ಇತರರಿಗಿಂತ ಹೆಚ್ಚಾಗಿ ನೀವು ಸೊಳ್ಳೆ ಕಡಿತಕ್ಕೆ ಒಳಗಾಗುತ್ತಿದ್ದೀರಾ? ಇದರ ಹಿಂದಿನ ವೈಜ್ಞಾನಿಕ ಕಾರಣ ಏನು?
ಸಾಮಾನ್ಯವಾಗಿ ಕೆಲವು ಜನರು ಇತರರಿಗಿಂತ ಹೆಚ್ಚಾಗಿ ಸೊಳ್ಳೆ ಕಡಿತಕ್ಕೆ ಒಳಗಾಗುವುದನ್ನು ನೀವು ಗಮಿಸಿರಬಹುದು. ಹೀಗೇಕೆ ಆಗುತ್ತದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ನೀವು ಕೂಡಾ ಸೊಳ್ಳೆ ಕಡಿತಕ್ಕೆ ಹೆಚ್ಚಾಗಿ ಒಳಗಾಗುತ್ತಿದ್ದೀರಾ? ಇದರ ಹಿಂದೆ ವೈಜ್ಞಾನಿಕ ಕಾರಣಗಳಿವೆ. ಅದು ಏನು ಎಂಬುದನ್ನು ನೋಡೋಣ.
ಸೊಳ್ಳೆ (mosquito) ಕಡಿತದಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾ ಕಾಯಿಲೆಗಳು ಬಾಧಿಸುವ ಸಾಧ್ಯತೆ ಹೆಚ್ಚು. ಅಲ್ಲದೆ ಸೊಳ್ಳೆ ಕಡಿತದಿಂತ ತುರಿಕೆ ಮತ್ತು ಚರ್ಮ ಕೆಂಪಾಗುವಂತಹ ಸಾಧ್ಯತೆಯೂ ಇರುತ್ತದೆ. ಹೀಗಿರುವಾಗ ಸೊಳ್ಳೆಗಳಿಂದ ಉಂಟಾಗುವ ಕಾಯಿಲೆಗಳು ಬಾರದಂತೆ ಹಾಗೂ ಸೊಳ್ಳೆಯ ಕಾಟವನ್ನು ತಪ್ಪಿಸಲು ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತದೆ. ಮನೆಯ ಸುತ್ತಮುತ್ತ ಸ್ವಚ್ಛವಾಗಿದ್ದರೂ ಕೂಡಾ ಕೆಲವೊಬ್ಬರನ್ನು ಸೊಳ್ಳೆಗಳು ಹುಡುಕಿಕೊಂಡು ಬಂದು ಕಚ್ಚುವುದುಂಟು. ಹೀಗೆ ಕೆಲವು ಜನರು ಇತರರಿಗಿಂತ ಹೆಚ್ಚಾಗಿ ಸೊಳ್ಳೆ ಕಡಿತಕ್ಕೆ ಒಳಗಾಗುವುದನ್ನು ಸಾಮಾನ್ಯವಾಗಿ ನಾವೆಲ್ಲರೂ ನೋಡಿರುತ್ತೇವೆ. ಅಲ್ಲದೆ ಸೊಳ್ಳೆಗಳು ನಮಗೆ ಮಾತ್ರ ಏಕೆ ಕಚ್ಚುತ್ತಿರುತ್ತವೆ ಎಂದು ಅನೇಕರ ಮನದಲ್ಲಿ ಪ್ರಶ್ನೆ ಮೂಡುತ್ತವೆ. ನೀವು ಕೂಡಾ ಇತರರಿಂತ ಹೆಚ್ಚಾಗಿ ಸೊಳ್ಳೆ ಕಡಿತಕ್ಕೆ ಒಳಗಾಗುತ್ತಿದ್ದೀರಾ? ಇದರ ಹಿಂದೆ ಕೆಲವು ವೈಜ್ಞಾನಿಕ ಕಾರಣಗಳಿವೆ. ಅದು ಏನು ಎಂಬುದನ್ನು ತಿಳಿದುಕೊಳ್ಳಿ.
ಇತರರಿಗಿಂತ ಹೆಚ್ಚು ಸೊಳ್ಳೆ ಕಡಿತಕ್ಕೆ ತುತ್ತಾಗಲು ಕಾರಣವೇನು:
ಚರ್ಮರೋಗ ತಜ್ಞೆ ಡಾ. ಲಿಂಡ್ಸೆ ಜುಬ್ರಿಟ್ಕ್ಸಿ ಸೊಳ್ಳೆಗಳು ಇತರರಿಗಿಂತ ಹೆಚ್ಚಾಗಿ ನಿಮ್ಮನ್ನು ಕಡಿಯಲು ಕಾರಣವೇನು ಎಂಬುದನ್ನು ಹೇಳಿದ್ದಾರೆ. ಈ ಕುರಿತ ಮಾಹಿತಿಯನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆವರು ಮತ್ತು ದೇಹದ ಅಧಿಕ ಉಷ್ಣತೆ: ಡಾ. ಜುಬ್ರಿಟ್ಕ್ಸಿ ಪ್ರಕಾರ ಸೊಳ್ಳೆಗಳು ಬೆವರು ಮತ್ತು ಸಾಮಾನ್ಯಕ್ಕಿಂತ ಹೆಚ್ಚಿನ ದೇಹದ ಉಷ್ಣತೆಯನ್ನು ಹೊಂದಿರುವ ಜನರತ್ತ ಹೆಚ್ಚಾಗಿ ಆಕರ್ಷಿತವಾಗುತ್ತವೆ. ಬೆವರಿನಿಂದ ಬಿಡುಗಡೆಯಾಗುವ ಅಮೋನಿಯಾ, ಯೂರಿಕ್ ಆಮ್ಲ ಮತ್ತು ಲ್ಯಾಕ್ಟಿಕ್ ಆಮ್ಲಕ್ಕೆ ಸೊಳ್ಳೆಗಳು ಹೆಚ್ಚು ಆಕರ್ಷಿತವಾಗುತ್ತವೆ. ಅಲ್ಲದೆ ಅಧಿಕ ದೇಹದ ಉಷ್ಣತೆಯನ್ನು ಹೊಂದಿರುವವರನ್ನೂ ಸೊಳ್ಳೆಗಳು ಹೆಚ್ಚಾಗಿ ಕಡಿಯುತ್ತವೆ.
ಇದನ್ನೂ ಓದಿ: ಮಳೆಗಾಲದಲ್ಲಿ ಸೊಳ್ಳೆಗಳಿಂದ ತೊಂದರೆಯಾಗುತ್ತಿದೆಯೇ?: ಹಾಗಿದ್ರೆ ಈ ಆ್ಯಪ್ ಇನ್ಸ್ಟಾಲ್ ಮಾಡಿ
ಅತಿಯಾದ ಮದ್ಯ ಸೇವನೆ: ಸೊಳ್ಳೆ ಕಡಿತಕ್ಕೆ ನೀವು ಹೆಚ್ಚು ಒಳಗಾಗುವಂತೆ ಮಾಡುವ ಇನ್ನೊಂದು ವಿಷಯವೆಂದರೆ ಬಿಯರ್ ಕುಡಿಯುವುದು. ಹೌದು ಅತಿಯಾದ ಬೀಯರ್ ಸೇವನೆಯಿಂದಲೂ ಸೊಳ್ಳೆ ಕಡಿತಕ್ಕೆ ಒಳಗಾಗಬಹುದು ಎಂದು ಡಾ. ಲಿಂಡ್ಸೆ ಜುಬ್ರಿಟ್ಕ್ಸಿ ಹೇಳುತ್ತಾರೆ.
ಬ್ಯಾಕ್ಟೀರಿಯಾಗಳು: ನಮ್ಮ ಚರ್ಮದ ಮೇಲೆ ಜೀವಿಸುವ ಬ್ಯಾಕ್ಟೀರಿಯಾದ ಪ್ರಕಾರ ಮತ್ತು ಸಂಖ್ಯೆಯು ಕೂಡಾ ಹೆಚ್ಚು ಸೊಳ್ಳೆ ಕಡಿತಕ್ಕೆ ತುತ್ತಾಗಲು ಒಂದು ಕಾರಣವಾಗಿದೆ. ಅಲ್ಲದೆ ಕಣಕಾಲುಗಳ ಸುತ್ತ ಹೆಚ್ಚು ಬ್ಯಾಕ್ಟೀರಿಯಾಗಳು ಜೀವಿಸುವ ಕಾರಣ ನಮ್ಮ ಕಣ ಕಾಲುಗಳ ಮೇಲೆ ಹೆಚ್ಚಾಗಿ ಸೊಳ್ಳೆ ಕಡಿಯುತ್ತವೆ.
View this post on Instagram
ದೇಹದ ವಾಸನೆ: ಸೊಳ್ಳೆಗಳು ನಿಮ್ಮತ್ತ ಹೆಚ್ಚು ಆಕರ್ಷಿತವಾಗಲು ನಿಮ್ಮ ದೇಹದ ವಾಸನೆಯೂ ಕಾರಣವಾಗಬಹುದು. ಚರ್ಮದ ಮೇಲೆ ಇರುವ ಅಮೋನಿಯಾ ಮತ್ತು ಲ್ಯಾಕ್ಟಿಕ್ ಆಮ್ಲದಂತಹ ಸಂಯುಕ್ತಗಳು ಸೊಳ್ಳೆಗಳನ್ನು ನಿಮ್ಮತ್ತ ಹೆಚ್ಚು ಆಕರ್ಷಿಸುವಂತೆ ಮಾಡುತ್ತದೆ.
ನಿಮ್ಮ ಬಟ್ಟೆಯ ಬಣ್ಣ: ಸೊಳ್ಳೆಗಳು ಕಪ್ಪು ಮತ್ತು ಇತರ ಗಾಢ ಬಣ್ಣಗಳ ಕಡೆಗೆ ಹೆಚ್ಚು ಆಕರ್ಷಿತವಾಗುತ್ತವೆ. ಆದ್ದರಿಂದ ನೀವು ಕಪ್ಪು, ಹಸಿರು, ಕೆಂಪು ಸೇರಿದಂತೆ ಇತರೆ ಯಾವುದೇ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಸೊಳ್ಳೆ ಕಡಿತಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 5:17 pm, Fri, 6 October 23