ಸಿನೆಮಾ ನಟ ನಟಿಯರಯ ತಾವು ಮಾಡುವ ಪಾತ್ರಗಳಿಗೆ ಅನುಗುಣವಾಗಿ ತಮ್ಮ ದೇಹವನ್ನು ರೂಪಂತರಗೊಳಿಸುತ್ತಾರೆ. ದೇಹವನ್ನು ತೆಳ್ಳಗಾಗಿಸುವ ಮೂಲಕ, ಸಿಕ್ಸ್ ಪ್ಯಾಕ್ ಹೊಂದುವ ಮೂಲಕ, ದೇಹ ತೂಕವನ್ನು ಹೆಚ್ಚಿಸುವುದು ಈ ರೀತಿಯಾಗಿ ಹಲವಾರು ರೂಪಾಂತರಗಳನ್ನು ಮಾಡುತ್ತಿರುತ್ತಾರೆ. ಸೈಝ್ ಜೀರೋ ಚಿತ್ರಕ್ಕಾಗಿ ನಟಿ ಅನುಷ್ಕಾ ಶೆಟ್ಟಿ ದೇಹ ತೂಕವನ್ನು ಹೆಚ್ಚಿಸಿಕೊಂಡಿದ್ದರು. ಹೀಗೆ ನಟ ನಟಿಯರು ತಮ್ಮ ಚಿತ್ರಗಳಿಗಾಗಿ ದೇಹರೂಪಾಂತರಗಳನ್ನು ಮಾಡಿರುವ ಅನೇಕ ಉದಾಹರಣೆಗಳಿವೆ. ಪ್ರಸ್ತುತ ನಟಿ ತಾಪ್ಸಿ ಅವರು ತಮ್ಮ ಸಿಕ್ಸ್-ಪ್ಯಾಕ್‌ನಿಂದಾಗಿ ಸುದ್ದಿಯಲ್ಲಿದ್ದಾರೆ. ತಾಪ್ಸಿ ಪನ್ನು ಇನ್ಟಾಗ್ರಾಮ್‌ನಲ್ಲಿ ತಮ್ಮ ತಮ್ಮ ಅತ್ಯಾಕರ್ಷಕ ದೇಹ ರೂಪಾಂತರದ ಫೋಟೊವನ್ನು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ನಟಿಯ ಸಿಕ್ಸ್ ಪ್ಯಾಕ್ ಎಬಿಎಸ್‌ನ್ನು ಕೂಡಾ ನಾವು ನೋಡಬಹುದು. ನಟಿಯ ಹೊಸ ನೋಟದ ಈ ಪೋಸ್ಟ್ ಕೆಲವೇ ಸಮಯದಲ್ಲಿ ವೈರಲ್ ಆಗಿ ಎಲ್ಲರ ಉಬ್ಬೇರಿಸುವಂತೆ ಮಾಡಿದೆ. ತಾವು ನಟಿಸುವ ಚಲನಚಿತ್ರಗಳಿಗೆ ಅನುಗುಣವಾಗಿ ನಟಿ ತಾಪ್ಸೀ ದೇಹ ರೂಪಾಂತರಗಳನ್ನು ಮಾಡಿಕೊಳ್ಳುತ್ತಾ ಇರುತ್ತಾರೆ. ಇತ್ತೀಚಿಗೆ ಇನ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಅವರ ಸಿಕ್ಸ್-ಪ್ಯಾಕ್ ಲುಕ್ ಸಕ್ಕತ್ ವೈರಲ್ ಆಗುತ್ತಿದ್ದೆ. ನಟಿಗೆ ದೇಹ ರೂಪಾಂತರ ಮತ್ತು ಸಮಗ್ರ ಯೋಗಕ್ಷೇಮದ ಮಾರ್ಗದರ್ಶನವನ್ನು ಅವರ ಡಯೆಟೀಷಿಯನ್ ಮುನ್ಮುನ್ ಗನೇರಿವಾಲ್ ನೀಡುತ್ತಿದ್ದಾರೆ. ನಟಿಯ ಇತ್ತೀಚಿನ ಸಿಕ್ಸ್-ಪ್ಯಾಕ್ ಲುಕ್ ಹಿಂದೆ ಇವರ ಶ್ರಮವೂ ಇದೆ. ಮತ್ತು ನಟಿ ಸಿಕ್ಸ್ಪ್ಯಾಕ್ ಮಾಡಲು ತೆಗೆದುಕೊಂಡ ಸಮಯ ಮತ್ತು ಅದರ ಎಲ್ಲಾ ಪ್ರಯತ್ನಗಳ ಬಗ್ಗೆ ಡಯೆಟೀಷಿಯನ್ ಮುನ್ಮುನ್ ಗನೇರಿವಾಲ್ ತಿಳಿಸಿದ್ದಾರೆ.
ನವೆಂಬರ್ ತಿಂಗಳಲ್ಲಿ ನಟಿ ತಾಪ್ಸಿ ಸಿಕ್ಸ್ ಪ್ಯಾಕ್ ಎಬಿಸಿ ಹೊಂದಲು ಬಯಸುತ್ತೇನೆ. ಮತ್ತು ಈ ದೇಹ ರೂಪಾಂತರವನ್ನು ಮಾಡಲು ಎಷ್ಟು ತಿಂಗಳು ಬೇಕಾಗಬಹುದು ಮತ್ತು ಅದಕ್ಕೆ ತಕ್ಕಂತೆ ತಾನು ನನ್ನ ಶೂಟ್‌ನ್ನು ಯೋಜಿಸುತ್ತೇನೆ ಎಂದು ಡಯೆಟೀಷಿಯನ್‌ಗೆ ಹೇಳಿದ್ದರಂತೆ. ಮತ್ತು ಆ ಶೂಟ್‌ನಲ್ಲಿ ನಟಿ ಸಿಕ್ಸ್-ಪ್ಯಾಕ್ ಎಬಿಸಿಯನ್ನು ತೋರಿಸಬೇಕಾಗಿತ್ತು.
ಡಯೆಟಿಷಿಯನ್ ಇದರ ಬಗ್ಗೆ ಮಾತನಾಡುತ್ತಾ, ತಾಪ್ಸಿಯೊಂದಿಗೆ ನಾವು ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ ಮತ್ತು ಅವರು ಯಾವಾಗಲೂ ನನ್ನೊಂದಿಗೆ ಸ್ಟಿಕ್ಟ್ ಡಯೆಟ್ ಪಾಲಿಸುವುದರಿಂದ ಅಂದಿನಿಂದಲೂ ಅವರು ಉತ್ತಮ ಸ್ಥಿತಿಯಲ್ಲಿದ್ದಾರೆ. ಆದ್ದರಿಂದ ಅವರು ಯಾವಾಗಲೂ ತನ್ನ ದೇಹ ಫಿಟ್‌ನೆಸ್‌ನಲ್ಲಿ ಉತ್ತಮ ವಲಯದಲ್ಲಿದ್ದಾರೆ. ಹೀಗಾಗಿ ತಾಪ್ಸಿ ಸಿಕ್ಸ್-ಪ್ಯಾಕ್ ಎಬಿಸಿ ಹೊಂದಲು ಕೇವಲ ಮೂರು ನಾಲ್ಕು ತಿಂಗಳುಗಳು ಸಾಕು ಎಂದಿದ್ದಾರೆ.
ಇದರ ಬಗ್ಗೆ ಮಾತನಾಡುತ್ತಾ ಡಯೆಟಿಷಿಯನ್ ಮುನ್ಮುನ್ ಗನೇರಿವಾಲ್ ಹೇಳುತ್ತಾರೆ, ಸಿಕ್ಸ್-ಪ್ಯಾಕ್ ಎಬಿಸಿಗಾಗಿ, ನಾವು ತಾಪ್ಸಿಯವರ ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವನ್ನು ಕಡಿಮೆ ಮಾಡಬೇಕಾಗಿತ್ತು. ಅವರು ತೂಕವನ್ನು ಸ್ವಲ್ಪ ಕಡಿಮೆಯಾಗಬೇಕಿತ್ತು ಮತ್ತು ಅವರ ದೇಹವನ್ನು ಟೋನ್ ಮಾಡಬೆಕಾಗಿತ್ತು. ರಶ್ಮಿ ರಾಕೆಟ್ ಚಿತ್ರಕ್ಕಾಗಿ ಅವರು ಮಾಡಿದ ದೇಹ ರೂಪಾಂತರಕ್ಕಿಂತ ಇದು ತುಂಬಾ ವಿಭಿನ್ನವಾಗಿತ್ತು. ಏಕೆಂದರೆ ಆ ಚಿತ್ರದಲ್ಲಿ ತಾಪ್ಸಿ ಸ್ನಾಯುವಿನ ತೂಕವನ್ನು ಹೆಚ್ಚು ಮಾಡಬೇಕಾಗಿತ್ತು. ಆದರೆ ಸಿಕ್ಸ್ ಪ್ಯಾಕ್ ಹೊಂದಲು ಅವರ ದೇಹ ಹೆಚ್ಚು ತೆಳ್ಳಗಾಗಬೇಕಿತ್ತು. ಕೊಬ್ಬನ್ನು ಕಡಿಮೆ ಮಾಡುವಲ್ಲಿ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ದೇಹದ ಕೊಬ್ಬನ್ನು ಸುಟ್ಟಾಗ ಸಿಕ್ಸ್ ಪ್ಯಾಕ್ ಎಬಿಸಿ ಗೋಚರಿಸುತ್ತದೆ.
ಇದನ್ನೂ ಓದಿ:ಇಬ್ರಾಹಿಂ ಅಲಿ ಖಾನ್ ಜೊತೆ ಖಚಿತವಾಯ್ತು ಪಲಕ್ ತಿವಾರಿ ರಿಲೇಶನ್ಶಿಪ್; ವೇದಿಕೆ ಮೇಲೆ ಸಲ್ಲು ಹಿಂಟ್
ದೇಹದ ಕೊಬ್ಬನ್ನು ಕಡಿಮೆ ಮಾಡುವುದು ಕಷ್ಟಕರವಾದ ಕಾರಣ ಚಯಾಪಚಯವನ್ನು ಹೆಚ್ಚಿಸಲು ತಾಪ್ಸಿಗೆ ಕೆಲವು ಆಹಾರ ಕ್ರಮಗಳನ್ನು ನೀಡಬೇಕಾಯಿತು. ಏಕೆಂದರೆ ಸ್ವಭಾವತಃ ಮಹಿಳೆಯರು ಜೈವಿಕವಾಗಿ ಕೊಬ್ಬನ್ನು ಹೊಂದುತ್ತಾರೆ. ಈ ಕೊಬ್ಬು ಹೆರಿಗೆ ಸಮಯದಲ್ಲಿ ಸಹಾಯ ಮಾಡುತ್ತದೆ. ನಮ್ಮ ದೇಹದಲ್ಲಿ ಸ್ವಾಭಾವಿಕವಾದ ಈಸ್ಟೊಜನ್‌ಗಳು, ಟೆಸ್ಟೋಸ್ಟೆರಾನ್‌ಗಳಂತಹ ಕಡಿಮೆ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುವ ಹಾರ್ಮೋನುಗಳಿವೆ. ಆದ್ದರಿಂದ ಕೊಬ್ಬಿನ ಚಯಾಪಚಯವು ನಮಗೆ ಅಷ್ಟು ಸುಲಭವಾಗಿ ಬರುವುದಿಲ್ಲ. ಮಹಿಳೆಯ ದೇಹದ ಕೊಬ್ಬಿನ ಮಟ್ಟವು ಪುರುಷರಂತೆ ಎಂದಿಗೂ ಕಡಿಮೆಯಾಗುವುದಿಲ್ಲ. ಆದ್ದರಿಂದ ಶಾರೀರಿಕ ಅನಾನುಕೂಲವನ್ನು ಜಯಿಸಲು ಚಯಾಪಚಯವನ್ನು ಸುಧಾರಿಸುವ ಕೆಲವು ಆಹಾರಗಳನ್ನು ತಾಪ್ಸಿಗೆ ನೀಡಿದ್ದೇವೆ.
ಇನ್‌ಸ್ಟಾಗ್ರಾಮ್ ಬಳಕೆದಾರರು ತಾಪ್ಸಿಯ ದೇಹ ರೂಪಾಂತರದ ಕುರಿತು ಪ್ರಶ್ನೆ ಮಾಡಿದ್ದಾರೆ, ಅವರು ಯಾವುದೇ ಸ್ಟೀರಾಯ್ಡ್ಗಳ ಬಳಕೆ ಮಾಡಿದ್ದೀರಾ ಎಂದು ಕೇಳಿದ್ದಾರೆ. ಮುನ್ಮುನ್ ಗನೇರಿವಾಲ್ ಇದಕ್ಕೆ ಸ್ಪಷ್ಟನೆಯನ್ನು ನೀಡುತ್ತಾ, ನಾವು ಯಾವುದೇ ಸ್ಟೀರಾಯ್ಡ್ಗಳ ಬಳಕೆ ಮಾಡಿಲ್ಲ. ನಾವು ಸುರಕ್ಷಿತವಾದ ಪೂರಕಗಳನ್ನು ಬಳಸಿದ್ದೇವೆ. ಹೆಚ್ಚಿನ ಜನರು ತೂಕವನ್ನು ಹೆಚ್ಚಿಸಬೇಕಾದಾಗ ಸ್ಟೀರಾಯ್ಡ್ಗಳನ್ನು ಬಳಸುತ್ತಾರೆ. ನಾವು ರಶ್ಮಿ ರಾಕೆಟ್ ಚಿತ್ರದ ಸಮಯದಲ್ಲಿ ನಟಿಯ ತೂಕವನ್ನು ಹೆಚ್ಚಿಸಲು ಯಾವುದೇ ಸ್ಟೀರಾಯ್ಡ್ಗಳನ್ನು ಬಳಸದ ಕಾರಣ, ಈಗ ಕೂಡಾ ಅವುಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಸ್ನಾಯುವಿನ ಚೇತರಿಕೆಗಾಗಿ ಎಲ್ ಗ್ಲುಟಾಮಿನ್‌ನ್ನು ಬಳಸಿದ್ದೇವೆ. ಸಾಧ್ಯವಾದಷ್ಟು ಅಡುಗೆ ಮನೆಯಲ್ಲಿ ಸಿಗುವ ಪೂರಕ ಆಹಾರಗಳನ್ನು ಬಳಸಿದ್ದೇವೆ ಎಂದು ಹೇಳಿದ್ದಾರೆ.
ಮುನ್ಮುನ್ ಗನೇರಿವಾಲ್ ಅವರು ನಟಿ ತಾಪ್ಸಿಯಿಂದ ಅವರ ಸಮಗ್ರ ಯೋಗಕ್ಷೇಮಕ್ಕಾಗಿ ವರ್ಷಕ್ಕೆ ಸುಮಾರು 12 ಲಕ್ಷ ರೂಪಾಯಿಯನ್ನು ಪಡೆಯುತ್ತಾರೆ. ಇದರ ಬಗ್ಗೆ ಮಾತಾಡುತ್ತಾ ಡಯೆಟಿಷಿಯನ್ ಹೇಳುತ್ತಾರೆ, ನನ್ನ ವೆಬ್‌ಸೈಟ್‌ನಲ್ಲಿ ನಾನು ತೆಗೆದುಕೊಳ್ಳುವ ಶುಲ್ಕದ ಬಗ್ಗೆ ಮಾಹಿತಿ ಇದೆ. ತಾಪ್ಸಿ ಯಾವಾಗಲೂ ನನ್ನ ಬಳಿ 1 ವರ್ಷದ ಪ್ಯಾಕೇಜನ್ನು ತೆಗೆದುಕೊಳ್ಳುತ್ತಾರೆ. ನಾನು ಅವರು ಸಮಗ್ರದ ಆರೋಗ್ಯದ ಮೇಲೆ ಕೆಲಸ ಮಾಡುತ್ತೇನೆ ಎಂದು ಹೇಳಿದರು.
Published On - 10:40 am, Wed, 12 April 23