ರಾತ್ರಿ ವೇಳೆ ಈ ಆಹಾರಗಳನ್ನು ತಿನ್ನಬೇಡಿ: ಇದು ಹೊಟ್ಟೆ ನೋವು, ಆಮ್ಲೀಯತೆ ಸಮಸ್ಯೆ ಉಂಟುಮಾಡಬಹುದು
ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಅಗತ್ಯ. ಬೆಳಗಿನ ಉಪಹಾರವನ್ನು ಸಮಯಕ್ಕೆ ಸರಿಯಾಗಿ ಮಾಡಬೇಕು, ಅದೇ ರೀತಿ ಮಧ್ಯಾಹ್ನ ಮತ್ತು ರಾತ್ರಿಯ ಊಟವನ್ನು ಸಹ ಸಮಯಕ್ಕೆ ಸರಿಯಾಗಿ ಮಾಡಬೇಕು. ಇದರ ಜೊತೆಗೆ ನಾವು ಯಾವ ರೀತಿಯ ಆಹಾರ ಕ್ರಮವನ್ನು ಪಾಲಿಸುತ್ತಿದ್ದೇವೆ ಎನ್ನುವುದು ಕೂಡಾ ಬಹಳ ಮುಖ್ಯ. ಹೀಗಿದ್ದರೂ ನಾವುಗಳು, ಎಣ್ಣೆಯಲ್ಲಿ ಕರಿದ ಹಾಗೂ ಇನ್ನಿತರ ಆಹಾರಗಳನ್ನು ಸೇವಿಸುತ್ತೇವೆ. ಇಂತಹ ಆಹಾರಗಳನ್ನು ನಾವು ರಾತ್ರಿ ಹೊತ್ತು ತಿನ್ನಬಾರದು. ಇದರಿಂದ ಅಸಿಡಿಟಿ, ಹೊಟ್ಟೆನೋವು ಕಾಣಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಮತ್ತು ಇದು ನಿಮ್ಮ ನಿದ್ರೆಯನ್ನು ಹಾಳುಮಾಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಸರಿಯಾದ ಆಹಾರ ಸೇವನೆಯತ್ತ ಗಮನಕೊಡುವುದು ಬಹಳ ಮುಖ್ಯ.
ಪ್ರತಿ ಬಾರಿ ನಾವು ಏನಾನ್ನಾದರೂ ತಿಂದ ಬಳಿಕ ಹೊಟ್ಟೆಯುಬ್ಬರ, ಅಸಿಡಿಟಿಯಂತಹ ಹೊಟ್ಟೆ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿರುತ್ತೇವೆ, ಅದರಲ್ಲೂ ಇತ್ತೀಚಿನ ದಿನಗಳಲ್ಲಂತೂ ಈ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಏಕೆಂದರೆ ನಮ್ಮ ಅನಾರೋಗ್ಯಕರ ಆಹಾರ ಪದ್ಧತಿಯು ಇದಕ್ಕೆ ಕಾರಣ. ಆರೋಗ್ಯಕರ ಮತ್ತು ಸಮತೋಲಿತ ಆಹಾರಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಬೆಳಗ್ಗೆ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ಸಮಯದಲ್ಲಿ ಸರಿಯಾದ ಆಹಾರಕ್ರಮವನ್ನು ಪಾಲಿಸಬೇಕು. ಅದರಲ್ಲೂ ರಾತ್ರಿಯ ಸಮಯ ಉತ್ತಮ ನಿದ್ರೆಯನ್ನು ಪಡೆಯಬೇಕೆಂದರೆ, ನಮ್ಮ ಆಹಾರ ಸೇವನೆಯು ಸರಿಯಾದ ರೀತಿಯಲ್ಲಿರಬೇಕು. ರಾತ್ರಿ ಸಮಯದಲ್ಲಿ ನಾವು ಕೆಲವೊಂದು ಆಹಾರಗಳನ್ನು ಸೇವಿಸಿದಾಗ ಅದು ಅಸಿಡಿಟಿ ಮತ್ತು ಹೊಟ್ಟೆನೋವನ್ನು ಉಂಟುಮಾಡಬಹುದು ಇದರಿಂದ ನಿಮ್ಮ ನಿದ್ರೆಯೂ ಹಾಳಾಗಬಹುದು. ಹಾಗಾಗಿ ನೀವು ಈ ಕೆಲವೊಂದು ಆಹಾರಗಳನ್ನು ರಾತ್ರಿಯ ಸಮಯದಲ್ಲಿ ಸೇವಿಸದಿರುವುದು ಉತ್ತಮ.
ರಾತ್ರಿ ಹೊತ್ತಿನಲ್ಲಿ ತಪ್ಪಿಸಬೇಕಾದ ಆಹಾರಗಳು:
ಎಣ್ಣೆಯಲ್ಲಿ ಕರಿದ ಆಹಾರಗಳು:
ರಾತ್ರಿ ಹೊತ್ತಿನಲ್ಲಿ ಎಣ್ಣೆಯಲ್ಲಿ ಕರಿದ ಪಕೋಡಾಗಳಂತಹ ತಿನ್ನುವುದನ್ನು ತಪ್ಪಿಸಿ. ಈ ಪಕೋಡಾಗಳು ಕೇವಲ ಎಣ್ಣೆಯನ್ನು ಮಾತ್ರ ಹೊಂದಿರುವುದಿಲ್ಲ ಜೊತೆಗೆ ಇದು ಆಮ್ಲೀಯವಾಗಿರುತ್ತದೆ. ಇದರಿಂದಾಗಿ ಇಂತಹ ಆಹಾರಗಳನ್ನು ತಿಂದಾಗ ಹೊಟ್ಟೆಯಲ್ಲಿ ಆಮ್ಲೀಯತೆ ಉಂಟಾಗುತ್ತದೆ. ಅವುಗಳನ್ನು ಜೀರ್ಣಿಸಿಕೊಳ್ಳುವುದು ಕೂಡ ಕಷ್ಟ. ಅಲ್ಲದೆ ಇಡೀ ರಾತ್ರಿ ಆಮ್ಲೀಯತೆ ಸಮಸ್ಯೆ ಕಾಡಿ ನಿಮ್ಮ ನಿದ್ದೆ ಹಾಳಾಗಬಹುದು. ಅದಕ್ಕಾಗಿಯೇ ರಾತ್ರಿಯ ಸಮಯದಲ್ಲಿ ಕರಿದ ಪದಾರ್ಥಗಳಿಂದ ದೂರವಿರುವುದು ಉತ್ತಮ.
ಕಿತ್ತಳೆ ಹಣ್ಣು:
ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ನಿಂಬೆ ಹಣ್ಣು ಮತ್ತು ಟೊಮೆಟೊಗಳನ್ನು ರಾತ್ರಿಯಲ್ಲಿ ಸೇವಿಸಿದರೆ ಅಸಿಡಿಟಿ ಉಂಟಾಗುತ್ತದೆ. ವಿಶೇಷವಾಗಿ ಅವುಗಳನ್ನು ರಾತ್ರಿಯಲ್ಲಿ ಖಾಲಿ ಹೊಟ್ಟೆಯಲ್ಲಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಅವುಗಳು ಆಮ್ಲೀಯತೆಯ ಸಮಸ್ಯೆಗೆ ಕಾರಣವಾಗಬಹುದು ಮಾತ್ರವಲ್ಲದೆ ರಾತ್ರಿ ಹೊತ್ತಿನಲ್ಲಿ ಅವುಗಳ ಸೇವನೆಯಿಂದ ಎದೆಯುರಿ ಸಮಸ್ಯೆಯೂ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ:
ಚಾಕೊಲೇಟ್:
ಊಟದ ಬಳಿಕ ಜನರು ಏನಾದರೂ ಸಿಹಿ ತಿನ್ನಲು ಬಯಸುತ್ತಾರೆ. ಅದಕ್ಕಾಗಿ ಜನರು ಹೆಚ್ಚಾಗಿ ಚಾಕೋಲೇಟ್ ತಿನ್ನುತ್ತಾರೆ. ರಾತ್ರಿ ಚಾಕೋಲೇಟ್ ತಿಂದರೆ ಆಸಿಡ್ ರಿಫ್ಲಕ್ಸ್ ಬರಬಹುದು. ಅತಿಯಾಗಿ ಚಾಕೊಲೇಟ್ ತಿಂದ ಮೇಲೆ ಅಸಿಡಿಟಿ ಮತ್ತು ಹೊಟ್ಟೆ ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಚಾಕೊಲೇಟ್ ಸೇವನೆಯನ್ನು ತಪ್ಪಿಸುವುದು ಉತ್ತಮ.
ಇದನ್ನೂ ಓದಿ: ಚಹಾದೊಂದಿಗೆ ಎಂದಿಗೂ ಈ ಆಹಾರಗಳನ್ನು ಸೇವಿಸಬೇಡಿ
ಪಿಜ್ಜಾ:
ರಾತ್ರಿಯ ಊಟಕ್ಕೆ ರುಚಿಕರವಾದ ಏನನ್ನಾದರೂ ತಿನ್ನುವ ಬಯಕೆಯನ್ನು ಪೂರೈಸಲು ಪಿಜ್ಜಾವನ್ನು ಹೆಚ್ಚಿನವರು ತಿನ್ನುತ್ತಾರೆ. ಆದರೆ ಈ ಅಧಿಕ ಕೊಬ್ಬಿನಾಂಶವಿರುವ ಪಿಜ್ಜಾವನ್ನು ತಿಂದ ನಂತರ ಅಸಿಡಿಟಿ ಉಂಟಾಗುತ್ತದೆ. ಮತ್ತು ಇದರಲ್ಲಿ ಹೇರಳವಾಗಿ ಸುರಿದಿರುವ ಚೀಸ್ ನ ಕೊಬ್ಬು ಮತ್ತು ಟೊಮೆಟೊ ಕಿಚಪ್ ನ ಆಮ್ಲ ಹೊಟ್ಟೆಯನ್ನು ಕೆಡಿಸುವುದರ ಜೊತೆಗೆ ನಿದ್ರೆಯನ್ನು ಸಹ ಹಾಳು ಮಾಡುತ್ತದೆ.
ಕೆಫೀನ್:
ಕೆಲವು ಜನರು ಹಗಲು ರಾತ್ರಿಯೆನ್ನದೆ ಹೆಚ್ಚಾಗಿ ಕಾಫಿ ಅಥವಾ ಚಹಾ ಸೇವಿಸುತ್ತಾರೆ. ಆದರೆ ರಾತ್ರಿಯಲ್ಲಿ ಟೀ ಕಾಫಿಯನ್ನು ಕಡಿಮೆ ಸೇವಿಸಿದರೆ ಅದರಲ್ಲೂ ಕೆಫೀನ್ ಸೇವನೆಯನ್ನು ನಿಲ್ಲಿಸುವುದು ತುಂಬಾ ಒಳ್ಳೆಯದು. ರಾತ್ರಿಯಲ್ಲಿ ಇವುಗಳನ್ನು ಸೇವಿಸುವುದರಿಂದ ಹೊಟ್ಟೆನೋವು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇದರ ಹೊರತಾಗಿ ಇವುಗಳು ನಿಮ್ಮ ನಿದ್ರೆಯನ್ನು ಹಾಳು ಮಾಡುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ