Akshaya Tritiya 2024 : ಅಕ್ಷಯ ತೃತೀಯದಂದು ನಿಮ್ಮ ಪ್ರೀತಿಪಾತ್ರರಿಗೆ ಈ ರೀತಿ ಶುಭ ಹಾರೈಸಿ ಸಂಭ್ರಮಿಸಿ
ಅಕ್ಷಯ ತೃತೀಯದಂದು ಯಾವುದೇ ಕೆಲಸ ಕಾರ್ಯಗಳಿಗೆ ಕೈ ಹಾಕಿದರೆ, ಅದರ ಫಲವು ಶುಭದಾಯಕವಾಗಿರುತ್ತದೆ ಎನ್ನುವ ನಂಬಿಕೆಯಿದೆ. ಈ ಬಾರಿ ಅಕ್ಷಯ ತೃತೀಯ ಹಬ್ಬವು ಮೇ 10 ಕ್ಕೆ ಬಂದಿದ್ದು, ಈ ಶುಭ ದಿನದಂದು ಹೆಚ್ಚಿನವರು ಚಿನ್ನ ಹಾಗೂ ಬೆಳ್ಳಿಯನ್ನು ಖರೀದಿಗೆ ಮುಂದಾಗುತ್ತಾರೆ. ಅದಲ್ಲದೇ, ಹಬ್ಬವನ್ನು ನಿಮ್ಮ ಆತ್ಮೀಯರಿಗೆ, ಸ್ನೇಹಿತರಿಗೆ ಹಾಗೂ ಕುಟುಂಬಸ್ಥರಿಗೆ ಈ ರೀತಿ ಶುಭಾಶಯಗಳನ್ನು ಕೋರಿ ಅಕ್ಷಯ ತೃತೀಯವನ್ನು ಸಂಭ್ರಮಿಸಬಹುದು.

Akshaya Tritiya
ಹಿಂದೂಗಳ ಪಾಲಿಗೆ ಅಕ್ಷಯ ತೃತೀಯವು ಬಹಳ ಪ್ರಮುಖವಾದ ದಿನವಾಗಿದೆ. ಇದು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ಈ ಅಕ್ಷಯ ತೃತೀಯ. ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಗೆ ಅರ್ಪಿಸಲಾಗುವ ಅಕ್ಷಯ ತೃತೀಯವನ್ನು ಈ ಬಾರಿ ಮೇ 10 ರಂದು ಆಚರಿಸಲಾಗುತ್ತಿದೆ. ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲದಿದ್ದರೆ ಆಪ್ತರಿಗೆ ಸಂದೇಶ ಕಳುಹಿಸುವ ಮೂಲಕ ಹಬ್ಬದ ಸಂಭ್ರಮವನ್ನು ಹೆಚ್ಚಿಸಿಕೊಳ್ಳಬಹುದು.
- ಅಕ್ಷಯ ತೃತೀಯದಂದು ನೀವು ಕೈಗೊಂಡ ಕಾರ್ಯ ಅಕ್ಷಯವಾಗಲಿ, ಅದೃಷ್ಟದ ಲಕ್ಷ್ಮಿ ನಿಮಗೆ ಒಲಿಯಲಿ, ಲಕ್ಷ್ಮಿ ಸದಾ ನಿಮ್ಮೊಂದಿಗೆ ಇರಲಿ ಎಂದು ಹಾರೈಸುವೆ. ಅಕ್ಷಯ ತೃತೀಯ ಶುಭಾಶಯಗಳು.
- ಈ ವರ್ಷದ ಅಕ್ಷಯ ತೃತೀಯವು ನಿಮ್ಮ ಕುಟುಂಬಕ್ಕೆ ಸಂತೋಷದ ಜೊತೆಗೆ ಹೊಸ ಭರವಸೆಯನ್ನು ತರಲಿ.. ಅಕ್ಷಯ ತೃತೀಯದ ಶುಭಾಶಯಗಳು
- ‘ಅಕ್ಷಯ ಎಂದರೆ ಶಾಶ್ವತ ಎನ್ನುವುದನ್ನು ಸೂಚಿಸುತ್ತದೆ. ಈ ದಿನ ನಿಮ್ಮ ಜೀವನದಲ್ಲಿ ಸುಖ, ಶಾಂತಿ, ನೆಮ್ಮದಿಯ ಜೊತೆಗೆ ಸಂಪತ್ತು ಎಂದೂ ಶಾಶ್ವತವಾಗಿರಲಿ. ಹಬ್ಬವನ್ನು ನಗುತ್ತಾ ಆಚರಿಸಿ, ನಿಮ್ಮ ಕುಟುಂಬದ ತುಂಬಾ ನಗುವೇ ತುಂಬಿರಲಿ. ಹಬ್ಬದ ಶುಭಾಶಯಗಳು
- ಅಕ್ಷಯ ತೃತೀಯದ ಈ ದಿನದಂದು ಸಮೃದ್ಧಿ ಮತ್ತು ಸಂಪತ್ತನ್ನು ಕಲ್ಪಿಸಲಿ, ಆ ಭಗವಾನ್ ವಿಷ್ಣುವಿನ ಆಶೀರ್ವಾದ ನಿಮ್ಮ ಮೇಲಿರಲಿ.
- ‘ಉಜ್ವಲ ಭವಿಷ್ಯದ ಕನಸು ನನಸಾಗಲಿ.. ಆರೋಗ್ಯವಾದ ಜೀವನ ನಿಮ್ಮದಾಗಲಿ. ನಿಮ್ಮ ಜೀವನದ ಏಳಿಗೆಯನ್ನೇ ಬಯಸುವವನಿಂದ ಅಕ್ಷಯ ತೃತೀಯದ ಶುಭಾಶಯಗಳು’
- ಅಕ್ಷಯ ತೃತೀಯದಿಂದ ನಿಮ್ಮ ಜೀವನ ಸುಖಕರವಾಗಿರಲಿ. ನೆಮ್ಮದಿಯುತ ಜೀವನ ನಿಮ್ಮದಾಗಿರಲಿ. ಭರವಸೆಯ ಬೆಳಕಿನೊಂದಿಗೆ ಸಂಪತ್ತು ಸಿಗಲಿ ಎಂದು ಹಾರೈಸುತ್ತ ಅಕ್ಷಯ ತೃತೀಯ ಶುಭಾಶಯಗಳು.
- ಈ ಅಕ್ಷಯ ತೃತೀಯ ನಿಮ್ಮ ಸಂಪತ್ತು, ಆರೋಗ್ಯ ವೃದ್ಧಿಸಲಿ, ಮನೆಯಲ್ಲಿ ಖುಷಿ ತುಂಬಲಿ ಎಂದು ಆಶಿಸುತ್ತ ಈ ದಿನವು ಶುಭದಾಯಕವಾಗಿರಲಿ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ