- Kannada News Photo gallery Cricket photos Punjab Kings and Gujarat Titans are set to lock horns with each other in their next clash of IPL 2023
PBKS vs GT, IPL 2023: ಐಪಿಎಲ್ನಲ್ಲಿಂದು ಪಂಜಾಬ್- ಗುಜರಾತ್ ನಡುವೆ ಹೈವೋಲ್ಟೇಜ್ ಪಂದ್ಯ
Punjab vs Gujarat: ಪಂಜಾಬ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ಆರನೇ ಸ್ಥಾನದಲ್ಲಿದೆ -0.281 ರನ್ರೇಟ್ ಹೊಂದಿದೆ. ಇತ್ತ ಜಿಟಿ ತಂಡ ಕೂಡ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ರನ್ರೇಟ್ (+0.431) ಆಧಾರದ ಮೇಲೆ ನಾಲ್ಕನೇ ಸ್ಥಾನದಲ್ಲಿದೆ.
Updated on:Apr 13, 2023 | 9:31 AM

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇಂದು 18ನೇ ಪಂದ್ಯ ನಡೆಯಲಿದೆ. ಮೊಹಾಲಿಯ ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಈ ಪಂದ್ಯದಲ್ಲಿ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ ಮತ್ತು ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಮುಖಾಮುಖಿ ಆಗಲಿದೆ.

ಪಂಜಾಬ್ ಕಿಂಗ್ಸ್ ಆಡಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ಆರನೇ ಸ್ಥಾನದಲ್ಲಿದೆ -0.281 ರನ್ರೇಟ್ ಹೊಂದಿದೆ. ಇತ್ತ ಜಿಟಿ ತಂಡ ಕೂಡ ಆಡಿದ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಗೆಲುವು ಒಂದರಲ್ಲಿ ಸೋಲು ಕಂಡು ರನ್ರೇಟ್ (+0.431) ಆಧಾರದ ಮೇಲೆ ನಾಲ್ಕನೇ ಸ್ಥಾನದಲ್ಲಿದೆ.

ಪಂಜಾಬ್ ತಂಡದ ಪರ ಆರಂಭಿಕರಾದ ನಾಯಕ ಶಿಖರ್ ಧವನ್ ಮತ್ತು ಪ್ರಭ್ಸಿಮ್ರಾನ್ ಬಿಟ್ಟರೆ ಉಳಿದವರೆಲ್ಲ ವೈಫಲ್ಯ ಅನುಭವಿಸುತ್ತರುವುದು ದೊಡ್ಡ ಹಿನ್ನಡೆಯಾಗಿದೆ. ಓಪನರ್ಗಳಷ್ಟೆ ರನ್ ಕಲೆಹಾಕುತ್ತಿದ್ದಾರೆ.

ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಸ್ಯಾಮ್ ಕುರ್ರನ್, ಸಿಖಂದರ್ ರಾಜಾ, ಶಾರುಖ್ ಖಾನ್ ರಂತಹ ಅಪಾಯಕಾರಿ ಬ್ಯಾಟರ್ಗಳು ತಂಡದಲ್ಲಿದ್ದರೂ ಯಾರೂ ನೆರವಾಗುತ್ತಿಲ್ಲ. ಬೌಲಿಂಗ್ನಲ್ಲಿ ಕೂಡ ಅರ್ಶ್ದೀಪ್ ಸಿಂಗ್, ಹರ್ಪ್ರೀತ್ ಬ್ರಾರ್, ನೇಥನ್ ಎಲೊಸ್, ರಾಹುಲ್ ಚಹರ್ ಇದ್ದರೂ ವಿಕೆಟ್ ಟೇಕರ್ ಆಗಿ ಕಾಣಿಸಿಕೊಂಡಿಲ್ಲ.

ಇತ್ತ ಜಿಟಿ ತಂಡ ಕಳೆದ ಪಂದ್ಯದಲ್ಲಿ ಸೋಲುಂಡರೂ ಬಲಿಷ್ಠವಾಗಿದೆ. ನಾಯಕ ಹಾರ್ದಿಕ್ ಅನಾರೋಗ್ಯದಿಂದ ಗುಣಮುಖರಾಗಿದ್ದು ಇಂದಿನ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ವೃದ್ದಿಮಾನ್ ಸಾಹ ಮತ್ತು ಶುಬ್ಮನ್ ಗಿಲ್ ತಂಡಕ್ಕೆ ಉತ್ತಮ ಆರಂಭ ಒದಗಿಸುತ್ತಿದ್ದಾರೆ. ಸಾಯಿ ಸುದರ್ಶನ್ ಕೂಡ ಭರ್ಜರಿ ಫಾರ್ಮ್ನಲ್ಲಿದ್ದು ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದರು. ವಿಜಯ್ ಶಂಕರ್ ಕೂಡ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಡೇವಿಡ್ ಮಿಲ್ಲರ್, ರಾಹುಲ್ ತೇವಾಟಿಯ ಕೂಡ ಇದ್ದಾರೆ.

ರಶೀದ್ ಹ್ಯಾಟ್ರಿಕ್ ವಿಕೆಟ್ ಪಡೆದು ಎದುರಾಳಿಗರಲ್ಲಿ ನಡುಕ ಹುಟ್ಟಿಸಿದ್ದಾರೆ. ಮೊಹಮ್ಮದ್ ಶಮಿ, ಜೋಶ್ವಾ ಲಿಟಲ್, ಅಲ್ಜರಿ ಜೋಸೆಫ್ ಪ್ರಮುಖ ಬೌಲರ್ಗಳಿದ್ದಾರೆ.
Published On - 9:31 am, Thu, 13 April 23
