AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲದಲ್ಲೂ ಉಪ್ಪಿಕಾಯಿ ತಾಜಾವಾಗಿಡಲು ಪಂಚ ಕ್ರಮಗಳು

ಉಪ್ಪಿನಕಾಯಿಯನ್ನು ಮಳೆಗಾಲದಲ್ಲೂ ತಾಜಾವಾಗಿಡುವುದು ಹೇಗೆ? ಎಂಬ ಪ್ರಶ್ನೆಗಳು ನಿಮ್ಮಲ್ಲಿ ಮೂಡಬಹುದು. ಆದರೆ ಅದಕ್ಕೆ ಹಳ್ಳಿ ಕ್ರಮ ಉತ್ತಮ, ಅದಕ್ಕಾಗಿ ಈ ನಿಯಮವನ್ನು ಹಾಗೂ ಈ ಕಾಳಜಿಯನ್ನು ಮಾಡುವುದು ಉತ್ತಮ. ಉಪ್ಪಿಕಾಯಿ ಹಾಳಾಗದಂತೆ ನೋಡಿಕೊಳ್ಳುವುದು ಹೇಗೆ? ಅದಕ್ಕಾಗಿ ಈ ನಿಯಮಗಳನ್ನು ಪಾಲಿಸುವುದು ಅಗತ್ಯವಾಗಿದೆ.

ಮಳೆಗಾಲದಲ್ಲೂ ಉಪ್ಪಿಕಾಯಿ ತಾಜಾವಾಗಿಡಲು ಪಂಚ ಕ್ರಮಗಳು
ಉಪ್ಪಿನಕಾಯಿ
ಅಕ್ಷಯ್​ ಪಲ್ಲಮಜಲು​​
| Updated By: ಸಾಯಿನಂದಾ|

Updated on: Jun 12, 2025 | 3:32 PM

Share

ಉಪ್ಪಿನಕಾಯಿ (pickle) ಮನೆಯಲ್ಲೇ ಮಾಡುವುದು ಹಳ್ಳಿಗಳಲ್ಲಿ ಒಂದು ಪದ್ದತಿ ಇದೆ. ಈಗಿನ ಕಾಲದಲ್ಲಿ ಈ ನಗರದಲ್ಲಿ ವಾಸಿಸುವ ಜನ ಹಳ್ಳಿ ಆಹಾರಗಳಿಗೆ ಹೆಚ್ಚು ಒಲವು  ತೊರುತ್ತಿದ್ದಾರೆ. ಏಕೆಂದರೆ ಆರೋಗ್ಯದ ದೃಷ್ಟಿಯಿಂದ, ಹಳ್ಳಿಯ ಸಂಪ್ರದಾಯಕ್ಕೆ ಹಾಗೂ ಅಲ್ಲಿನ ಆಹಾರಕ್ಕೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಹಳ್ಳಿಗಳಲ್ಲಿ ಈ ಉಪ್ಪಿನಕಾಯಿಯನ್ನು ಬೇಸಿಗೆ ಕಾಲದಲ್ಲಿ (pickle preservation tips) ಹೆಚ್ಚಾಗಿ ಮಾಡುತ್ತಾರೆ. ಅದು ವರ್ಷಪೂರ್ತಿ ಬರುವಂತೆ ಶೇಖರಣೆ ಮಾಡುತ್ತಾರೆ. ಆದರೆ  ಮಳೆಗಾಲದಲ್ಲಿ ಹಾಳಾಗುವ ಸಾಧ್ಯತೆ ಇದೆ. ಅದಕ್ಕಾಗಿ ಕೆಲವೊಂದು ಕ್ರಮವನ್ನು ಅನುಸರಿಸುತ್ತಾರೆ. ಇನ್ನು ನಗರ ಪ್ರದೇಶದಲ್ಲೂ ಈಗ ಮನೆಯಲ್ಲೇ ಉಪ್ಪಿನಕಾಯಿ ತಯಾರು ಮಾಡುತ್ತಾರೆ. ಆದರೆ ಅದನ್ನು ವರ್ಷಪೂರ್ತಿ ಹಾಳಾಗದಂತೆ ಸಂಗ್ರಹ ಮಾಡುವುದು ಹೇಗೆ ಎಂಬ ಕ್ರಮ ಗೊತ್ತಿಲ್ಲ.

ತೇವಾಂಶ ಮತ್ತು ಹವಾಮಾನದಿಂದಾಗಿ, ಉಪ್ಪಿನಕಾಯಿ ಬೇಗನೆ ಹಾಳಾಗಲು ಪ್ರಾರಂಭಿಸುತ್ತದೆ. ಆದರೆ ಅದಕ್ಕೆ ಚಿಂತಿಸುವ ಅಗತ್ಯ ಇಲ್ಲ. ಕೆಲವು ಸುಲಭವಾದ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ನಿಮ್ಮ ಉಪ್ಪಿನಕಾಯಿಯನ್ನು ಹಲವು ತಿಂಗಳುಗಳವರೆಗೆ ರುಚಿಕರವಾಗಿ ಮತ್ತು ಸುರಕ್ಷಿತವಾಗಿರಿಸಿಕೊಳ್ಳಬಹುದು. ಉಪ್ಪಿನಕಾಯಿ ಮಾಡುವುದು ಎಷ್ಟು ಸುಲಭವೋ, ಅದನ್ನು ಉತ್ತಮ ಸ್ಥಿತಿಯಲ್ಲಿಡುವುದಕ್ಕೂ ಅಷ್ಟೇ ಗಮನ ಬೇಕು. ಮಳೆಗಾಲದಲ್ಲಿ ಉಪ್ಪಿನಕಾಯಿ ಹಾಳಾಗದಂತೆ ಹೇಗೆ ರಕ್ಷಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಉಪ್ಪಿನಕಾಯಿಯನ್ನು ಹೇಗೆ ಸಂರಕ್ಷಿಸುವುದು

ಉಪ್ಪಿನಕಾಯಿಗೆ ವಿನೆಗರ್ ಅಥವಾ ಸಿಟ್ರಿಕ್ ಆಮ್ಲವನ್ನು ಸೇರಿಸಿ:

ಉಪ್ಪಿನಕಾಯಿಯನ್ನು ಸಂರಕ್ಷಿಸಲು ಸುಲಭವೆಂದರೆ ವಿನೆಗರ್ ಅಥವಾ ಸಿಟ್ರಿಕ್ ಆಮ್ಲವನ್ನು ಬಳಸುವುದು.ಉಪ್ಪಿನಕಾಯಿಗೆ 2-3 ಹನಿ ಬಿಳಿ ವಿನೆಗರ್ ಅಥವಾ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿದಾಗ, ಅದರ pH ಮಟ್ಟವು ಕಡಿಮೆಯಾಗುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಬೆಳೆಯುವುದನ್ನು ತಡೆಯುತ್ತದೆ.ಸಿಟ್ರಿಕ್ ಆಮ್ಲವು ಸಹ ಅದೇ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಮಾರುಕಟ್ಟೆಯಲ್ಲಿ ಪುಡಿ ರೂಪದಲ್ಲಿ ಲಭ್ಯವಿದೆ. ಸ್ವಲ್ಪ ಪ್ರಮಾಣದಲ್ಲಿ ಹಾಕಿದ್ರೆ ಸಾಕು. ಇದು ಉಪ್ಪಿನಕಾಯಿ ಹಾಳಾಗಾದಂತೆ ನೋಡಿಕೊಳ್ಳುವುದಲ್ಲದೆ. ಅದರ ರುಚಿಯನ್ನು ಸಹ ಕಾಪಾಡಿಕೊಳ್ಳುತ್ತದೆ.

ಇದನ್ನೂ ಓದಿ
Image
ಹೆಣ್ಣಿನ ಸಿಂಧೂರ ಮುಟ್ಟಿದವರು ಅಂದು ಪುರಾಣದಲ್ಲೂ ಉಳಿದಿಲ್ಲ, ಇಂದು ಉಳಿದಿಲ್ಲ
Image
ಈ ನಾಲ್ಕು ರಾಶಿಯವರಿಗೆ ಚಿನ್ನ ಧರಿಸುವುದು ಅತ್ಯಂತ ಶುಭ
Image
ಮೇ 8 ಮೋಹಿನಿ ಏಕಾದಶಿ; ಪೂಜಾ ವಿಧಾನ ಮತ್ತು ಮಹತ್ವ
Image
ಶಿವನ ವಿಶೇಷ ಅನುಗ್ರಹ ಪಡೆಯಲು ಈ ಸರಳ ಪರಿಹಾರವನ್ನು ಪ್ರಯತ್ನಿಸಿ

ಇದನ್ನೂ ಓದಿ: ಈ ಜೀವಿಗಳು ತಮ್ಮ ಸಂಗಾತಿಗೆ ತುಂಬಾನೇ ನಿಷ್ಠವಾಗಿರುತ್ತಂತೆ

ಉಪ್ಪಿನಕಾಯಿ ಮಾಡುವ ಮೊದಲು ಒಣಗಿಸುವುದು ಅತ್ಯಗತ್ಯ:

ಉಪ್ಪಿನಕಾಯಿಯಲ್ಲಿ ತೇವಾಂಶ ಉಳಿದಿದ್ದರೆ, ಅದು ಬೇಗನೆ ಹಾಳಾಗಬಹುದು. ಅದಕ್ಕಾಗಿ ಉಪ್ಪಿನಕಾಯಿ ಮಾಡುವ ಮೊದಲು ಎಲ್ಲಾ ಪದಾರ್ಥಗಳನ್ನು ಬಿಸಿಲಿನಲ್ಲಿ ಸರಿಯಾಗಿ ಒಣಗಿಸುವುದು ಬಹಳ ಮುಖ್ಯ. ಈ ಮಳೆಗಾಲದಲ್ಲಿ ಸೂರ್ಯ ಬರುವುದೇ ಅಪರೂಪ, ಅದಕ್ಕಾಗಿ, ಓವನ್ ಅಥವಾ ಮೈಕ್ರೋವೇವ್ ಸಹಾಯದಿಂದ ಸ್ವಲ್ಪ ಒಣಗಿಸಬಹುದು. ಒಣ ಮಸಾಲೆಗಳು ಮತ್ತು ತರಕಾರಿಗಳು / ಹಣ್ಣುಗಳಿಂದ ಮಾಡಿದ ಉಪ್ಪಿನಕಾಯಿ ಮಾತ್ರ ದೀರ್ಘಕಾಲ ಬಾಳಿಕೆ ಬರುತ್ತದೆ.

ಪ್ಲಾಸ್ಟಿಕ್ ಅಥವಾ ಉಕ್ಕಿನ ಪಾತ್ರೆ ಬಳಸಬೇಡಿ:

ಉಪ್ಪಿನಕಾಯಿಯನ್ನು ಸಂಗ್ರಹಿಸಲು ಯಾವಾಗಲೂ ಗಾಜಿನ ಪಾತ್ರೆ ಬಳಸಿ. ಪ್ಲಾಸ್ಟಿಕ್ ಅಥವಾ ಉಕ್ಕಿನ ಪಾತ್ರೆಗಳಲ್ಲಿ ಉಪ್ಪಿನಕಾಯಿ ಬೇಗನೆ ಹಾಳಾಗುತ್ತದೆ. ಹಾಗೂ ಉಪ್ಪಿನಕಾಯಿ ಹಾಕಿ ಪಾತ್ರೆಗಳು ತುಂಬಾ ಸ್ವಚ್ಛವಾಗಿರಬೇಕು. ಜತೆಗೆ ಪಾತ್ರೆಯಲ್ಲಿ ನೀರಿನ ತೇವಾಂಶಗಳು ಇರಬಾರದು. ಉಪ್ಪಿನಕಾಯಿ ಹಾಕಿ ನಂತರ, ಸಾಸಿವೆ ಎಣ್ಣೆಯ ಒಗ್ಗರಣೆ ಹಾಕಿ, ಇದು ಉಪ್ಪಿನಕಾಯಿಯನ್ನು ತೇವಾಂಶ ಮತ್ತು ಗಾಳಿಯಿಂದ ರಕ್ಷಿಸುತ್ತದೆ ಮತ್ತು ಬ್ಯಾಕ್ಟೀರಿಯಾವನ್ನು ದೂರವಿಡುತ್ತದೆ. ಪ್ರತಿದಿನ ಉಪ್ಪಿನಕಾಯಿಯನ್ನು ತೆಗೆದಾಗ ಎಣ್ಣೆಯ ಒಗ್ಗರಣೆ ಅಥವಾ ತೇವಾಂಶ ಇದ್ದೀಯಾ ಎಂದು ನೋಡಬೇಕು. ಒಂದು ವೇಳೆ ಇಲ್ಲದಿದ್ದರೆ, ಅದರ ಮೇಲೆ ಸ್ವಲ್ಪ ಎಣ್ಣೆಯನ್ನು ಹಾಕಿ.

ಸ್ವಚ್ಛ ಚಮಚಗಳನ್ನು ಬಳಸಿ:

ಉಪ್ಪಿನಕಾಯಿಯನ್ನು ಎಂದಿಗೂ ಒದ್ದೆಯಾದ ಅಥವಾ ಕೊಳಕಾದ ಚಮಚದಿಂದ ತೆಗೆಯಬೇಡಿ. ಇದು ಅದರಲ್ಲಿ ಅಚ್ಚು ಉಂಟಾಗಲು ಕಾರಣವಾಗಬಹುದು. ಒಣ ಮತ್ತು ಸ್ವಚ್ಛವಾದ ಚಮಚವನ್ನು ಬಳಸಿ ಮತ್ತು ಉಪ್ಪಿನಕಾಯಿಯ ಮುಚ್ಚಳವನ್ನು ತಕ್ಷಣ ಮುಚ್ಚಿ ಇದರಿಂದ ಗಾಳಿಯು ಒಳಗೆ ಪ್ರವೇಶಿಸುವುದಿಲ್ಲ.

ಪ್ರತಿವಾರ ಪರಿಶೀಲನೆ ಅಗತ್ಯ:

ಮಳೆಗಾಲದಲ್ಲಿ ಉಪ್ಪಿನಕಾಯಿಯನ್ನು ಕೆಡದಂತೆ ಇಡಲು, ವಾರಕ್ಕೊಮ್ಮೆ ಉಪ್ಪಿಕಾಯಿಯ ಪಾತ್ರೆಯನ್ನು ಓಪನ್​​ ಮಾಡಿ ನೋಡಬೇಕು. ಒಂದು ವೇಳೆ ಅದರಲ್ಲಿ ಅಚ್ಚು ರೀತಿಯಲ್ಲಿ ಅಥವಾ ಡ್ರಾಯಿ ಕಂಡು ಬಂದರೆ ತಕ್ಷಣ ಅದನ್ನು ಬದಲಾವಣೆ ಮಾಡಿ. ಸ್ವಲ್ಪ ಒಗ್ಗರಣೆ ರೀತಿಯಲ್ಲಿ ಎಣ್ಣೆಯನ್ನು ಹಾಕಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!