AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eunice Newton Foote: ಹಸಿರುಮನೆಯ ಪರಿಣಾಮ ಕಂಡುಹಿಡಿದ ಮಹಿಳಾ ವಿಜ್ಞಾನಿಗೆ ಗೂಗಲ್‌ ಡೂಡಲ್​​ನಿಂದ​​ ವಿಶೇಷ ಗೌರವ

ಅಮೆರಿಕಾದ ಮಹಿಳಾ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ ಅವರಿಗೆ ಇಂದು (ಜುಲೈ 17) ಗೂಗಲ್‌ ಡೂಡಲ್‌​​ ವಿಶೇಷ ಗೌರವವನ್ನು ಸಲ್ಲಿಸಿದೆ.

Eunice Newton Foote: ಹಸಿರುಮನೆಯ ಪರಿಣಾಮ ಕಂಡುಹಿಡಿದ ಮಹಿಳಾ ವಿಜ್ಞಾನಿಗೆ ಗೂಗಲ್‌ ಡೂಡಲ್​​ನಿಂದ​​ ವಿಶೇಷ ಗೌರವ
ಯುನಿಸ್ ನ್ಯೂಟನ್ ಫೂಟ್​​ಗೆ ವಿಶೇಷ ಗೌರವ ನೀಡಿದ ಗೂಗಲ್
ಅಕ್ಷಯ್​ ಪಲ್ಲಮಜಲು​​
|

Updated on: Jul 17, 2023 | 12:14 PM

Share

ಹಸಿರು ಮನೆಯ ಪರಿಣಾಮ ಮತ್ತು ಜಾಗತಿಕ ತಾಪಮಾನದ ಮೇಲಿನ ಪರಿಣಾಮವನ್ನು ಗುರುತಿಸಿದ ಅಮೆರಿಕಾದ ಮಹಿಳಾ ವಿಜ್ಞಾನಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಯುನಿಸ್ ನ್ಯೂಟನ್ ಫೂಟ್ (Eunice Newton Foote) ಅವರಿಗೆ ಇಂದು (ಜುಲೈ 17) ಗೂಗಲ್‌ ಡೂಡಲ್‌​​ ವಿಶೇಷ ಗೌರವವನ್ನು ಸಲ್ಲಿಸಿದೆ. ಆಕೆ ಪರಿಸರ ವಿಜ್ಞಾನಕ್ಕೆ ನೀಡಿದ ಕೊಡುಗೆಗೆ ಈ ಗೌರವ ನೀಡಿದೆ ಎಂದು ಹೇಳಲಾಗಿದೆ. 1819ರಲ್ಲಿ ಅಮೆರಿಕದ ಕನೆಕ್ಟಿಕಟ್‌ನಲ್ಲಿ ಜನಿಸಿದ ಯುನಿಸ್ ನ್ಯೂಟನ್ ಫೂಟ್, ಫೂಟ್ ಟ್ರಾಯ್ ಫೀಮೇಲ್ ಸೆಮಿನರಿ ಎಂಬ ಶಾಲೆಯ ಕಲಿಯುತ್ತಿರಬೇಕಾದರೆ, ವಿಜ್ಞಾನ ತರಗತಿಗಳಿಗೆ ಹಾಜರಾಗಲು ಮತ್ತು ಪ್ರಯೋಗಗಳಿಗಾಗಿ ರಸಾಯನಶಾಸ್ತ್ರ ಪ್ರಯೋಗಾಲಯಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿತ್ತು, ಈ ಪ್ರೋತ್ಸಾಹ ಅವರ ಮೇಲೆ ಪರಿಣಾಮವನ್ನು ಉಂಟು ಮಾಡಿ, ವಿಜ್ಞಾನ ಕ್ಷೇತ್ರದಲ್ಲಿ ಮಹತ್ವ ಸಾಧನೆ ಮಾಡಲು ಸಾಧ್ಯವಾಗಿತ್ತು.

ಅಂದಿನ ಕಾಲಘಟ್ಟದಲ್ಲಿ ಮುಹಿಳೆಯರನ್ನು ವೈಜ್ಞಾನಿಕ ಕ್ಷೇತ್ರದಿಂದ ದೂರು ಇಡುತ್ತಿದ್ದರು. ಆ ಸಮಯದಲ್ಲಿ ಅಂದರೆ 1856ರಲ್ಲಿ ಅವರು ನಡೆಸಿದ ಒಂದು ಪ್ರಯೋಗದಿಂದ ಇಂದಿನ ಹವಾಮಾನ ಬದಲಾವಣೆಯ ತಿಳುವಳಿಕೆಯನ್ನು ರೂಪಿಸಿತು. ಇವರು ಮೊದಲು ಮಾಡಿದ ಪ್ರಯೋಗ ಗಾಜಿನ ಸಿಲಿಂಡರ್‌ಗಳಲ್ಲಿ ಪಾದರಸದ ಥರ್ಮಾಮೀಟರ್‌ಗಳನ್ನು ಇರಿಸಿದ ನಂತರ, ಕಾರ್ಬನ್ ಡೈಆಕ್ಸೈಡ್ ಹೊಂದಿರುವ ಸಿಲಿಂಡರ್ ಸೂರ್ಯನಲ್ಲಿ ಅತ್ಯಂತ ಗಮನಾರ್ಹವಾದ ತಾಪನ ಪರಿಣಾಮವನ್ನು ಅನುಭವಿಸುತ್ತದೆ ಎಂಬುದನ್ನು ಇವರು ಕಂಡುಹಿಡಿದರು. ಇದರ ಪರಿಣಾಮವಾಗಿ, ಏರುತ್ತಿರುವ ಇಂಗಾಲದ ಡೈಆಕ್ಸೈಡ್ ಮಟ್ಟಗಳು ಮತ್ತು ವಾತಾವರಣದ ಉಷ್ಣತೆಯ ನಡುವಿನ ಸಂಪರ್ಕವನ್ನು ಕಂಡುಹಿಡಿದ ಮೊದಲ ವಿಜ್ಞಾನಿಯಾಗಿದ್ದರು.

ಇದನ್ನೂ ಓದಿ:  ಅಪ್ರತಿಮ ನೃತ್ಯಸಂಯೋಜಕ ವಿಲ್ಲಿ ನಿಂಜಾಗೆ ಗೂಗಲ್​ ಡೂಡಲ್​ ಗೌರವ

ಇವರು ತನ್ನ ಸಂಶೋಧನೆಗಳನ್ನು ಪ್ರಕಟಿಸಿದ ನಂತರ, ವಾತಾವರಣದ ಸ್ಥಿರ ವಿದ್ಯುತ್ ಎಂಬ ಎರಡನೇ ಅಧ್ಯಯನವನ್ನು ತಯಾರಿಸಿದರು. ಅವರು ಎರಡು US ಭೌತಶಾಸ್ತ್ರ ಅಧ್ಯಯನಗಳನ್ನು ಪ್ರಕಟಿಸಿದ್ದಾರೆ. ಈ ಕಾರಣಕ್ಕೆ ಅವರು ಎರಡು ಅಧ್ಯಯನಗಳನ್ನು ಪ್ರಕಟಿಸಿದ ಮೊದಲನೆಯ ಮಹಿಳೆ ಎಂಬ ಖ್ಯಾತಿಯನ್ನು ಪಡೆದರು. ಆ ನಂತರ ಹಸಿರುಮನೆ ಪರಿಣಾಮ ಎಂದು ಕರೆಯಲ್ಪಡುವ ಹೆಚ್ಚಿನ ಪ್ರಯೋಗಗಳನ್ನು ಮಾಡಲು ಪ್ರಾರಂಭಿಸಿದರು. ಇಂದು, ಪ್ರಪಂಚದಾದ್ಯಂತದ ವಿಜ್ಞಾನಿಗಳು ಹವಾಮಾನ ವಿಜ್ಞಾನವನ್ನು ಮುನ್ನಡೆಸುತ್ತಿದ್ದಾರೆ ಎಂಬುದಕ್ಕೆ ಇವರೇ ಕಾರಣ, ಅವರು ಹಾಕಿದ ಅಡಿಪಾಯಕ್ಕೆ ಧನ್ಯವಾದಗಳು ಎಂದು ವಿಜ್ಞಾನ ಲೋಕವೇ ಹೇಳಿತ್ತು.

ಇಷ್ಟು ಮಾತ್ರವಲ್ಲದೆ ಯುನಿಸ್ ನ್ಯೂಟನ್ ಫೂಟ್ ಅವರು ಮಹಿಳೆಯರ ಹಕ್ಕುಗಳ ಪ್ರಚಾರಕ್ಕೂ ಸಮಯವನ್ನು ನೀಡಿದರು. 1848 ರಲ್ಲಿ, ಮಿಸ್ ಫೂಟ್ ಸೆನೆಕಾ ಫಾಲ್ಸ್‌ನಲ್ಲಿ ನಡೆದ ಮೊದಲ ಮಹಿಳಾ ಹಕ್ಕುಗಳ ಸಮಾವೇಶದಲ್ಲಿ ಭಾಗವಹಿಸಿದರು. ಸಾಮಾಜಿಕ ಮತ್ತು ಕಾನೂನು ಸ್ಥಾನಮಾನದಲ್ಲಿ ಮಹಿಳೆಯರಿಗೆ ಸಮಾನತೆಯನ್ನು ನೀಡಬೇಕು ಎಂಬುದಕ್ಕೆ ಒತ್ತು ನೀಡಿದರು. ಯುನಿಸ್ ನ್ಯೂಟನ್ ಫೂಟ್ 1888 ರಲ್ಲಿ ಅವರ ಮರಣದ ನಂತರ ಇವರ ಒಂದು ಶತಮಾನದ ಸಾಧನೆಗೆ ಗೌರವ ನೀಡಲಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!