಣ್ಣುಗಳನ್ನು ಸಲಾಡ್​ಗಳು, ಸ್ಮೂಥಿಗಳು, ಜ್ಯೂಸ್​ಗಳ ರೂಪದಲ್ಲಿ ಸವಿಯಬಹುದು.

ಹೋಲಿಸ್ಟಿಕ್ ಹೆಲ್ತ್ ಕೋಚ್ ಅಜರ್ ಅಲಿ ಸೈಯದ್ ಅವರು ಬೇಸಿಗೆ ಕಾಲದಲ್ಲಿ ಸೇವನೆ ಮಾಡಬೇಕಾದ ಹಣ್ಣಿನ ಸಲಾಡ್ ಬಗ್ಗೆ ತಿಳಿಸಿಕೊಟ್ಟಿದ್ದಾರೆ:

ಉಷ್ಣವಲಯದ ಹಣ್ಣುಗಳ ಸಲಾಡ್: ಇದು ಬೇಸಿಗೆಯಲ್ಲಿ ಸೇವಿಸಲು ಯೋಗ್ಯವಾದ ಹಣ್ಣಿನ ಸಲಾಡ್ ಆಗಿದೆ. ಮಾವು, ಅನಾನಸ್, ಪಪ್ಪಾಯಿ ಮತ್ತು ಕಿವಿ ಹಣ್ಣುಗಳನ್ನು ನಿಂಬೆ ರಸದೊಂದಿಗೆ ಬೆರೆಸಿ ಈ ಸಲಾಡ್ ತಯಾರಿಸಬಹುದು. ಇದು ರುಚಿಕರವಾದದ್ದು ಮಾತ್ರವಲ್ಲದೆ, ಇದು ಜೀವಸತ್ವಗಳು ಮತ್ತು ಖನಿಜಗಳಂತಹ ಪೋಷಕಾಂಶಗಳಿಂದ ಕೂಡಿದೆ.

ಬೆರ್ರಿ ಮತ್ತು ಕಲ್ಲಂಗಡಿ ಸಲಾಡ್: ಕಲ್ಲಂಗಡಿ, ಸ್ಟ್ರಾಬೆರಿ, ರಾಸ್ಬೆರಿಗಳಂತಹ ಬೆರ್ರಿಹಣ್ಣುಗಳಿಂದ ತಯಾರಿಸಲ್ಪಟ್ಟ ಈ ಹಣ್ಣಿನ ಸಲಾಡ್ ಸಿಹಿ ಮತ್ತು ರಿಫ್ರೆಶಿಂಗ್ ಆಗಿದೆ. ಈ ಹಣ್ಣಿನ ಮಿಶ್ರಣಕ್ಕೆ ಒಂದು ಚಮಚ ಜೇನುತುಪ್ಪ ಮತ್ತು ತಾಜಾ ಪುದೀನಾವನ್ನು ಬೆರೆಸಿ ತಿನ್ನಬಹುದು.

ಪೀಚ್ ಮತ್ತು ಏಪ್ರಿಕಾಟ್ ಸಲಾಡ್: ಪೀಚ್ ಮತ್ತು ಏಪ್ರಿಕಾಟ್ (ಜಲ್ದಾರ್) ಹಣ್ಣುಗಳು ಕೆಲವು ಜನಪ್ರಿಯ ಬೇಸಿಗೆ ಹಣ್ಣುಗಳಾಗಿವೆ. ಈ ಹಣ್ಣುಗಳ ಸಲಾಡ್ ಬೌಲ್ ಗೆ ಪುದೀನಾ ಮತ್ತು ನಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿ ಸವಿಯಬಹುದು.

ಇದನ್ನೂ ಓದಿ: Summer Health Tips: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದೇ? ತಜ್ಞರು ನೀಡಿರುವ ಸಲಹೆ ಇಲ್ಲಿದೆ

ಸಿಟ್ರಸ್ ಸಲಾಡ್: ಕಿತ್ತಳೆ, ದ್ರಾಕ್ಷಿಯಂತಹ ಸಿಟ್ರಸ್ ಹಣ್ಣುಗಳಿಂದ ಈ ಸಲಾಡ್ ತಯಾರಿಸಲಾಗುತ್ತದೆ. ಇವುಗಳು ರಸಭರಿತ ಮತ್ತು ಸ್ವಲ್ಪ ಹುಳಿಯಾಗಿರತ್ತದೆ. ಇವುಗಳ ಮೇಲೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ. ಇದು ಅತ್ಯಂತ ಉಲ್ಲಾಸಕರ ರುಚಿಯನ್ನು ನೀಡುತ್ತದೆ.

ಮೆಲನ್ ಸಲಾಡ್: ಕಲ್ಲಂಗಡಿ, ಕರ್ಬೂಜ ಹಣ್ಣುಗಳಂತಹ ರಸಭರಿತ ಮೆಲನ್ ಹಣ್ಣುಗಳಿಂದ ಈ ಸಲಾಡ್ ತಯಾರಿಸಲಾಗುತ್ತದೆ. ಇದರ ರುಚಿಯನ್ನು ಹೆಚ್ಚಿಸಲು ಇವುಗಳ ಮೇಲೆ ಸ್ವಲ್ಪ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಬೆಕಾಗುತ್ತದೆ. ಈ ಹಣ್ಣುಗಳ ಸಲಾಡ್ ಬೆಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಸಹಾಯ ಮಾಡುತ್ತದೆ.

ಈ ಸಲಾಡ್​​ಗಳು ಅನಾರೋಗ್ಯಕರ ಆಹಾರಗಳಿಗೆ ಅದ್ಭುತ ಪರ್ಯಾಯವಾಗಿದೆ ಮತ್ತು ಬೇಸಿಗೆಯ ಸಮಯದಲ್ಲಿ ದೇಹವನ್ನು ತಂಪಾಗಿರಿಸಲು ಮತ್ತು ಉಲ್ಲಾಸಕರವಾಗಿರಲು ಸಹಾಯ ಮಾಡುತ್ತದೆ. ಇವುಗಳು ರುಚಿಕರ ಮಾತ್ರವಲ್ಲದೆ, ಪೌಷ್ಟಿಕಾಂಶಯುಕ್ತವಾಗಿದೆ. ಈ ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲಿ ಈ ಸಲಾಡ್ಗಳನ್ನು ಒಮ್ಮೆ ಪ್ರಯತ್ನಿಸಿ ಎಂದು ಸೈಯದ್ ಹೇಳುತ್ತಾರೆ.

Published On - 1:27 pm, Sat, 15 April 23