ವಿಚಿತ್ರ ಅನಿಸಿದರೂ ಇದು ನಿಜ; ಭಾರತದಲ್ಲಿನ ಈ ವಿಚಿತ್ರ ಸ್ಥಳಗಳಿಗೆ ಭೇಟಿ ನೀಡುವುದನ್ನು ಮರೆಯಬೇಡಿ
ಇಡೀ ಜಗತ್ತೇ ವಿಸ್ಮಯಗಳ ಆಲಯ. ಇಲ್ಲಿ ಪ್ರತಿ ದಿನ, ಪ್ರತಿ ಕ್ಷಣ ಜಕಿತಗಳು ಜರುಗುತ್ತವೆ. ಪ್ರಕೃತಿಯ ನಿಗೂಢತೆ ಕೆದಕಿದಷ್ಟು ಆಳಕ್ಕಿಳಿಸುತ್ತದೆ. ಇಲ್ಲಿ ಭಾರತದಲ್ಲಿನ ವಿಚಿತ್ರ ಸ್ಥಳಗಳ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ.
Updated on: Apr 13, 2023 | 7:30 AM

ಹಾವುಗಳ ಊರು: ಹಾವು ಎಂದರೆ ಸಾಕು ಎಂತವರಿಗೂ ಭಯವಾಗುತ್ತೆ. ಆದ್ರೆ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಶೆತ್ಪಾಲ್ ಗ್ರಾಮದಲ್ಲಿರುವ ಜನರಿಗೆ ಸಾವುಗಳು ಸಾಮಾನ್ಯ ಅತಿಥಿಗಳು. ಇಲ್ಲಿನ ಪ್ರತಿಯೊಂದು ಮನೆಗೆ ನಾಗರ ಹಾವುಗಳು ಬಂದು ಹೋಗುತ್ತವೆ. ಅನೇಕರು ಹಾವುಗಳನ್ನು ಸಾಕುತ್ತಾರೆ. ಶಿವನೇ ಹಾವಿನ ರೂಪದಲ್ಲಿದ್ದಾನೆ ಎಂದು ಇಲ್ಲಿ ಹಾವುಗಳನ್ನು ತುಂಬಾ ಭಯ ಭಕ್ತಿಯಿಂದ ಪೂಜಿಸುತ್ತಾರೆ. ಇಲ್ಲಿ ವಿಶೇಷವೆಂದರೆ ಇದುವರೆಗೆ ಯಾರೂ ಹಾವು ಕಡಿದು ಸಾವನ್ನಪ್ಪಿಲ್ಲ.

ರಾಜಸ್ಥಾನದ ಭೂತ ಬಂಗಲೆ: ಈ ಬಂಗಲೆ ಭಯಾನಕ ಸ್ಥಳವೆಂದೇ ಬಿಂಬಿತವಾಗಿದೆ. ಈ ಕೋಟೆಯಲ್ಲಿ ನಕಾರಾತ್ಮಕ ಶಕ್ತಿಯಿದೆ ಎಂದು ಹೇಳಲಾಗುತ್ತಿದ್ದು ಸೂರ್ಯಾಸ್ತದ ನಂತರ ಇಲ್ಲಿಗೆ ಯಾರಿಗೂ ಪ್ರವೇಶ ನೀಡುವುದಿಲ್ಲ. ಹಗಲಿನಲ್ಲಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು.

ನಿಸರ್ಗ ನಿರ್ಮಿತ ಸೇತುವೆ: ಚಿರಾಪುಂಜಿಯಲ್ಲಿ 18, 6 ಇಂಚು ಅಗಲದ ಮರದ ಬೇರುಗಳಿಂದ ಸೇತುವೆ ನಿರ್ಮಾಣವಾಗಿದೆ. ಮರದ ಬೇರುಗಳು ಜನರು ಓಡಾಡುವಂಥ ಸೇತುವೆಯಾಗಿ ಮಾರ್ಪಟ್ಟಿದೆ.

ಪ್ರಪಂಚದ ಏಕೈಕ ತೇಲುವ ಸರೋವರ: ಮಣಿಪುರದ ಮೊಯಿರಾಂಗ್‌ನಲ್ಲಿ ತೇಲುವ ಸರೋವರವಿದೆ. ಅದು ಸಿಹಿ ನೀರಿನ ಸರೋವರ ಆಗಿದ್ದು ಈ ವಿಸ್ಮಯ ಸರೋವರ ನೋಡಲು ಪ್ರವಾಸಿಗರು ಭೇಟಿ ನೀಡುತ್ತಾರೆ.

ಉದಯಪುರದಲ್ಲಿದೆ ತೇಲುವ ಅರಮನೆ: ಉದಯಪುರದಲ್ಲಿ ಸುಂದರ ತೇಲುವ ಅರಮನೆ ಇದೆ. ಅದು ಪ್ರಸಿದ್ದ ಹನಿಮೂನ್ ಸ್ಪಾಟ್ ಕೂಡ ಆಗಿದೆ. ಈ ಅರಮನೆಯನ್ನು ಎರಡನೇಯ ಮಹಾರಾಣಾ ಜೈಸಿಂಗ್ 1746ರಲ್ಲಿ ನಿರ್ಮಿಸಿದರು ಎನ್ನಲಾಗಿದೆ.

ತೇಲುವ ಕಲ್ಲು: ತಮಿಳುನಾಡಿನಲ್ಲಿರುವ ರಾಮೇಶ್ವರಂ ದ್ವೀಪಕ್ಕೆ ಹೋದರೆ ತೇಲುವ ಕಲ್ಲನ್ನು ನೋಡಬಹುದು. ಹಿಂದೂ ಪುರಾಣದ ಪ್ರಕಾರ ರಾವಣನ ಸಂಹಾರ ಮಾಡಲು ಶ್ರೀ ರಾಮ ತನ್ನ ಸೈನಿಕರೊಂದಿಗೆ ರಾಮ ಸೇತುವೆ ನಿರ್ಮಿಸಿದ ಎನ್ನಲಾಗಿದೆ.



















