ನಿಮ್ಮ ಸಾಕು ನಾಯಿಗಳಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಲು ಇರುವ ಮಾರ್ಗ ಇಲ್ಲಿದೆ

ಮಕ್ಕಳ ಸಮಗ್ರ ಬೆಳವಣಿಗೆಗೆ ಪೋಷಕರ ಪ್ರೀತಿ ಮತ್ತು ವಾತ್ಸಲ್ಯ ಅಗತ್ಯವಿರುವಂತೆ, ಸಾಕು ಪ್ರಾಣಿಗಳಿಗೂ ಕೂಡಾ ಇದೇ ರೀತಿಯ ಪ್ರೀತಿ ಮತ್ತು ವಾತ್ಸಲ್ಯದ ಅಗತ್ಯವಿದೆ. ನಿಮ್ಮ ಪ್ರೀತಿಯನ್ನು ಸಾಕು ಪ್ರಾಣಿಗಳಿಗೆ ತಿಳಿಸಲು ಪರಿಣಾಮಕಾರಿ ಮಾರ್ಗಗಳು ಇಲ್ಲಿವೆ.

ನಿಮ್ಮ ಸಾಕು ನಾಯಿಗಳಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಲು ಇರುವ ಮಾರ್ಗ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on:Apr 11, 2023 | 6:45 PM

ಹೆಚ್ಚಿನ ಜನರು ನಾಯಿಗಳನ್ನು ಸಾಕುಪ್ರಾಣಿಗಳನ್ನಾಗಿ ಸಾಕಲು ಇಷ್ಟಪಡುತ್ತಾರೆ. ಅದೇ ರೀತಿಯಲ್ಲಿ ಅವುಗಳಿಗೆ ಅಗತ್ಯ ಪ್ರೀತಿ, ವಾತ್ಸಲ್ಯದ ಅಗತ್ಯವೂ ಇದೆ. ನಾಯಿಗಳು ಮಾನವರಂತೆಯೇ ಸಾಮಾಜಿಕ ಜೀವಿ. ಅವುಗಳು ಮನುಷ್ಯರ ಭಾವನೆಗಳಿಗೆ ಸ್ಪಂದಿಸುತ್ತವೆ. ಹಾಗೂ ಮನುಷ್ಯರಂತೆಯೇ ಪ್ರೀತಿ, ಕಾಳಜಿ, ಗುಣಮಟ್ಟದ ಸಮಯವನ್ನು ಅವುಗಳು ಮನುಷ್ಯರಿಂದ ಬಯಸುತ್ತವೆ. ಆದ್ದರಿಂದ ಸಾಕುನಾಯಿಗಳ ಪೋಷಕರು ನಾಯಿಗಳನ್ನು ಸಾಕುವುದು ಮಾತ್ರವಲ್ಲದೆ ಅವುಗಳಿಗೆ ಬೇಕಾಗಿರುವ ಅಗತ್ಯ ಪ್ರೀತಿ ಮತ್ತು ಕಾಳಜಿಯನ್ನು ತೋರಿಸಬೇಕು. ಅವುಗಳ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಈ ಸಾಕುನಾಯಿಗಳಿಗೆ ಪ್ರೀತಿ ತೋರಿಸಲು ಕೆಲವೊಂದು ಮಾರ್ಗಗಳಿವೆ. ಪೆಟ್‌ಕನೆಕ್ಟ್​ನ ಸ್ಥಾಪಕರು ಮತ್ತು ಸಿಇಓ ಆದ ದೇವಾಂಶಿ ಶಾ ಅವರು ಸಾಕುಪ್ರಾಣಿಗಳ ಪೋಷಕರು ತಮ್ಮ ಪ್ರೀತಿಯನ್ನು ಆ ಪ್ರಾಣಿಗಳಿಗೆ ವ್ಯಕ್ತಪಡಿಸಬಹುದಾದ ಮಾರ್ಗಗಳ ಬಗ್ಗೆ ತಿಳಿಸಿಕೊಟ್ಟಿದ್ದಾರೆ.

ನಿಮ್ಮ ಸಾಕುಪ್ರಾಣಿಗಳಿಗೆ ಪ್ರೀತಿ ಮತ್ತು ಕಾಳಜಿಯನ್ನು ತೋರಿಸುವ ಮಾರ್ಗಗಳು

ಮೌಖಿಕ ದೃಢೀಕರಣ: ಮೌಖಿಕ ಹೊಗಳಿಕೆ ಅಥವಾ ಧನಾತ್ಮಕವಾದ ಮಾತುಗಳಿಗೆ ನಾಯಿಗಳು ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ. ನಿಮ್ಮ ಪ್ರೀತಿಯನ್ನು ತೋರಿಸಲು ನಿಮ್ಮ ನಾಯಿಗೆ ‘ಐ ಲವ್ ಯು’ ಅಥವಾ ಜಾಣಮರಿ ಎಂಬೆಲ್ಲಾ ಮುದ್ದು ಮಾತುಗಳನ್ನು ಪ್ರತಿನಿತ್ಯ ಅವುಗಳ ಜೊತೆ ಮಾತನಾಡಿ.

ದೈಹಿಕ ಸ್ಪರ್ಶ: ನಾಯಿಗಳು ದೈಹಿಕ ಸ್ಪರ್ಷ ಮತ್ತು ಮುದ್ದಾಡುವಿಕೆಯನ್ನು ಇಷ್ಟಪಡುತ್ತವೆ. ನಾಯಿಗಳ ಮೇಲೆ ನಿಮ್ಮ ಕಾಳಜಿಯನ್ನು ಅವುಗಳನ್ನು ಅಪ್ಪಿಕೊಳ್ಳುವುದು, ತಲೆ ಸವರುವುದನ್ನು ಮಾಡುತ್ತಿರಬೇಕು.

ಗುಣಮಟ್ಟದ ಸಮಯ: ನಿಮ್ಮ ನಾಯಿಯೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ನೀವು ಅವುಗಳನ್ನು ಪ್ರೀತಿಸುತ್ತೀರಿ ಎಂದು ತೋರಿಸಲು ಉತ್ತಮ ಮಾರ್ಗವಾಗಿದೆ. ನೀವು ಅವುಗಳನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗುವ ಮೂಲಕ ಅವುಗಳ ಜೊತೆ ಆಟವಾಡುವ ಮೂಲಕ ಗುಣಮಟ್ಟದ ಸಮಯವನ್ನು ನಾಯಿಯ ಜೊತೆ ಕಳೆಯಬಹುದು.

ಸತ್ಕಾರಗಳು ಮತ್ತು ಆಟಿಕೆಗಳು: ನಿಮ್ಮ ನಾಯಿಗೆ ಸತ್ಕಾರಗಳು ಮತ್ತು ಆಟಿಕೆಗಳನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ಅವುಗಳಿಗೆ ತೋರಿಸಬಹುದು. ನಾಯಿಗಳು ಆಟವಾಡಲು ಇಷ್ಟಪಡುತ್ತವೆ. ಹಾಗಾಗಿ ಅವುಗಳಿಗೆ ಆಟಿಕೆಗಳನ್ನು ತಂದುಕೊಡಬೇಕು. ಅಥವಾ ಅವುಗಳಿಗೆ ರುಚಿಕರವಾದ ತಿನಿಸುಗಳನ್ನು ತಿನಿಸಬೇಕು.

ತರಬೇತಿ ಮತ್ತು ಬಂಧ: ನಿಮ್ಮ ನಾಯಿಗೆ ಆಟ ಮತ್ತು ಇನ್ನಿತರ ವಿಷಯಗಳಲ್ಲಿ ತರಬೇತಿ ನೀಡುವ ಮೂಲಕ ನೀವು ಹೊಸ ಕೌಶಲ್ಯಗಳನ್ನು ಜೊತೆಯಾಗಿ ಕಲಿಯಬಹುದು. ಮತ್ತು ನಾಯಿಯ ಜೊತೆಗಿನ ನಿಮ್ಮ ಬಂಧವನ್ನು ಕೂಡಾ ಬಲಪಡಿಸಬಹುದು.

ಕಣ್ಣಿನ ಸಂಪರ್ಕ: ನಿಮ್ಮ ನಾಯಿಯೊಂದಿಗೆ ಕಣ್ಣಿನ ಸಂಪರ್ಕವನ್ನು ಮಾಡುವುದು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಇರುವ ಪ್ರಬಲ ಮಾರ್ಗವಾಗಿದೆ. ನಾಯಿಗಳು ಸಾಮಾಜಿಕ ಪ್ರಾಣಿಗಳಾಗಿದ್ದು, ಅವುಗಳು ಕಣ್ಣಿನ ಸಂಪರ್ಕ ಮತ್ತು ಸಕಾರಾತ್ಮಕ ದೇಹ ಭಾಷೆಗೆ ಉತ್ತಮವಾಗಿ ಪ್ರತಿಕ್ರಿಯಿಸುತ್ತವೆ.

ಇದನ್ನೂ ಓದಿ: Pet Food: ಮಾಂಸಾಹಾರಿ ಸಾಕು ನಾಯಿಗೆ ತರಕಾರಿ ತಿನ್ನುವುದನ್ನು ಅಭ್ಯಾಸ ಮಾಡುವುದು ಹೇಗೆ? ಇಲ್ಲಿವೆ ವೈದ್ಯರ ಸಲಹೆಗಳು

ಸಾಕು ಪ್ರಾಣಿಗಳ ಜೊತೆ ಪ್ರವಾಸ: ನೀವು ನಿಮ್ಮ ಸಾಕು ಪ್ರಾಣಿಗಳೊಂದಿಗೆ ಟ್ರಿಪ್ ಹೋಗಬಹುದು. ಟ್ರೆಕ್ಕಿಂಗ್ ಹೋಗುವುದು, ಬೀಚ್‌ಗೆ ಹೋಗುವುದು ಈ ರೀತಿಯಾಗಿ ನಾಯಿಯ ಜೊತೆ ಪ್ರವಾಸ ಹೋಗುತ್ತಾ, ಗುಣಮಟ್ಟದ ಸಮಯವನ್ನು ಕಳೆಯಬಹುದು.

ಅವುಗಳ ಗಡಿಯನ್ನು ಗೌರವಿಸಿ: ನಾಯಿಗಳು ಮನುಷ್ಯರಂತೆಯೇ ವಿವಿಧ ವ್ಯಕ್ತಿತ್ವಗಳು ಮತ್ತು ಆದ್ಯತೆಯನ್ನು ಹೊಂದಿದೆ. ನಿಮ್ಮ ನಾಯಿಯ ಗಡಿಗಳನ್ನು ಗೌರವಿಸುವುದು ಮತ್ತು ಅವುಗಳಿಗೆ ಅಗತ್ಯವಿರುವ ಜಾಗವನ್ನು ಒದಗಿಸುವುದು ನಿಮ್ಮ ಪ್ರೀತಿ ಮತ್ತು ಕಾಳಜಿಯನ್ನು ಪ್ರದರ್ಶಿಸಲು ಇರುವ ಒಂದು ಮಾರ್ಗವಾಗಿದೆ.

ಆರಾಮದಾಯಕ ವಾತಾವರಣವನ್ನು ಒದಗಿಸಿ: ನಾಯಿಗಳಿಗೆ ಆರಾಮದಾಯಕ ಮತ್ತು ಸುರಕ್ಷಿತ ವಾತಾವರಣದ ಅಗತ್ಯವಿರುತ್ತದೆ. ನಿಮ್ಮ ನಾಯಿಗೆ ಆರಾಮದಾಯಕವಾದ ಹಾಸಿಗೆ, ಆಟಿಕೆಗಳು ಮತ್ತು ಒಂದಷ್ಟು ಖುಷಿಯ ವಾತಾರವರಣವನ್ನು ಅವುಗಳಿಗೆ ನಿರ್ಮಿಸಿಕೊಡುವ ಮೂಲಕ ಪ್ರೀತಿಯನ್ನು ತೋರಿಸಬಹುದು.

ನಿಯಮಿತ ತಪಾಸಣೆ: ಮನುಷ್ಯರಂತೆ ನಾಯಿಗಳಿಗೂ ಕೂಡಾ ನಿಯಮಿತ ತಪಾಸಣೆ, ವೈದ್ಯಕೀಯ ಆರೈಕೆಯ ಅಗತ್ಯವಿದೆ. ಪಶುವೈದ್ಯರ ಬಳಿ ಅವುಗಳ ನಿಯಮಿತ ತಪಾಸಣೆಯನ್ನು ಮಾಡುತ್ತಾ ಅವುಗಳ ಆರೋಗ್ಯ ಉತ್ತಮವಾಗಿದೆಯೇ ಎಮದು ಖಚಿತಪಡಿಸಿಕೊಳ್ಳಬಹುದು. ನಾಯಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.

Published On - 6:45 pm, Tue, 11 April 23