Paris Fashion Week: ಬಟ್ಟೆಗೆ ಬೆಂಕಿ ಹಚ್ಚಿದ್ದರೂ ಹೇಗೆ ರ್‍ಯಾಂಪ್‌ ವಾಕ್​​ ಮಾಡುತ್ತಿದ್ದಾರೆ ನೋಡಿ

|

Updated on: Mar 02, 2023 | 4:35 PM

ಫ್ಯಾಶನ್ ಶೋ ಎಂದರೇನೇ ಹಾಗೆ, ಅಲ್ಲಿ ಎನಾದರೊಂದಿಗೆ ವಿಭಿನ್ನ ರೀತಿಯ ಬಟ್ಟೆಗಳು ಪ್ರತೀ ಬಾರಿ ಸುದ್ದಿಯಾಗುತ್ತಲೇ ಇರುತ್ತದೆ. ಇದೀಗಾ ಮಾಡೆಲ್​ ಒಬ್ಬರು ಸಂಪೂರ್ಣವಾಗಿ ಕಪ್ಪು ಬಟ್ಟೆಯನ್ನು ಧರಿಸಿದ್ದು, ಆ ಬಟ್ಟೆಗೆ ಅಲ್ಲಲ್ಲಿ ಬೆಂಕಿಯನ್ನು ಹಚ್ಚಲಾಗಿದೆ.

Paris Fashion Week: ಬಟ್ಟೆಗೆ ಬೆಂಕಿ ಹಚ್ಚಿದ್ದರೂ ಹೇಗೆ ರ್‍ಯಾಂಪ್‌ ವಾಕ್​​ ಮಾಡುತ್ತಿದ್ದಾರೆ ನೋಡಿ
Image Credit source: Instagram
Follow us on

ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಮಾಡೆಲ್​​ ಒಬ್ಬರು ಬೆಂಕಿ ಹಚ್ಚಿಕೊಂಡಿದ್ದ ಬಟ್ಟೆಯನ್ನು ಧರಿಸಿ ರ್‍ಯಾಂಪ್‌ ವಾಕ್ ಮಾಡಿದ್ದಾರೆ. ಏನಿದು ಬಟ್ಟೆ, ಈ ಬಟ್ಟೆಗೆ ಬೆಂಕಿ ತಗುಲಿದರೂ ಕೂಡ ಯಾವುದೇ ಅಪಾಯವಿಲ್ಲವೇ? ಎಂದು ಸಾಕಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನಿಸಿದ್ದಾರೆ. ಅಕ್ಷರಶಃ ಜ್ವಾಲೆಯಿಂದ ಆವೃತವಾದ ಬಟ್ಟೆ ಧರಿಸಿ ರಾಂಪ್‌ನಲ್ಲಿ ನಡೆಯುತ್ತಿರುವುದು ಇದೀಗಾ ಸಕ್ಕತ್ತ್​​ ಆಗಿ ವೈರಲ್​​ ಆಗಿದೆ. ಆ ವಿಡಿಯೋ ಇಲ್ಲಿದೆ ನೋಡಿ.

ಇದನ್ನೂ ಓದಿ: ತನ್ನ ಗಲ್​ಫ್ರೆಂಡ್​ಗೆ ಖರ್ಚಿಲ್ಲದೇ ನೆಕ್ಲೇಸ್​​​​​ ಗಿಫ್ಟ್ ಕೊಟ್ಟ ಹುಡುಗ, ಇಲ್ಲಿದೆ ನೋಡಿ ಫೋಟೋ

ಫ್ಯಾಶನ್ ಶೋ ಎಂದರೇನೇ ಹಾಗೆ, ಅಲ್ಲಿ ಎನಾದರೊಂದಿಗೆ ವಿಭಿನ್ನ ರೀತಿಯ ಬಟ್ಟೆಗಳು ಪ್ರತೀ ಬಾರಿ ಸುದ್ದಿಯಾಗುತ್ತಲೇ ಇರುತ್ತದೆ. ರನ್‌ವೇಯಲ್ಲಿ ಗಿಮಿಕ್‌ಗಳನ್ನು ಎಳೆಯುವುದು ಫ್ಯಾಷನ್ ವಾರದಲ್ಲಿ ಬ್ರ್ಯಾಂಡ್‌ಗಳಿಗೆ ಸಾಕಷ್ಟು ಸಾಮಾನ್ಯ ದೃಶ್ಯವಾಗಿದೆ. ಇದೀಗಾ ಮಾಡೆಲ್​ ಒಬ್ಬರು ಸಂಪೂರ್ಣವಾಗಿ ಕಪ್ಪು ಬಟ್ಟೆಯನ್ನು ಧರಿಸಿದ್ದು, ಆ ಬಟ್ಟೆಗೆ ಅಲ್ಲಲ್ಲಿ ಬೆಂಕಿಯನ್ನು ಹಚ್ಚಲಾಗಿದೆ. ಆದರೆ ಬೆಂಕಿಯಿಂದ ಬಟ್ಟೆಯನ್ನು ಧರಿಸಿದ ಮಾಡೆಲ್​​ ಯಾವುದೇ ರೀತಿಯಲ್ಲೂ ಬೆಂಕಿ ತಗುಲಲ್ಲಿಲ್ಲ. ಡ್ಯಾನಿಶ್ ಬ್ರ್ಯಾಂಡ್ ಹೆಲಿಯಟ್ ಎಮಿಲ್‌ನ ಪ್ರದರ್ಶನದ ಸಮಯದಲ್ಲಿ ಮಾಡೆಲ್, ಕಪ್ಪು ಉಡುಪಿನಲ್ಲಿ, ಪ್ಯಾರಿಸ್ ಫ್ಯಾಶನ್ ವೀಕ್‌ನಲ್ಲಿ ಜ್ವಾಲೆಯಿಂದ ಆವೃತವಾದ ರನ್‌ವೇಯಲ್ಲಿ ನಡೆದಿದ್ದಾರೆ. ಹೆಲಿಯಟ್ ಎಮಿಲ್ ಯುನಿಸೆಕ್ಸ್ ಫ್ಯಾಶನ್ ಲೇಬಲ್ ಎಂದು ಹೆಸರುವಾಸಿಯಾಗಿದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 4:34 pm, Thu, 2 March 23