Art of Apologizing: ಸಂಬಂಧವನ್ನು ಸರಿಪಡಿಸಿಕೊಳ್ಳಲು ಇದು ಉತ್ತಮ ಮಾರ್ಗ, ಈ 5 ಸಲಹೆ ನಿಮಗಾಗಿ
ಕ್ಷಮೆಯಾಚಿಸುವುದು ಉತ್ತಮ ಹಾಗೂ ಆರೋಗ್ಯಕರ ಸಂಬಂಧವನ್ನು ನಿರ್ಮಿಸುವ ಸಾಧನವಾಗಿದೆ. ಒಂದು ಕ್ಷಮೆಯು ಸಂಬಂಧದ ಉಳಿವಿಗೆ ಕಾರಣವಾಗುತ್ತದೆ. ಈ ಕ್ಷಮಾಪಣಾ ಭಾಷೆಗಳು ಯಾವುವು ಎಂಬುದು ಇಲ್ಲಿದೆ.

ಕ್ಷಮೆಯಾಚಿಸುವುದು ಉತ್ತಮ ಹಾಗೂ ಆರೋಗ್ಯಕರ ಸಂಬಂಧವನ್ನು ನಿರ್ಮಿಸುವ ಸಾಧನವಾಗಿದೆ. ಒಂದು ಕ್ಷಮೆಯು ಸಂಬಂಧದ ಉಳಿವಿಗೆ ಕಾರಣವಾಗುತ್ತದೆ. ಈ ಕ್ಷಮಾಪಣಾ ಭಾಷೆಗಳು ಯಾವುವು ಎಂಬುದು ಇಲ್ಲಿದೆ. ಸಂಬಂಧದಲ್ಲಿ ಒಂದು ಮಾತು ಬರುತ್ತದೆ ಹೋಗುತ್ತದೆ. ಈ ಮಾತುಗಳು ಅಥವಾ ನಡವಳಿಕೆಗಳು ಕಟುವಾಗಿದ್ದರೆ ಒಬ್ಬರ ಮನಸ್ಸಿಗೆ ನೋವಾಗಬಹುದು, ಒಂದು ಕ್ಷಮೆಯು ಈ ನೋವನ್ನು ಮರೆಸಿ ಸಂಗಾತಿಯ ಮುಖದಲ್ಲಿ ನಗು ಮೂಡಿಸುತ್ತದೆ. ಕ್ಷಮೆಯಾಚನೆ ಆರೋಗ್ಯಕರ ಸಂಬಂಧದ ನಿರ್ಣಾಯಕ ಭಾಗವಾಗಿದೆ. ಇದು ಆಳವಾದ ಸಂಪರ್ಕ ಮತ್ತು ಬಲವಾದ ಸಂಬಂಧಕ್ಕೆ ಕಾರಣವಾಗುತ್ತದೆ. ಈ ಕ್ಷಮಾಪಣಾ ಭಾಷೆಗಳು ಆರೋಗ್ಯಕರ ಸಂಬಂಧಗಳನ್ನು ನಿರ್ಮಿಸಲು ಮತ್ತು ನಿರ್ವಹಿಸಲು ಪ್ರಬಲ ಸಾಧನವಾಗಿದೆ.
ಥೆರಪಿಸ್ಟ್ ಹಾಗೂ ರಿಲೇಷನ್‌ಶಿಪ್ ಎಕ್ಸ್ಪರ್ಟ್ ಆಗಿರುವ ಜೋರ್ಡಾನ್ ಗ್ರೀನ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಂ ಪೋಸ್ಟ್ನಲ್ಲಿ ಸಂಬಂಧದ ಉಳಿವಿಗಾಗಿ ಐದು ಕ್ಷಮಾಪಣಾ ಭಾಷೆಗಳನ್ನು ಹಂಚಿಕೊಂಡಿದ್ದಾರೆ.
ವಿಷಾದ ವ್ಯಕ್ತಪಡಿಸುವುದು: ಈ ರೀತಿಯ ಕ್ಷಮೆಯಾಚನೆಯಲ್ಲಿ ‘ನನ್ನನ್ನು ಕ್ಷಮಿಸಿ’ ಎಂದು ಹೇಳುವುದು ಮುಖ್ಯವಾಗಿರುತ್ತದೆ. ನಿಮ್ಮ ಮಾತು ಅಥವಾ ನಡವಳಿಕೆಯಿಂದ ನಿಮ್ಮ ಸಂಗಾತಿಗಾದ ನೋವನ್ನು ಸರಿಪಡಿಸಲು ಈ ಕ್ಷಮಾ ಭಾಷೆಯನ್ನು ಬಳಸಿ. ನೀವು ಯಾವುದರ ಬಗ್ಗೆ ವಿಷಾದಿಸುತ್ತೀರಿ ಎಂಬುದನ್ನು ಅವರಿಗೆ ವಿವರಿಸಿ. ನೀವು ಅವರ ಮನಸ್ಸಿಗೆ ಎಷ್ಟೆಲ್ಲಾ ನೋವು ಕೊಟ್ಟಿದ್ದೀರಿ ಎಂಬುದು ನಿಮಗೆ ತಿಳಿದಿದೆ ಎಂದು ಹೇಳಿ. ಹಾಗೂ ಸಂಗಾತಿಯನ್ನು ಸಮಾಧಾನ ಪಡಿಸುತ್ತಾ ಮೆಲು ಧ್ವನಿಯಲ್ಲಿ ಅವರ ಕಣ್ಣಲ್ಲಿ ಕಣ್ಣಿಟ್ಟು ಕ್ಷಮೆಯನ್ನು ಕೇಳಿ.
ಜವಾಬ್ದಾರಿಯನ್ನು ಒಪ್ಪಿಕೊಳ್ಳುವುದು: ನೀವು ಮಾಡಿದಂತಹ ತಪ್ಪಿನ ಹೊಣೆಯನ್ನು ನೀವೇ ಹೊತ್ತುಕೊಳ್ಳಬೇಕು. ಹಾಗೂ ನಿಮ್ಮ ನಡವಳಿಕೆಯು ತಪ್ಪಾಗಿತ್ತು ಎಂದು ನೀವು ನಿಮ್ಮ ಸಂಗಾತಿಯ ಬಳಿ ಒಪ್ಪಿಕೊಂಡು ಕ್ಷಮೆಯನ್ನು ಕೇಳಬೇಕು. ಈ ರೀತಿಯ ಕ್ಷಮೆಯಲ್ಲಿ ‘ತಪ್ಪಾಯಿತು’ ಎಂಬ ಮಾತಿನಿಂದ ಪ್ರಾರಂಭಿಸಿ ನಂತರ ಆ ತಪ್ಪು ಮಾಡಲು ಕಾರಣವೇನು ಎಂಬ ವಿವರಣೆಯನ್ನು ನೀಡಬೇಕು. ಈ ರೀತಿಯ ಕ್ಷಮೆಯಲ್ಲಿ ಸ್ವಯಂ ಸಮರ್ಥನೆ ಮತ್ತು ಇತರರನ್ನು ದೂಷಿಸುವ ಪ್ರವೃತ್ತಿಯನ್ನು ಬಿಡುವ ಅಗತ್ಯವಿದೆ. ಸಂಬಂಧವನ್ನು ಉಳಿಸಿಕೊಳ್ಳಲು ಈ ರೀತಿಯಾಗಿ ಜವಬ್ದಾರಿ ಸ್ವಿಕರಿಸುವುದು ಪ್ರಬುದ್ಧತೆಯ ಸಂಕೇತವಾಗಿದೆ.
ಮರುಪಾವತಿ ಮಾಡುವುದು: ಈ ಕ್ಷಮಾಪಣೆ ಭಾಷೆಯು ನೀವು ನಿಮ್ಮ ಸಂಗಾತಿಗೆ ಮಾಡಿರುವ ನೋವನ್ನು ಸರಿದೂಗಿಸುವುದಾಗಿದೆ. ಅಥವಾ ನಿಮ್ಮನ್ನು ನೀವು ತಿದ್ದಿಕೊಳ್ಳುವಂತದ್ದಾಗಿದೆ. ನೀವು ಅವರನ್ನು ತುಂಬಾ ಪ್ರೀತಿಸುತ್ತೀರಿ ಹಾಗೂ ಕ್ಷಮಿಸಿ ಎಂದು ಹೇಳಲು ಈ ಕ್ಷಮಾಪಣಾ ಭಾಷೆಯನ್ನು ಬಳಸಬಹುದು. ಇಲ್ಲಿ ನೀವು ಪತ್ರಗಳನ್ನು ಬರೆಯುವ ಮೂಲಕ, ಉಡುಗೊರೆಗಳನ್ನು ನೀಡುವ ಮೂಲಕ ಹಾಗೂ ಅವರ ಕೆಲಸಗಳಲ್ಲಿ ಸಹಾಯವನ್ನು ಮಾಡುವ ಮೂಲಕ ಈ ರೀತಿಯಾಗಿ ಮಾಡಿದ ತಪ್ಪಿಗೆ ಕ್ಷಮೆಯನ್ನು ಕೇಳಬಹುದು. ಮತ್ತು ನೀವು ಅವರನ್ನು ಮತ್ತೊಮ್ಮೆ ಯಾವತ್ತೂ ಈ ರೀತಿಯಾಗಿ ನೋಯಿಸುವುದಿಲ್ಲ ಎಂಬುದನ್ನು ಅರ್ಥ ಮಾಡಿಸಬೇಕು. ಇದು ನಿಮ್ಮ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ.
ಇದನ್ನೂ ಓದಿ:Relationships Tips: ನಿಮ್ಮಲ್ಲಿ ಈ ಗುಣವಿದ್ದರೆ ಮಾತ್ರ ನಿಮ್ಮ ಪ್ರೀತಿ ನಿಜವಾಗಿರಲು ಸಾಧ್ಯ
ಪ್ರಾಮಾಣಿಕವಾಗಿ ಪಶ್ಚಾತಾಪ ಪಡುವುದು: ಈ ಕ್ಷಮಾಪಣೆ ಭಾಷೆಗೆ ನಿಮ್ಮ ಒರಟು ನಡವಳಿಕೆಗಳನ್ನು ಬದಲಾಯಿಸುವ ಬಯಕೆಯನ್ನು ವ್ಯಕ್ತಪಡಿಸುವ ಅಗತ್ಯವಿದೆ. ಮತ್ತು ನಿಮ್ಮ ಸಂಗಾತಿ ಮತ್ತೊಮ್ಮೆ ಈ ರೀತಿಯಾಗಿ ನೋವು ಕೊಡದಂತೆ ನೀವು ನೋಡಿಕೊಳ್ಳಬೇಕಾಗುತ್ತದೆ. ನಿಜವಾದ ಪಶ್ಚಾತಾಪವೆಂದರೆ, ನೀವು ಬದಲಾಗಬೇಕೆಂದಿರುವ ಉದ್ದೇಶವನ್ನು ಸಂಗಾತಿಗೆ ತಿಳಿಸುವುದು, ನೀವು ಅವರನ್ನು ಮತ್ತೆ ಯಾವತ್ತೂ ನೋಯಿಸಲ್ಲ ಎಂದು ಹೇಳುವುದು, ನಿಮ್ಮಲ್ಲಿ ನೀವು ಒಳ್ಳೆಯ ಬದಲಾವಣೆಯನ್ನು ತರುವ ಕ್ಷಮೆಯಾಚಿಸಬಹುದು.
ಕ್ಷಮೆಯನ್ನು ಕೋರುವುದು: ನೀವು ದಯವಿಟ್ಟು ನನ್ನನ್ನು ಕ್ಷಮಿಸುವಿರಾ ಎಂದು ಹೇಳುವ ಮೂಲಕ ಕ್ಷಮೆಯನ್ನು ಕೇಳಬೇಕು. ಇದು ನಿಮ್ಮ ಸಂಗಾತಿಯಲ್ಲಿ ನೀವು ಸಂಬಂಧವನ್ನು ಸರಿಪಡಿಸಲು ಹಾಗೂ ಸಂಬಂಧದಲ್ಲಿ ಮುಂದುವರಿಯಲು ಬಯಸುತ್ತೀರಿ ಎಂಬ ಭಾವನೆಯನ್ನು ಮೂಡಿಸುತ್ತದೆ. ಹಾಗೂ ಇತರ ವ್ಯಕ್ತಿಗಳು ಮತ್ತು ಸಂಬಂಧದ ಬಗ್ಗೆ ನೀವು ಕಾಳಜಿ ತೋರಿಸುತ್ತೀರಿ ಎಂಬ ಭಾವನೆಯನ್ನು ಮೂಡಿಸುತ್ತದೆ. ನೀವು ಏನಾದರೂ ತಪ್ಪು ಮಾಡಿದ್ದೀರಿ ಎಂದಾದರೆ ಕ್ಷಮೆಯನ್ನು ಕೇಳಿಬಿಡಿ. ನಾವು ಕೆಳುವ ಒಂದು ಕ್ಷಮೆಯು ನಮ್ಮ ಸಂಬಂಧದ ಬಂಧವನ್ನು ಇನ್ನಷ್ಟು ಬಲಿಷ್ಟಗೊಳಿಸುತ್ತದೆ.
Published On - 4:39 pm, Fri, 17 February 23