ಇಬ್ರಾಹಿಂ ಅಲಿ ಖಾನ್ ಜೊತೆ ಖಚಿತವಾಯ್ತು ಪಲಕ್ ತಿವಾರಿ ರಿಲೇಶನ್ಶಿಪ್; ವೇದಿಕೆ ಮೇಲೆ ಸಲ್ಲು ಹಿಂಟ್
ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಶ್ವೇತಾ ತಿವಾರಿ ಅವರ ಪುತ್ರಿಯೇ ಪಲಕ್ ತಿವಾರಿ. ಪಲಕ್ ಕೂಡ ಬಣ್ಣ ಲೋಕದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.
ಸೈಫ್ ಅಲಿ ಖಾನ್ ಮಗ ಇಬ್ರಾಹಿಂ ಅಲಿ ಖಾನ್ (Ibrahim Ali Khan) ಅವರು ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಆದರೆ ಸ್ಟಾರ್ ಕಿಡ್ ಎನ್ನುವ ಕಾರಣಕ್ಕೆ ಅವರಿಗೆ ಸಖತ್ ಬೇಡಿಕೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಅವರು ರಿಲೇಶನ್ಶಿಪ್ ವಿಚಾರಕ್ಕೂ ಸುದ್ದಿಯಲ್ಲಿದ್ದಾರೆ. ನಟಿ ಪಲಕ್ ತಿವಾರಿ (Palak Tiwari) ಅವರ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ವಿಚಾರದ ಬಗ್ಗೆ ಸಲ್ಲು ಪರೋಕ್ಷವಾಗಿ ಮಾತನಾಡಿದ್ದಾರೆ. ಅವರ ಮಾತನ್ನು ಕೇಳಿ ಅನೇಕರು ವೇದಿಕೆ ಮೇಲೆ ನಕ್ಕಿದ್ದಾರೆ.
‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾದ ಟ್ರೇಲರ್ ರಿಲೀಸ್ ಇವೆಂಟ್ ಇತ್ತೀಚೆಗೆ ನಡೆಯಿತು. ಟ್ರೇಲರ್ನಲ್ಲಿ ಸಲ್ಲು ಮಿಂಚಿದ್ದಾರೆ. ಆ್ಯಕ್ಷನ್ ದೃಶ್ಯಗಳು ಜನರಿಗೆ ಇಷ್ಟ ಆಗಿದೆ. ಅದ್ದೂರಿಯಾಗಿ ಈ ಕಾರ್ಯಕ್ರಮ ನಡೆದಿದೆ. ಪೂಜಾ ಹೆಗ್ಡೆ, ಜಗಪತಿ ಬಾಬು, ಭೂಮಿಕಾ ಛಾವ್ಲಾ, ವಿಜೇಂದರ್ ಸಿಂಗ್, ಶೆಹನಾಜ್ ಗಿಲ್, ಪಲಕ್ ತಿವಾರಿ ಮೊದಲಾದವರು ಕಾರ್ಯಕ್ರಮದಲ್ಲಿ ಹಾಜರಿ ಹಾಕಿದರು. ಈ ವೇಳೆ ಪಲಕ್ ತಿವಾರಿ ರಿಲೇಶನ್ಶಿಪ್ ಬಗ್ಗೆ ಸಲ್ಲು ಪರೋಕ್ಷವಾಗಿ ಮಾತನಾಡಿದ್ದಾರೆ.
ಇದನ್ನೂ ಓದಿ: ಸೈಫ್ ಅಲಿ ಖಾನ್ ಪುತ್ರ ಇಬ್ರಾಹಿಂ ಜತೆ ಪಲಕ್ ತಿವಾರಿ ಡೇಟಿಂಗ್; ಕ್ಯಾಮೆರಾ ಕಂಡ ತಕ್ಷಣ ಮುಖ ಮುಚ್ಚಿಕೊಂಡ ನಟಿ
ವೇದಿಕೆ ಮೇಲೆ ಪಲಕ್ ತಿವಾರಿ ಅವರನ್ನು ಕರೆಯಲಾಯಿತು. ಈ ವೇಳೆ ಆ್ಯಂಕರ್ಗೆ ಬ್ಯಾಲೆನ್ಸ್ ತಪ್ಪಿತು. ಅವರು ವೇದಿಕೆಯಿಂದ ಬೀಳೋಕೆ ಆದರು. ಅದೃಷ್ಟಕ್ಕೆ ಅವರು ಬಿದ್ದಿಲ್ಲ. ಕೆಲವರು ಈ ಬಗ್ಗೆ ಜೋಕ್ ಮಾಡಿದ್ದಾರೆ. ‘ಪಲಕ್ ತಿವಾರಿಗೆ ಆ್ಯಂಕರ್ ಬೀಳುತ್ತಿದ್ದಾರೆ’ ಎಂದು ಕೆಲವರು ಹೇಳಿದರು. ‘ಅವರು ಈಗಾಗಲೇ ಬಿದ್ದಿದ್ದಾರೆ’ ಎಂದು ವೇದಿಕೆ ಮೇಲೆ ಹೇಳಿದ್ದಾರೆ ಸಲ್ಲು. ಆದರೆ, ಎಲ್ಲಿಯೂ ಅವರು ಇಬ್ರಾಹಿಂ ಹೆಸರನ್ನು ಹೇಳಿಲ್ಲ. ಇಬ್ರಾಹಿಂ ಉದ್ದೇಶಿಸಿ ಹೇಳಿದ ಮಾತು ಇದು ಎಂದು ಎಲ್ಲರೂ ಹೇಳುತ್ತಿದ್ದಾರೆ.
ಇದನ್ನೂ ಓದಿ: ಸಿಕ್ಸ್ ಪ್ಯಾಕ್ ವಿಎಫ್ಎಕ್ಸ್ ಎಂದವರಿಗೆ ವೇದಿಕೆ ಮೇಲೆ ಶರ್ಟ್ ಬಿಚ್ಚಿ ತೋರಿಸಿದ ಸಲ್ಮಾನ್ ಖಾನ್
ಹಿಂದಿ ಕಿರುತೆರೆ ಮತ್ತು ಸಿನಿಮಾಗಳಲ್ಲಿ ಗುರುತಿಸಿಕೊಂಡಿರುವ ಶ್ವೇತಾ ತಿವಾರಿ ಅವರ ಪುತ್ರಿಯೇ ಪಲಕ್ ತಿವಾರಿ. ಪಲಕ್ ಕೂಡ ಬಣ್ಣ ಲೋಕದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಕಿರುಚಿತ್ರ ಮತ್ತು ಮ್ಯೂಸಿಕ್ ವಿಡಿಯೋಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಇಬ್ರಾಹಿಂ ಅಲಿ ಖಾನ್ ಇನ್ನೂ ಚಿತ್ರರಂಗಕ್ಕೆ ಕಾಲಿಟ್ಟಿಲ್ಲ. ಈ ಮೊದಲು ಬೇರೆ ಹುಡುಗಿಯರ ಜೊತೆ ಇಬ್ರಾಹಿಂ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಆ ಯಾವ ವಿಚಾರಗಳ ಬಗ್ಗೆಯೂ ಅವರು ಬಾಯಿ ಬಿಟ್ಟಿಲ್ಲ. ಈಗ ಪಲಕ್ ಮತ್ತು ಇಬ್ರಾಹಿಂ ನಡುವಿನ ಆಪ್ತತೆ ಎಲ್ಲರ ಕಣ್ಣು ಕುಕ್ಕುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ