ಜಗತ್ತು ಅಂತ್ಯವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ವಿಜ್ಞಾನ ಜಗತ್ತು ನೀಡಿದೆ. ಆಗಾ ನಾವು ಯಾರೂ ಇರುವುದಿಲ್ಲ ಎಂಬ ಸತ್ಯಕ್ಕೆ ಭೂಮಂಡಲದಲ್ಲಿ ಆಗುತ್ತಿರುವ ಕೆಲವೊಂದು ಘಟನೆಗಳೇ ಸಾಕ್ಷಿ. ಇದರ ಬಗ್ಗೆ ಮನುಷ್ಯ ಕುಲಕ್ಕೆ ಒಂದು ದೊಡ್ಡ ಎಚ್ಚರಿಕೆಯನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ನೀಡಿದೆ. ಬೃಹತ್ ಕ್ಷುದ್ರಗ್ರಹವು ಭೂಮಿಯ ಕಡೆಗೆ ಸಾಗುತ್ತಿದೆ ಎಂದು ನಾಸಾ ಹೇಳಿದೆ. ಕ್ಷುದ್ರಗ್ರಹ ಅತಿ ವೇಗವಾಗಿ ಭೂಮಿಯತ್ತ ಸಾಗುತ್ತಿದೆ ಎಂದು ಹೇಳಿದ್ದಾರೆ. ಇದು ಮಾತ್ರವಲ್ಲದೆ ಈ ಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ಜುಲೈ 25ರಂದು ಈ ಗ್ರಹ ಭೂಮಿಯ 3,350,000 ಮೈಲುಗಳನಷ್ಟು ಹತ್ತಿರಕ್ಕೆ ಬರಲಿದೆ ಎಂದು ಹೇಳಲಾಗಿದೆ.
ಬಾಹ್ಯಾಕಾಶವು ಈ ಗ್ರಹಕ್ಕೆ 2024 ಎನ್ವಿ1 ಎಂದು ಹೆಸರಿಸಿದೆ. ಇನ್ನು ಸ್ಮಾಲ್-ಬಾಡಿ ಡೇಟಾಬೇಸ್ ಲುಕಪ್ ಇದು ಭೂಮಿಗೆ ಸಮೀಪವಿರುವ ಕ್ಷುದ್ರಗ್ರಹವಾಗಿದೆ. ಹಾಗೂ ಇದು ಅಪೊಲೊ ಕ್ಷುದ್ರಗ್ರಹಗಳ ಗುಂಪಿಗೆ ಸೇರಿದೆ ಎಂದು ಹೇಳಲಾಗಿದೆ. ಈ ಗ್ರಹ ಚಲಿಸುವ ವೇಗವು ಅದ್ಭುತವಾಗಿದೆ. ನಾಸಾ ಹೇಳಿರುವ ಪ್ರಕಾರ, ಇದು ಸೆಕೆಂಡಿಗೆ 10.17 ಕಿಮೀ ವೇಗದಲ್ಲಿ ಚಲಿಸುತ್ತದೆ. ಗಂಟೆಗೆ 36601.31 ಕಿಮೀ ಸಾಗುತ್ತದೆ. 2019ರಲ್ಲಿಯೇ ಈ ಗ್ರಹ ಚಲಿಸಲು ಪ್ರಾರಂಭಿಸಿತ್ತು.
ಕ್ಷುದ್ರಗ್ರಹವು ಬೆಳಕಿನಷ್ಟೇ ವೇಗವಾಗಿ ಚಲಿಸುತ್ತದಯೇ ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿದೆ. ಆದರೆ ನಾಸಾ ಹೇಳಿರುವ ಪ್ರಕಾರ ಬೆಳಕಿನ ವೇಗವನ್ನು ಮೀರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆಲ್ಬರ್ಟ್ ಐನ್ಸ್ಟೈನ್ನ ಸಾಪೇಕ್ಷತಾ ಸಿದ್ಧಾಂತದ ಪ್ರಕಾರ, ಬೆಳಕಿನ ವೇಗವು ಸೆಕೆಂಡಿಗೆ 300,000 ಕಿಲೋಮೀಟರ್ ಅಥವಾ ಸೆಕೆಂಡಿಗೆ 186,000 ಮೈಲುಗಳು. ಅವರ ಸಮೀಕರಣದ ಪ್ರಕಾರ, E=mc2(ಸ್ಲ್ವೇರ್), ಶಕ್ತಿ (E), ದ್ರವ್ಯರಾಶಿಗೆ ಸಮನಾಗಿರುತ್ತದೆ (M) ಬೆಳಕಿನ ವರ್ಗದ ವೇಗ (c2).
ಇದನ್ನೂ ಓದಿ: 2025ಕ್ಕೆ ಯುದ್ಧ, 5079ರಲ್ಲಿ ಪ್ರಪಂಚ ಅಂತ್ಯ, ಭೂಮಿ ನಾಶ, ಆಘಾತಕಾರಿ ಭವಿಷ್ಯ ನುಡಿದ ಬಾಬಾ ವಂಗಾ
ಐನ್ಸ್ಟೈನ್ ಈ ಸಿದ್ಧಾಂತವನ್ನು ಗಮನಿಸಿದಾಗ ಬೆಳಕಿನ ವೇಗಕ್ಕಿಂತ ಕ್ಷುದ್ರಗ್ರಹದ ವೇಗ ಕಡಿಮೆ ಎಂದು ಹೇಳಲಾಗಿದೆ. ಇದು ವಿನಾಶದ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ. ಒಂದು ವೇಳೆ ಈ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಕೋಟ್ಯಾಂತರ ಸಾವು ನೋವುಗಳು ಸಂಭವಿಸಲಿದೆ. ಸುಮಾರು ಅರ್ಧಕ್ಕೆ ಅರ್ಧ ಜಗತ್ತು ನಾಶವಾಗುತ್ತದೆ. ಇದರ ಜತೆಗೆ ಮತ್ತೊಂದು ಶಿಲಾ ಗ್ರಹವು ಭೂಮಿಗೆ ಬರುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:50 pm, Thu, 25 July 24