ಇಂದಿನ ವೇಗದ ಬದುಕಿನಲ್ಲಿ ಒತ್ತಡ ಮತ್ತು ಆತಂಕವು ನಮ್ಮ ಜೀವನದ ಒಂದು ಭಾಗವಾಗಿದೆ. ಅದು ಮನೆಯಾಗಿರಲಿ ಅಥವಾ ಕಛೇರಿಯಾಗಿರಲಿ ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಒತ್ತಡಕ್ಕೆ ಬಲಿಯಾಗುತ್ತಾರೆ. ಈ ಒತ್ತಡವು ನಮ್ಮ ಮನಸ್ಸಿಗೆ ಮತ್ತು ದೇಹಕ್ಕೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಜನರು ಈ ಒತ್ತಡ ಮತ್ತು ಖಿನ್ನತೆಯನ್ನು ತೊಡೆದುಹಾಕಲು ಔಷಧಿಗಳನ್ನು ತಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಆದರೆ ಅವುಗಳ ಅತಿಯಾದ ಸೇವನೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಕೆಲಸ ಅಥವಾ ಇನ್ನಾವುದೇ ಕಾರಣದಿಂದ ಆಯಾಸ ಮತ್ತು ಒತ್ತಡದ ಸಮಸ್ಯೆಗೆ ನೀವು ಒಳಗಾಗಿದ್ದರೆ, ಅದನ್ನು ತೊಡೆದುಹಾಕಲು ನಿಯಮಿತ ಯೋಗಾಭ್ಯಾಸವು ನಿಮಗೆ ಪ್ರಯೋಜನಕಾರಿಯಾಗಿದೆ. ಈ ಕೆಲವೊಂದು ಯೋಗಭಂಗಿಯ ಸಹಾಯದಿಂದ ಒತ್ತಡವನ್ನು ತೊಡೆದುಹಾಕಿ ನೆಮ್ಮದಿಯ ಜೀವನ ನಡೆಸಬಹುದು.
ಒತ್ತಡವನ್ನು ನಿವಾರಿಸಲು ಸುಖಾನಸ ಬಹಳ ಪ್ರಯೋಜನಕಾರಿ. ಪ್ರತಿದಿನ ಕನಿಷ್ಠ ಹತ್ತು ನಿಮಿಷಗಳ ಕಾಲ ಸುಖಾಸನವನ್ನು ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗಿರುತ್ತದೆ. ಇದಕ್ಕಾಗಿ ನಿಮ್ಮ ಬಲಗಾಲನ್ನು ಎಡ ಮೊಣಕಾಲಿನ ಕೆಳಗೆ ಮತ್ತು ಎಡಗಾಲನ್ನು ಬಲ ಮೊಣಕಾಲಿನ ಕೆಳಗೆ ಇರಿಸಿ ನೇರವಾಗಿ ಕುಳಿತುಕೊಳ್ಳಿ. ನಿಮ್ಮ ಕಣ್ಣುಗಳನ್ನು ಮುಚ್ಚಿ ಮತ್ತು ಶಾಂತ ಸ್ಥಿತಿಯಲ್ಲಿ ದೇಹವನ್ನು ಸಡಿಲಗೊಳಿಸಿ. ಈ ಸಮಯದಲ್ಲಿ ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ, ನಿಧಾನವಾಗಿ ಉಸಿರನ್ನು ಬಿಡಿ. ಹಾಗೂ ಉಸಿರಾಟದ ಸ್ಥಿತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿ
ವೃಕ್ಷಾಸನ ಮಾಡುವಾಗ ವ್ಯಕ್ತಿಯ ದೇಹವು ಮರದಂತೆ ನಿಲ್ಲುತ್ತದೆ. ಈ ಆಸನವನ್ನು ಮಾಡಲು ಎಡಗಾಲನ್ನು ಧೃಡವಾಗಿ ಇರಿಸಿ, ನಿಮ್ಮ ಬಲ ಮೊಣಕಾಲು ಬಗ್ಗಿಸಿ ಮತ್ತು ನಿಮ್ಮ ಬಲ ಪಾದವನ್ನು ನಿಮ್ಮ ಎಡ ತೊಡೆಯ ಮೇಲೆ ದೃಢವಾಗಿ ಇರಿಸಿ. ಮತ್ತು ಕೈಯನ್ನು ಮೇಲೆ ಚಾಚಿ ನಮಸ್ಕಾರ ಸ್ಥಿತಿಯಲ್ಲಿರಿಸಿ. ಈ ಯೋಗಾಸನವನ್ನು ಮಾಡುವುದರಿಂದ ದೇಹವನ್ನು ಸರಿದೂಗಿಸುವ ಶಕ್ತಿ ಹೆಚ್ಚುತ್ತದೆ. ಇದರಿಂದ ಮನಸ್ಸು ಶಾಂತವಾಗುವುದರೊಂದಿಗೆ ವ್ಯಕ್ತಿಯ ಏಕಾಗ್ರತೆ ಹೆಚ್ಚುತ್ತದೆ.
ಬಾಲಾಸನ:
ಬಾಲಾಸನ ಮಾಡುವಾಗ ವ್ಯಕ್ತಿಯ ದೇಹವು ಮಲಗಿರುವ ಮಗುವಿನಂತೆ ಇರುತ್ತದೆ. ಈ ಆಸನವನ್ನು ಮಾಡುವುದರಿಂದ ಭುಜ, ಬೆನ್ನು ಮತ್ತು ಕತ್ತಿನ ಒತ್ತಡ ದೂರವಾಗುತ್ತದೆ. ಹಾಗೂ ನರಮಂಡಲದ ಸುಧಾರಣೆಯೊಂದಿಗೆ ಮಾನಸಿಕ ಅಸ್ವಸ್ಥತೆಗಳಿಂದಲೂ ಪರಿಹಾರ ಸಿಗುತ್ತದೆ. ಈ ಆಸನವನ್ನು ಮಾಡಲು ಮಂಡಿಯೂರಿ ಕುಳಿತು, ನಿಮ್ಮ ತೊಡೆಗಳು ಎದೆಯನ್ನು ಸ್ಪರ್ಶಿಸುವಂತೆ ಸಂಪೂರ್ಣವಾಗಿ ಮುಂದಕ್ಕೆ ಬಾಗಿ ಹಾಗೂ ಕೈಗಳು ವಿಶ್ರಾಂತ ಸ್ಥಿತಿಯಲ್ಲಿರಲಿ.
ಇದನ್ನೂ ಓದಿ: ಶ್ವಾಸಕೋಶದ ಕ್ಯಾನ್ಸರ್ ಅಪಾಯ ತಡೆಗಟ್ಟುವ ಯೋಗ ಭಂಗಿಗಳು
ಮಕರಾಸನವನ್ನು ಮಾಡಲು ಮೊಸಲೆಯಂತೆ ಹೊಟ್ಟೆಯ ಮೇಲೆ ಮಲಗಬೇಕು ಮತ್ತು ತಲೆಯ ಬಳಿ ಎರಡು ಕೈಗಳನ್ನು ದಿಂಬಿನಂತೆ ಇಡಬೇಕು. ಈ ಆಸನವನ್ನು ಮಾಡುವಾಗ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ದೇಹದ ಎಲ್ಲಾ ಭಾಗಗಳನ್ನು ವಿಶ್ರಾಂತ ಸ್ಥಿತಿಯಲ್ಲಿಡಿ. ಈ ಆಸನದ ನಿಯಮಿತ ಅಭ್ಯಾಸವು ವ್ಯಕ್ತಿಯ ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ಚಡಪಡಿಕೆ ಖಿನ್ನತೆಯಿಂದ ಪರಿಹಾರ ನೀಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: