Eye Drops: ಐ ಡ್ರಾಪ್ ಹೆಚ್ಚಾಗಿ ಬಳಸ್ತಿದ್ದೀರಾ? ಈ ತಪ್ಪುಗಳನ್ನು ಮಾಡಬೇಡಿ
ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಎಂಬಂತೆ ದೇಹದ ಎಲ್ಲಾ ಇಂದ್ರಿಯಗಳಲ್ಲಿ ಕಣ್ಣುಗಳು ಪ್ರಮುಖವಾದದ್ದು, ಅದರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಸರ್ವೇಂದ್ರಿಯಾಣಾಂ ನಯನಂ ಪ್ರಧಾನಂ ಎಂಬಂತೆ ದೇಹದ ಎಲ್ಲಾ ಇಂದ್ರಿಯಗಳಲ್ಲಿ ಕಣ್ಣುಗಳು ಪ್ರಮುಖವಾದದ್ದು, ಅದರ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಮೊಬೈಲ್, ಲ್ಯಾಪ್ಟಾಪ್, ಟಿವಿ ಪರದೆಯ ಮುಂದೆ ಹೆಚ್ಚು ಸಮಯ ಕಳೆಯುವುದರಿಂದ ಮತ್ತು ಸಾಕಷ್ಟು ನಿದ್ರೆ ಮಾಡದ ಕಾರಣ, ಕಣ್ಣುಗಳಿಗೆ ಹೆಚ್ಚಿನ ಹಾನಿ ಉಂಟಾಗುತ್ತದೆ. ನವದೆಹಲಿಯ ವಿಷನ್ ಐ ಸೆಂಟರ್‌ನ ವೈದ್ಯಕೀಯ ನಿರ್ದೇಶಕ ಡಾ. ತುಷಾರ್ ಗ್ರೋವರ್ ಅವರು ಸಂದರ್ಶನವೊಂದರಲ್ಲಿ ತಿಳಿಸಿದಂತೆ, ನಾವು ಲ್ಯಾಪ್‌ಟಾಪ್‌ಗಳು, ಮೊಬೈಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು, ಇ-ರೀಡರ್‌ಗಳು ಮತ್ತು ದೂರದರ್ಶನ ಸೇರಿದಂತೆ ಹೆಚ್ಚು ಹೆಚ್ಚು ಡಿಜಿಟಲ್ ಪರದೆಗಳನ್ನು ಬಳಸುತ್ತಿದ್ದೇವೆ.
ಈ ಕಾರಣದಿಂದಾಗಿ, ಇವೆಲ್ಲವೂ ನಮ್ಮ ಕಣ್ಣುಗಳ ಮೇಲೆ ತುಂಬಾ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಇದರಿಂದಾಗಿ ಕಣ್ಣುಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದರಿಂದ ಕಣ್ಣುಗಳಲ್ಲಿ ನೋವು, ತಲೆನೋವು, ದೃಷ್ಟಿ ಮಂದವಾಗುವುದು, ಕಣ್ಣುಗಳು ಒಣಗುವುದರ ಜತೆಗೆ ಕುತ್ತಿಗೆ ಮತ್ತು ಭುಜಗಳಲ್ಲಿ ನೋವು ಉಂಟಾಗುತ್ತದೆ.
ಮನುಷ್ಯನಿಗೆ ನಿದ್ರೆ ಬಹಳ ಮುಖ್ಯ, ನಿಮ್ಮ ಮಲಗುವ ಕ್ರಮದಲ್ಲಿ ತೊಂದರೆಯಾದರೆ, ಮುಂದಿನ ದಿನಗಳಲ್ಲಿ ಅದು ನಿಮಗೆ ದೊಡ್ಡ ಸಮಸ್ಯೆಯಾಗಬಹುದು.
ನಾವು ದೈನಂದಿನ ಜೀವನದಲ್ಲಿ ಮಾಡುವ ಕೆಲವು ಅಭ್ಯಾಸಗಳಿವೆ. ಇದರಿಂದಾಗಿ ಕಣ್ಣುಗಳು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ನಾವು ಏನು ಮಾಡಬಾರದು ಎನ್ನುವ ಪ್ರಶ್ನೆ ಕಾಡುತ್ತದೆ.
ಕಣ್ಣುಗಳನ್ನು ಎಂದಿಗೂ ಹೆಚ್ಚು ಉಜ್ಜಬಾರದು ಐ ಡ್ರಾಪ್ಸ್ಗಳನ್ನು ಅತಿಯಾಗಿ ಬಳಸಬಾರದು, ಇದರಿಂದಾಗಿ ನಿಮ್ಮ ಕಣ್ಣುಗಳಲ್ಲಿ ಸಮಸ್ಯೆಗಳು ಸಹ ಪ್ರಾರಂಭವಾಗಬಹುದು. ಡಾ. ರೇಖಾ ರಾಧಾಮೋನಿ ಅವರು ತಮ್ಮ ಇನ್ಸ್ಟಾಗ್ರಾಂನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಕಣ್ಣುಗಳಿಗೆ ಸಂಬಂಧಿಸಿದ ತಪ್ಪುಗಳ ಬಗ್ಗೆ ಬರೆದುಕೊಂಡಿದ್ದಾರೆ.
ಮತ್ತಷ್ಟು ಓದಿ: Blinking Eye: ನಿಮ್ಮ ಕಣ್ಣುಗಳು ಅದರುತ್ತಿವೆಯೇ? ಶುಭ, ಅಶುಭ ಬದಿಗಿಡಿ, ಆರೋಗ್ಯ ಸಮಸ್ಯೆ ಏನಿದೆ ತಿಳಿಯಿರಿ
ಏನು ಮಾಡಬಾರದು? ಬಿಸಿ ನೀರಿನಿಂದ ಕಣ್ಣು ತೊಳೆಯಬೇಡಿ: ನಮ್ಮಲ್ಲಿ ಹಲವರಿಗೆ ಬಿಸಿ ನೀರಿನಿಂದ ಕಣ್ಣು ತೊಳೆಯುವ ಅಭ್ಯಾಸವಿದೆ. ಆದರೆ ಹಾಗೆ ಮಾಡುವುದು ಸರಿಯಲ್ಲ. ಕಣ್ಣುಗಳನ್ನು ಯಾವಾಗಲೂ ಸಾಮಾನ್ಯ ಅಥವಾ ತಣ್ಣೀರಿನಿಂದ ತೊಳೆಯಬೇಕು.
ಆಗಾಗ ಮಿಟುಕಿಸುವುದು: ಕಣ್ಣು ನೋವು ಮತ್ತು ಒತ್ತಡವನ್ನು ತಪ್ಪಿಸಲು ಮಿಟುಕಿಸುವುದು ಅತ್ಯಂತ ಮುಖ್ಯವಾಗಿದೆ. ನಿಮ್ಮ ಕಣ್ಣುಗಳನ್ನು ರಕ್ಷಿಸಲು ಇದು ಒಂದು ಮಾರ್ಗವಾಗಿದೆ. ಇದು ನಿಮ್ಮ ಕಣ್ಣುಗಳಿಗೆ ವಿರಾಮವನ್ನು ನೀಡುತ್ತದೆ ಮತ್ತು ಕಣ್ಣುಗಳು ಲೂಬ್ರಿಕೇಟ್ ಆಗುವುದನ್ನು ತಡೆಯುತ್ತದೆ. ಇದರಿಂದ ಕಣ್ಣು ಒಣಗುವ ಸಮಸ್ಯೆ ಇರುವುದಿಲ್ಲ, ಇದು ನಿಮ್ಮ ಕಣ್ಣಿನಲ್ಲಿರುವ ಕೊಳೆಯನ್ನೂ ಸ್ವಚ್ಛಗೊಳಿಸುತ್ತದೆ.
ಮೊಬೈಲ್ ಅಥವಾ ಇತರ ಗ್ಯಾಜೆಟ್‌ಗಳನ್ನು ಬಳಸುವಾಗ, ನಾವು ಪರದೆಯ ಮೇಲೆ ಅಂಟಿಕೊಂಡಿರುತ್ತೇವೆ ಮತ್ತು ನಾವು ಕಣ್ಣು ಮಿಟುಕಿಸುವುದನ್ನು ಮರೆತುಬಿಡುತ್ತೇವೆ.
ಐ ಡ್ರಾಪ್ಸ್ ಅತಿಯಾದ ಬಳಕೆ: ಯಾವುದೇ ರೀತಿಯ ನೋವು ಅಥವಾ ಕಿರಿಕಿರಿಯಿಂದ ತ್ವರಿತ ಪರಿಹಾರವನ್ನು ಪಡೆಯಲು ಅನೇಕ ಜನರು ಐ ಡ್ರಾಪ್ಸ್ಗಳನ್ನು ಅತಿಯಾಗಿ ಬಳಸುತ್ತಾರೆ. ಇದು ದೀರ್ಘಾವಧಿಗೆ ಅನೇಕ ಅಪಾಯವನ್ನು ಎದುರಿಸುವಂತೆ ಮಾಡಬಹುದು. ಇದರಿಂದಾಗಿ, ನಿಮ್ಮ ಕಣ್ಣುಗಳಲ್ಲಿ ಕಂಡುಬರುವ ಲೂಬ್ರಿಕೆಂಟ್ಗಳು ಕ್ರಮೇಣವಾಗಿ ಕೊನೆಗೊಳ್ಳುತ್ತವೆ. ಇದರಿಂದಾಗಿ ಕಣ್ಣುಗಳ ಒಣಗುವಿಕೆಗೆ ಕಾರಣವಾಗುತ್ತದೆ.
ಕಣ್ಣಿಗೆ ಪಟ್ಟಿ ಕಟ್ಟಿ ಮಲಗುವುದು ಸರಿಯಲ್ಲ ಹೆಚ್ಚಿನ ಜನರು ತಮ್ಮ ಚರ್ಮದ ಆರೈಕೆಯನ್ನು ಇಷ್ಟಪಡುತ್ತಾರೆ ಮತ್ತು ಕಣ್ಣಿನ ಪಟ್ಟಿಯನ್ನು ಬಳಸುತ್ತಾರೆ. ಹಾಟ್ ಕಂಪ್ರೆಸ್ ಕಣ್ಣಿನ ಕಣ್ಣಿನ ಪಟ್ಟಿಯು ಪರಿಹಾರವನ್ನು ನೀಡುತ್ತದೆ. ನಿದ್ರಿಸುವಾಗ ಕಣ್ಣಿನ ಪಟ್ಟಿಯನ್ನು ಬಳಸುವುದು ಯಾವಾಗಲೂ ಸರಿಯಲ್ಲ .
ಯಾವುದೇ ರೀತಿಯ ಐ ಮಾಸ್ಕ್ ಅನ್ನು ರಾತ್ರಿಯಲ್ಲಿ ಕಣ್ಣುಗಳಿಗೆ ಧರಿಸಬಾರದು. ಇದು ಕಣ್ಣಿನಲ್ಲಿ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:48 pm, Mon, 2 January 23