ಲಿಪ್ಸ್ಟಿಕ್ ಹಚ್ಚಿ ನಿಮ್ಮ ತುಟಿ ಹಾನಿಗೊಳಗಾಗುತ್ತಿದೆಯೇ? ನೀವು ಪ್ರತಿನಿತ್ಯ ಲಿಪ್ಸ್ಟಿಕ್ ಬಳಸುವುದಾದರೆ ಈ ಸಲಹೆಗಳನ್ನು ಅನುಸರಿಸಿ
ನೀವು ಅತಿಯಾಗಿ ಮೇಕಪ್ ಮಾಡಿಕೊಳ್ಳುವ ಮೂಲಕ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ತಜ್ಞರು ಹೇಳಿರುವ ಈ ಕೆಲವು ಸಲಹೆಗಳನ್ನು ಅನುಸರಿಸುವ ಮೂಲಕ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಿ.
ಮದುವೆ ಸಮಾರಂಭ, ವಿಶೇಷ ಹಬ್ಬ ಹರಿದಿನಗಳು ಬಂತೆಂದರೆ ಸುಂದರವಾಗಿ ಅಲಂಕಾರಗೊಳ್ಳುವುದು ಮಹಿಳೆಯರ ಕೆಲಸ ಭಾಗದಲ್ಲಿ ಒಂದು ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ಮೇಕಪ್ ಇಲ್ಲದೆ ಮಹಿಳೆಯರು ಹೊರಗಡೆ ಇಳಿಯುವುದೇ ಇಲ್ಲ. ಸಾಮಾನ್ಯವಾಗಿ ಸುಂದರವಾಗಿ ಕಾಣಿಸಲು ಮೇಕಪ್ ಜೊತೆಯಲ್ಲಿ ಲಿಪ್ಸ್ಟಿಕ್ ಕೂಡಾ ಉತ್ತಮ ಆಯ್ಕೆ. ಆದರೆ ಅತಿಯಾದ ಬಳಕೆಯಿಂದ ಮುಖದ ಸೌಂದರ್ಯ ಹೊಳಪು ಕಳೆದುಕೊಳ್ಳಬಹುದು. ಹಾಗಿರುವಾಗ ಲಿಪ್ಸ್ಟಿಕ್ ನಿಮ್ಮ ತುಟಿಗಳನ್ನು ಹಾನಿಗೊಳಗಾಗಿಸುತ್ತಿದೆ ಎಂದಾದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ.
ಚರ್ಮರೋಗ ತಜ್ಞರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಲಿಪ್ಸ್ಟಿಕ್ಗಳನ್ನು ತೈಲಗಳು ಮತ್ತು ಮೇಣದಿಂದ ತಯಾರಿಸಲಾಗುತ್ತದೆ. ಲಿಪ್ಸ್ಟಿಕ್ ವಿವಿಧ ಬಣ್ಣಗಳು ಮತ್ತು ವರ್ಣ ದ್ರವ್ಯ ಗಳಿಂದ ಬರುತ್ತದೆ ಎಂದು ಶಿರ್ಷಿಕೆ ನೀಡುವ ಮೂಲಕ ಪೋಸ್ಟ್ ಹಂಚಿಕೊಂಡಿದ್ದಾರೆ. ನೀವು ಲಿಪ್ಸ್ಟಿಕ್ ಹೆಚ್ಚು ಬಳಸಿ ಕಪ್ಪು ತುಟಿಗಳನ್ನು ಹೊಂದಿದ್ದರೆ ಕೆಲವು ಸಲಹೆಗಳು ಈ ಕೆಳಗಿನಂತಿದೆ. ಅವುಗಳನ್ನು ಅನುಸರಿಸುವ ಮೂಲಕ ಸಮಸ್ಯೆಯನ್ನು ನಿಯಂತ್ರಿಸಬಹುದಾಗಿದೆ.
ಆರೋಗ್ಯಕರ ತುಟಿ ಪಡೆಯಲು ಇಲ್ಲಿವೆ ಕೆಲವು ಸಲಹೆಗಳು; ನೀವು ಲಿಪ್ಕ್ಸ್ಟಿಕ್ ಹಚ್ಚುವ ಮೊದಲು ಲಿಪ್ ಬಾಂಬ್ ಹಚ್ಚಿರಿ ದಿನಕ್ಕೆ ಎರಡು ಬಾರಿ ರೀಟಚ್ ಮಾಡಬೇಡಿ ಎಲ್ಲಾ ಸಮಯದಲ್ಲೂ ಲಿಪ್ಸ್ಟಿಕ್ಗಳಿಂದ ವಿರಾಮ ತೆಗೆದುಕೊಳ್ಳಿ ತುಂಬಾ ಹಳೆಯ ಲಿಪ್ಸ್ಟಿಕ್ಗಳನ್ನು ಬಳಸಬೇಡಿ
ಆರೋಗ್ಯಕರ ತುಟಿ ಹೊಂದಲು ಈ ಕೆಲವು ತಪ್ಪುಗಳನ್ನು ಮಾಡಬೇಡಿ ತುಟಿ ನೆಕ್ಕುವುದು ಧೂಮಪಾನ ಪದೇ ಪದೇ ಲಿಪ್ಸ್ಟಿಕ್ ಅಳವಡಿಸುವುದು
View this post on Instagram
ಇದನ್ನೂ ಓದಿ:
Pimples: ನಿಮ್ಮ ಮುಖದ ಅಂದವನ್ನು ಕಿತ್ತುಕೊಂಡ ಮೊಡವೆ ಸಮಸ್ಯೆಯನ್ನು ಹೋಗಲಾಡಿಸಲು ಕೆಲವು ಟಿಪ್ಸ್ಗಳು ನಿಮಗಾಗಿ
Beauty Tips: ಕತ್ತೆ ಹಾಲಿನಿಂದ ಮುಖದ ಸೌಂದರ್ಯ ಹೆಚ್ಚಾಗುತ್ತಾ?; ಅಚ್ಚರಿಯ ಸಂಗತಿ ಇಲ್ಲಿದೆ