ಹೆಣ್ಣು ಸೌಂದರ್ಯ ಪ್ರಿಯೆ. ಹೀಗಾಗಿ ಅಂದವನ್ನು ಹೆಚ್ಚಿಸುವ ನಾನಾ ಪ್ರಾಡಕ್ಟ್ ಗಳನ್ನು ಬಳಸಿ ಪ್ರಯೋಗಗಳು ಮಾಡುತ್ತಲೇ ಇರುತ್ತಾರೆ. ಆದರೆ ಕೆಲವೊಮ್ಮೆ ಎಣ್ಣೆ ತ್ವಚೆ ಇರುವವರಲ್ಲಿ ಮುಖದ ಅಂದವು ಹಾಳಾಗುವುದೇ ಹೆಚ್ಚು. ಧೂಳು, ಬೆವರು ಹಾಗೂ ಮಾಲಿನ್ಯವು ಮುಖದ ಮೇಲೆ ದಾಳಿ ಮಾಡಿ ಮೊಡವೆ ಸಮಸ್ಯೆಯನ್ನು ದುಪ್ಪಾಟ್ಟಾಗಿಸುತ್ತದೆ. ಮೊಡವೆ ಹಾಗೂ ಅದರ ಕಲೆಗಳು ಮುಖ ಸೌಂದರ್ಯವನ್ನು ಹಾಳು ಮಾಡುವ ಕಾರಣ ಮನೆಯಲ್ಲೇ ಪರಿಹಾರ ಕಂಡುಕೊಳ್ಳುವುದು ಕಷ್ಟವೇನಲ್ಲ.
* ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸವಿದ್ದರೆ ಅದನ್ನು ತಕ್ಷಣವೇ ನಿಲ್ಲಿಸುವುದು ಉತ್ತಮ. ಕಾಫಿಯಲ್ಲಿರುವ ಕೆಫೀನ್ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸಿ ಮೊಡವೆ ಸಮಸ್ಯೆಗೆ ಕಾರಣವಾಗುತ್ತದೆ.
* ಹಾಲಿನಲ್ಲಿ ಬೆಳವಣಿಗೆಯ ಹಾರ್ಮೋನ್ ಐಜಿಎಫ್-1 ಹಾಗೂ ಬೊವಿನ್ ಇರುವುದರಿಂದ ಚರ್ಮದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವುದೇ ಹೆಚ್ಚು. ಹೀಗಾಗಿ ಮುಖದ ಮೇಲೆ ಕೂದಲು ಹಾಗೂ ಮೊಡವೆಗಳಾಗುತ್ತದೆ. ಹಾಲಿನ ಸೇವನೆಯು ಮಿತವಾಗಿರಲಿ.
* ಅತಿಯಾದ ಉಪ್ಪಿನಾಂಶವಿರುವ ತಿಂಡಿಗಳ ಸೇವನೆಯು ಮೊಡವೆಗಳಾಗುವುದಕ್ಕೆ ಮುಖ್ಯ ಕಾರಣವಾಗಿದೆ. ಉಪ್ಪು ಚರ್ಮದ ಮೇಲೆ ಪ್ರಭಾವ ಬೀರುತ್ತದೆ. ಕಡಿಮೆ ಪ್ರಮಾಣದಲ್ಲಿ ಉಪ್ಪನ್ನು ತಿನ್ನುವ ಅಭ್ಯಾಸ ರೂಢಿಸಿಕೊಂಡರೆ ಮೊಡವೆ ಸಮಸ್ಯೆಯಿಂದ ಮುಕ್ತಿ ಹೊಂದಬಹುದು.
ಇದನ್ನೂ ಓದಿ: ನಿಮ್ಮ ಮನೆಯ ಕನ್ನಡಿ ಫಳಫಳ ಹೊಳೆಯುವಂತೆ ಮಾಡುವುದೇಗೆ? ಈ ಟಿಪ್ಸ್ ಫಾಲೋ ಮಾಡಿ
* ಒಮೆಗಾ ಇರುವ ಆಹಾರಗಳಾದ ಸಂಸ್ಕರಿಸಿದ ಎಣ್ಣೆಗಳು, ಸ್ಪೋರ್ಟ್ಸ್ ಡ್ರಿಂಕ್‌ಗಳು, ಸಾಸ್ ಹಾಗೂ ಕೆಚಪ್‌ಗಳು, ಸಂಸ್ಕರಿಸಿದ ಮಾಂಸ, ಬೇಕ್ಡ್ ಆಹಾರಗಳ ಸೇವನೆಯಿಂದ ಮೊಡವೆಗಳು ಉಂಟಾಗಿ ಮುಖದ ಅಂದವು ಹಾಳಾಗುತ್ತವೆ. ಹೀಗಾಗಿ ಇದರ ಬಳಕೆ ಹಾಗೂ ಸೇವನೆಯು ಇತಿಮಿತಿಯಲ್ಲಿರಲಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: