Delhi International Arts Festival 2022: ರಾಜಧಾನಿಯಲ್ಲಿ ಅದ್ದೂರಿಯಾಗಿ ನಡೆಯಲಿದೆ ಅಂತಾರಾಷ್ಟ್ರೀಯ ಕಲಾ ಉತ್ಸವ
ನಮ್ಮ ದೇಶೀಯ ಶ್ರೀಮಂತ ಕಲಾ ಪ್ರಕಾರದ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸಿಕೊಟ್ಟು, ಉಳಿಸಿ ಬೆಳೆಸುವ ಧ್ಯೇಯದೊಂದಿಗೆ ಈ ಉತ್ಸವ ಆಯೋಜಿಸಲಾಗಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ(Amrit Mahotsav) ಸಂಭ್ರಮಾಚರಣೆಯ ಪ್ರಯುಕ್ತ ಸರ್ಕಾರವು ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು ದೇಶದ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಡಿಸೆಂಬರ್ 16 ರಿಂದ 30 ವರೆಗೆ ರಾಷ್ಟ್ರ ರಾಜಧಾನಿಯಲ್ಲಿ ಸರ್ಕಾರಿ, ಅರೆ-ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ಕಲಾ ಉತ್ಸವ(International Arts Festival)ಅದ್ದೂರಿಯಾಗಿ ಕರ್ತವ್ಯ ಪಥದಲ್ಲಿ ನಡೆಯಲಿದೆ.
ನಮ್ಮ ದೇಶೀಯ ಶ್ರೀಮಂತ ಕಲಾ ಪ್ರಕಾರದ ಬಗ್ಗೆ ಮುಂದಿನ ಪೀಳಿಗೆಗೂ ತಿಳಿಸಿಕೊಟ್ಟು, ಉಳಿಸಿ ಬೆಳೆಸುವ ಧ್ಯೇಯದೊಂದಿಗೆ ಈ ಉತ್ಸವ ಆಯೋಜಿಸಲಾಗಿದೆ. ಸಾಂಪ್ರದಾಯಿಕ ನೃತ್ಯ, ಸಂಗೀತ, ರಂಗಭೂಮಿ, ದೃಶ್ಯ ಕಲೆಗಳನ್ನು ಪ್ರಸ್ತುತಪಡಿಸುವ ಮೂಲಕ ಭಾರತದ ಕಲೆ ಮತ್ತು ಸಂಸ್ಕೃತಿಯ ಕಥೆಯನ್ನು ಜಗತ್ತಿಗೆ ಮರು-ಹೇಳುವ ಸಂತೋಷದಾಯಕ ಸಂದರ್ಭ ಇದಾಗಿದೆ. ವಸುಧೈವ ಕುಟುಂಬಕಂ ಎಂದು ಕರೆಯಲ್ಪಡುವ ಭಾರತದ ವಿವಿಧ ಭಾಗಗಳ ಕಲೆ ಸಂಸ್ಕೃತಿಯನ್ನು ಒಂದೇ ಸೂರಿನಡಿ ಏಕಕಾಲದಲ್ಲಿ ಪ್ರದರ್ಶಿಸಲು ಪ್ರಪಂಚದಾದ್ಯಂತದ ಕಲಾವಿದರನ್ನು ಆಹ್ವಾನಿಸುವ ಮೂಲಕ ಅದ್ದೂರಿಯಾಗಿ ನಡೆಸಲಾಗುತ್ತದೆ. ಇಂಡೋ-ಜಪಾನ್ ಸಮುರಾಯ್ ಕೇಂದ್ರದ ಸಹಯೋಗದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವಾರ್ಥವಾಗಿ ಪ್ರಸಿದ್ಧ ಪ್ರದರ್ಶನಗಳನ್ನು ಆಯೋಜಿಸಲಾಗಿದೆ ಎಂದು ಕಾರ್ಯಕ್ರಮದ ನಿರ್ದೇಶಕರಾದ ಪ್ರತಿಭಾ ಪ್ರಹ್ಲಾದ್ ಹೇಳಿದರು.
14 ವರ್ಷಗಳಿಂದ (ಎರಡು ವರ್ಷಗಳ ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ), ದೆಹಲಿ ಅಂತಾರಾಷ್ಟ್ರೀಯ ಕಲಾ ಉತ್ಸವ ನಡೆದುಕೊಂಡು ಬಂದಿದ್ದು, 15 ದಿನಗಳ ಕಾಲ ನಡೆಯಲಿದೆ. ಈ ಕಾರ್ಯ ಕ್ರಮವು ಕಲಾಂಜಲಿ ತಂಡದವರ ಸಂಪೂರ್ಣ ಕೊಡುಗೆಯಾಗಿದ್ದು, ಹೊಸದಾಗಿ ನವೀಕರಿಸಿದ ಇಂಡಿಯಾ ಗೇಟ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಬಳಿ ನಡೆಯಲಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಬಗ್ಗೆ ಜಾಗೃತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದು, ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದು 75 ವರ್ಷ ಕಳೆದಿದೆ. ಆಜಾದಿ ಕಾ ಅಮೃತ್ ಮಹೋತ್ಸವದಲ್ಲಿದೆ. ಜೊತೆಗೆ ಕಳೆದರೆಡು ವರ್ಷಗಳಿಂದ ಕೊರೊನಾವೈರಸ್ ಲಾಕ್‌ಡೌನ್ ಭಾರತ ಹೊರಬಂದಿದೆ ಎಂದು ಅವರು ಹೇಳಿದರು.
ಕಲಾಂಜಲಿಯ ಕಾರ್ಯಕ್ರಮಗಳಾದ ಸಂಗೀತ, ನೃತ್ಯ, ರಂಗಭೂಮಿ, ಕಥೆ-ಹೇಳುವುದು ಮತ್ತು ದೃಶ್ಯ ಕಲೆಗಳ ಪ್ರದರ್ಶನಗಳನ್ನು ನೀವು ಕಣ್ತುಂಬಿಕೊಳ್ಳಬಹುದು. ಇಲ್ಲಿ ನೀವು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ದೇಶದ ಪ್ರತಿಯೊಂದು ಮೂಲೆಯ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ತಿಳಿದುಕೊಳ್ಳುವ ಮುಕ್ತ ಅವಕಾಶವನ್ನು ಸರ್ಕಾರ ನೀಡುತ್ತಿದೆ.
ಇದನ್ನು ಓದಿ: ಕ್ರಿಸ್ಮಸ್ ಪಾರ್ಟಿಗಾಗಿ ಸ್ಪೆಷಲ್ ರೆಸಿಪಿಗಳು ಇಲ್ಲಿವೆ
ದೇಶದ ಸಾಂಪ್ರದಾಯ, ಜಾನಪದ, ಶಾಸ್ತ್ರೀಯ ಮತ್ತು ಸಮಕಾಲೀನ ಕಲಾ ಪ್ರಕಾರಗಳ ಜ್ಞಾನವನ್ನು ಗ್ರಹಿಸುವ ರೀತಿಯಲ್ಲಿ ಕಾರ್ಯಕ್ರಮಗಳನ್ನು ವಿನ್ಯಾಸಗೊಳಿಸಲಾಗಿದ್ದು, ಎಲ್ಲಾ ಪ್ರೇಕ್ಷಕರಿಗೂ ವಿಶೇಷವಾಗಿ ಮಕ್ಕಳಿಂದ ಹಿಡಿದು ವಯಸ್ಕರ ವರೆಗೂ ಇಲ್ಲಿ ಪಾಲ್ಗೊಳ್ಳಬಹುದು. ಸಂಗೀತ ನಾಟಕ ಅಕಾಡೆಮಿ, ಲಲಿತ ಕಲಾ ಅಕಾಡೆಮಿ, ಸಾಹಿತ್ಯ ಅಕಾಡೆಮಿ, ವಲಯ ಸಾಂಸ್ಕೃತಿಕ ಕೇಂದ್ರಗಳು ಸೇರಿದಂತೆ ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿರುವ ಎಲ್ಲಾ ಸಂಸ್ಥೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಬುಡಕಟ್ಟು ಅಭಿವೃದ್ಧಿ ಮುಂತಾದ ಕ್ಷೇತ್ರಗಳನ್ನು ಕೇಂದ್ರೀಕರಿಸುವ ಈ ವಿಷಯಾಧಾರಿತ ಕಾರ್ಯಕ್ರಮಗಳನ್ನು ನಡೆಸಲು ಒಗ್ಗಟ್ಟಿನಿಂದ ನಿರ್ವಹಿಸುತ್ತಿದೆ ಎಂದು ಹೇಳಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:21 pm, Fri, 16 December 22