ಮೊಡವೆಗಳಿಂದ ಮುಕ್ತಿ, ಹೊಳೆಯುವ ಚರ್ಮಕ್ಕಾಗಿ ಹೊಕ್ಕುಳಿಗೆ ಈ ಎಣ್ಣೆ ಹಾಕಿ

ಹೊಕ್ಕುಳ ದೇಹದ 72,000 ನರಗಳಿಗೆ ಸಂಪರ್ಕ ಹೊಂದಿದೆ. ದೇಹದ ಯಾವ ಭಾಗಕ್ಕೆ ನೋವಾದರು ಅದು ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದರಿಂದ ಪರಿಹಾರ ಆಗಿದೆ. ಈ ಸುಲಭ ವಿಧಾನವು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ನಿಮಗೆ ಮಲಬದ್ಧತೆ, ಅನಿಲ ಮುಂತಾದ ಹೊಟ್ಟೆಯ ಸಮಸ್ಯೆಗಳಿದ್ದರೆ, ಹೊಕ್ಕುಳಕ್ಕೆ ಎಣ್ಣೆ ಹಾಕುವುದು ನಿಮಗೆ ಪರಿಣಾಮಕಾರಿ ಪರಿಹಾರವಾಗಿದೆ. ಇದಕ್ಕೆ ಸರಿಯಾದ ಎಣ್ಣೆಯನ್ನು ಆರಿಸುವುದು ಮುಖ್ಯ.

ಮೊಡವೆಗಳಿಂದ ಮುಕ್ತಿ, ಹೊಳೆಯುವ ಚರ್ಮಕ್ಕಾಗಿ ಹೊಕ್ಕುಳಿಗೆ ಈ ಎಣ್ಣೆ ಹಾಕಿ
ಸಾಂದರ್ಭಿಕ ಚಿತ್ರ
Edited By:

Updated on: Jun 12, 2025 | 5:15 PM

ಆಯುರ್ವೇದದ ಪ್ರಕಾರ, ಹೊಕ್ಕುಳನ್ನು ದೇಹದ ಅತ್ಯಂತ ಶಕ್ತಿಶಾಲಿ ಕೇಂದ್ರ. ಆಯುರ್ವೇದದ ಪ್ರಕಾರ, ಹೊಕ್ಕುಳವು ನಮ್ಮ ದೇಹದಲ್ಲಿನ ಒಂದು ಬಿಂದುವಾಗಿದ್ದು, ಇದು ದೇಹದ 72,000 ನರಗಳಿಗೆ ಸಂಪರ್ಕ ಹೊಂದಿದೆ. ಹೊಕ್ಕುಳಕ್ಕೆ ಎಣ್ಣೆ (navel oiling) ಹಚ್ಚುವುದನ್ನು ಆಯುರ್ವೇದದಲ್ಲಿ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ‘ನಾಭಿ ಪುರಾಣ’ದ ಪ್ರಕಾರ, ಹೊಕ್ಕುಳಕ್ಕೆ ಎಣ್ಣೆ ಹಚ್ಚುವುದರಿಂದ ಅನೇಕ ರೀತಿಯ ಸಮಸ್ಯೆಗಳು ನೈಸರ್ಗಿಕ ರೀತಿಯಲ್ಲಿ ನಿವಾರಣೆಯಾಗುತ್ತವೆ ಎಂದು ಹೇಳಲಾಗಿದೆ. ಈ ಸುಲಭ ವಿಧಾನವು ನಿಮ್ಮ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ನಿಮಗೆ ಮಲಬದ್ಧತೆ, ಗ್ಯಾಸ್​​​​ ಮುಂತಾದ ಹೊಟ್ಟೆಯ ಸಮಸ್ಯೆಗಳಿದ್ದರೆ, ಹೊಕ್ಕುಳಕ್ಕೆ ಎಣ್ಣೆ ಹಾಕುವುದು ನಿಮಗೆ ಪರಿಣಾಮಕಾರಿ ಪರಿಹಾರವಾಗಿದೆ. ಇದಕ್ಕೆ ಸರಿಯಾದ ಎಣ್ಣೆಯನ್ನು ಆರಿಸುವುದು ಮುಖ್ಯ.

ಹೊಕ್ಕುಳಿಗೆ ಯಾವ ಎಣ್ಣೆ ಹಾಕಬೇಕು?

ಈ ಬಗ್ಗೆ ಪ್ರಸಿದ್ಧ ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹೊಕ್ಕುಳಲ್ಲಿ ಯಾವ ಎಣ್ಣೆಯನ್ನು ಸುರಿಯುವುದರಿಂದ ನಿಮಗೆ ಪ್ರಯೋಜನಕಾರಿ ಎಂಬುದನ್ನು ತಿಳಿಸಿದ್ದಾರೆ.

ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ

ಹೊಟ್ಟೆ ಉಬ್ಬರ, ಗ್ಯಾಸ್​​​ ಅಥವಾ ಮಲಬದ್ಧತೆ ಮುಂತಾದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಹೊಕ್ಕುಳಕ್ಕೆ ಕ್ಯಾಸ್ಟರ್ ಆಯಿಲ್ ಹಚ್ಚುವುದರಿಂದ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಈ ಎಣ್ಣೆ ನೈಸರ್ಗಿಕವಾಗಿ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ, ಕರುಳನ್ನು ನಯಗೊಳಿಸುತ್ತದೆ ಮತ್ತು ಕರುಳಿನ ಚಲನೆಯನ್ನು ಸುಲಭಗೊಳಿಸುತ್ತದೆ.

ಇದನ್ನೂ ಓದಿ
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಹಾರ್ಮೋನ್ ಸಮತೋಲನ

ಹಾರ್ಮೋನುಗಳ ಸಮತೋಲನಕ್ಕಾಗಿ ಹೊಕ್ಕುಳಲ್ಲಿ ಎಳ್ಳೆಣ್ಣೆಯನ್ನು ಹಚ್ಚಲು ತಜ್ಞರು ಹೇಳಿದ್ದಾರೆ. ಇದು ವಿಶೇಷವಾಗಿ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ಹೆಚ್ಚು ಪ್ರಯೋಜನಕಾರಿ ಎಂದು ಹೇಳಾಗಿದೆ.

ಮೊಡವೆಗಳಿಂದ ಮುಕ್ತಿ:

ಮುಖದ ಮೇಲೆ ಮೊಡವೆಗಳು ಬಂದರೆ, ಹೊಕ್ಕುಳಲ್ಲಿ ಬೇವಿನ ಎಣ್ಣೆಯನ್ನು ಹಚ್ಚಿ ಎಂದು ಆಯುರ್ವೇದ ಪೌಷ್ಟಿಕತಜ್ಞೆ ಶ್ವೇತಾ ಶಾ ಹೇಳುತ್ತಾರೆ.

ಒಣ ಚರ್ಮ

ಚರ್ಮವು ತುಂಬಾ ಶುಷ್ಕ ಮತ್ತು ನಿರ್ಜೀವವಾಗಿ ಕಂಡುಬಂದರೆ, ನಿಮ್ಮ ಹೊಕ್ಕುಳಲ್ಲಿ ತೆಂಗಿನ ಎಣ್ಣೆಯನ್ನು ಹಾಕುವುದು ನಿಮಗೆ ಪ್ರಯೋಜನಕಾರಿ, ಇದು ಒಣ ಚರ್ಮವನ್ನು ತೇವಗೊಳಿಸಲು ಸಹಾಯ ಮಾಡುತ್ತದೆ.

ಹೊಳೆಯುವ ಚರ್ಮ

ಚರ್ಮವನ್ನು ಹೊಳೆಯುವಂತೆ ಮತ್ತು ಮೃದುವಾಗಿಸಲು ಬಾದಾಮಿ ಎಣ್ಣೆ ಪ್ರಯೋಜನಕಾರಿ

ಕೀಲು ನೋವಿಗೆ

ಕೀಲು ನೋವಿನಿಂದ ಪರಿಹಾರ ಪಡೆಯಲು, ಪೌಷ್ಟಿಕತಜ್ಞರು ಹೊಕ್ಕುಳಲ್ಲಿ ಸಾಸಿವೆ ಎಣ್ಣೆಯನ್ನು ಹಾಕಲು ಶಿಫಾರಸು ಮಾಡುತ್ತಾರೆ. ಇದು ಕೀಲು ನೋವು ಮತ್ತು ಬಿಗಿತದಿಂದ ಪರಿಹಾರ ನೀಡುತ್ತದೆ.

ಇದನ್ನೂ ಓದಿ: ಮಳೆಗಾಲದಲ್ಲೂ ಉಪ್ಪಿಕಾಯಿ ತಾಜಾವಾಗಿಡಲು ಪಂಚ ಕ್ರಮಗಳು

ಎಣ್ಣೆ ಹಚ್ಚುವುದು ಹೇಗೆ?

ರಾತ್ರಿ ಮಲಗುವ ಮುನ್ನ, ನಿಮ್ಮ ಹೊಕ್ಕುಳಲ್ಲಿ 2-3 ಹನಿ ಎಣ್ಣೆಯನ್ನು ಹಾಕಿ.

ನಿಮ್ಮ ಕೈಗಳಿಂದ ವೃತ್ತಾಕಾರದ ರೀತಿಯಲ್ಲಿ ಮಸಾಜ್ ಮಾಡಿ

ಬೆಳಿಗ್ಗೆ ಎದ್ದಾಗ, ನಿಮ್ಮ ಹೊಟ್ಟೆ ಹಗುರ ಮತ್ತು ಆರಾಮದಾಯಕವಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ