ಗಂಡನ ಮನೆಗೆ ಸೇರಿದ ಹೆಣ್ಣು ಈ ಎರಡು ಕರ್ತವ್ಯ ಪಾಲಿಸಲೇಬೇಕು
ಮಹಾಭಾರತ ಮತ್ತು ಭಾಗವತದಲ್ಲಿಯೂ ಅನೇಕ ಕಡೆ ಹೆಣ್ಣು ಏನು ಮಾಡಿದರೆ ಪುಣ್ಯ ಲಭಿಸುತ್ತದೆ, ಮನೆಗೆ ಯಾವಾಗ ದಾರಿದ್ರ್ಯ ಬರುತ್ತದೆ ಎಂಬ ಕುರಿತಾಗಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ, ಮಹಾಭಾರತ ಮತ್ತು ಭಾಗವತದಲ್ಲಿ ಬೋಧಿಸುವ ಪ್ರಕಾರ ಗಂಡನ ಮನೆಗೆ ಸೇರಿದ ಹೆಣ್ಣು, ಎರಡು ರೀತಿಯ ಕರ್ತವ್ಯ ಪಾಲಿಸಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಆ ಕರ್ತವ್ಯವೇನು? ಪಾಲನೆ ಮಾಡಿದರೆ ಸಿಗುವ ಫಲವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಸಾಮಾನ್ಯವಾಗಿ ಹೆಣ್ಣನ್ನು ಧಾರೆ ಎರೆದು ಕೊಟ್ಟ ಮೇಲೆ ಆಕೆ ಗಂಡನ ಮನೆಯವಳಾಗುತ್ತಾಳೆ. ಅವಳು ಮಾಡುವ ಪ್ರತಿ ಒಳ್ಳೆಯ ಕೆಲಸವೂ ಆಕೆಯ ಕುಟುಂಬಕ್ಕೆ ವರದಾನವಾಗಿ ಪರಿಣಮಿಸುತ್ತದೆ. ಮಹಾಭಾರತ ಮತ್ತು ಭಾಗವತದಲ್ಲಿಯೂ ಅನೇಕ ಕಡೆ ಹೆಣ್ಣು ಏನು ಮಾಡಿದರೆ ಪುಣ್ಯ ಲಭಿಸುತ್ತದೆ, ಮನೆಗೆ ಯಾವಾಗ ದಾರಿದ್ರ್ಯ ಬರುತ್ತದೆ ಎಂಬ ಕುರಿತಾಗಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಅದರಂತೆ ಮಹಾಭಾರತ ಮತ್ತು ಭಾಗವತದಲ್ಲಿ ಬೋಧಿಸುವ ಪ್ರಕಾರ ಗಂಡನ ಮನೆಗೆ ಸೇರಿದ ಹೆಣ್ಣು, ಎರಡು ರೀತಿಯ ಕರ್ತವ್ಯ ಪಾಲಿಸಬೇಕು ಎಂದು ಹೇಳಲಾಗುತ್ತದೆ. ಹಾಗಾದರೆ ಆ ಕರ್ತವ್ಯವೇನು? ಪಾಲನೆ ಮಾಡಿದರೆ ಸಿಗುವ ಫಲವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊದಲನೇಯದು, ಹೆಣ್ಣು ಗಂಡನಿಗೆ ಕಣ್ಣು ತಿರುಗಿಸಿ ಮಾತನಾಡಬಾರದು. ಏಕೆಂದರೆ ಗಂಡ ಪರದೈವ. ಸಾಕ್ಷಾತ್ ಲಕ್ಷ್ಮೀ ದೇವಿಯೇ ತನ್ನ ಗಂಡನ ಕಾಲು ಒತ್ತುತ್ತಾಳೆ. ಹಾಗಾಗಿ ಗಂಡ, ಹೆಂಡತಿ ಪರಸ್ಪರ ತಮ್ಮ ತಮ್ಮ ಸೇವೆ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಅದು ಸುಖಸಂಸಾರದ ಸೂತ್ರಗಳಲ್ಲಿ ಒಂದು. ಹಾಗಾಗಿ ಹೆಂಡತಿಯಾದವಳು ಕೂಡ ತನ್ನ ಗಂಡನ ಬಗ್ಗೆ ಯಾವುದೇ ರೀತಿಯಲ್ಲಿಯೂ ತಪ್ಪು ಭಾವನೆಯನ್ನು ಬೆಳೆಸಿಕೊಳ್ಳಬಾರದು. ಗಂಡನನ್ನು ಆದಷ್ಟು ಸಂತೋಷ ಪಡಿಸಬೇಕು. ಆಕೆ ಇದರಿಂದ ಸಂಸ್ಕಾರವಂತ ಮಕ್ಕಳನ್ನು ಪಡೆದರೆ ನಾಲ್ಕು ವೇದಗಳನ್ನು ಅಧ್ಯಯನ ಮಾಡಿದ ಪುಣ್ಯ ಅನಾಯಾಸವಾಗಿ ಹೆಣ್ಣಿಗೆ ಲಭಿಸುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ.
ಇನ್ನು ಎರಡನೇಯದು, ಯಾವುದೇ ರೀತಿಯ ಸತ್ಕರ್ಮ ಮಾಡಬೇಕಾದರೂ ಕೂಡ ಗಂಡನ ಜೊತೆಗೆ ಮಾಡಬೇಕು. ಹೆಂಡತಿ ಕೈಗೆ ನೀರು ಹಾಕಲಿಲ್ಲ ಎಂದರೆ ಆ ದಾನದ ಪುಣ್ಯವೇ ಬರುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಕೋಪ, ಜಗಳ ಏನೇ ಇರಲಿ ಹೆಂಡತಿಯ ಜೊತೆಗೆ ಗಂಡ ಇಬ್ಬರೂ ಸೇರಿ ನೀರು ಬಿಟ್ಟು ದರ್ಪಣವನ್ನು ಕೊಡಬೇಕು ಎಂದು ಧರ್ಮ ಗ್ರಂಥಗಳು ಹೇಳುತ್ತವೆ. ಇಲ್ಲವಾದಲ್ಲಿ ಯಾವುದೇ ರೀತಿಯ ಪುಣ್ಯ ಫಲ ಸಿಗುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ