ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಗಾಢ ಕಲೆಯನ್ನು ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯೇ ಸಾಕು

ಶೌಚಾಲಯವನ್ನು ಎಷ್ಟೇ ಸ್ವಚ್ಛವಾಗಿಟ್ಟುಕೊಂಡರೂ ಸಾಲದು. ಪ್ರತಿನಿತ್ಯ ಸ್ವಚ್ಛಗೊಳಿಸಿದರೂ ಸಹ ಟಾಯ್ಲೆಟ್‌ ಕಮೋಡ್‌ಗಳ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ. ಇದನ್ನು ಹೋಗಲಾಡಿಸಲು ಅನೇಕರು ದುಬಾರಿ ಕ್ಲೀನಿಂಗ್‌ ಪ್ರಾಡಕ್ಟ್‌ಗಳನ್ನು ಬಳಸುತ್ತಾರೆ. ಆದರೆ ಇದ್ಯಾವುದರ ಅವಶ್ಯಕತೆಯೇ ಇಲ್ಲ, ಟಾಯ್ಲೆಟ್‌ ಸ್ವಚ್ಛಗೊಳಿಸಲು ನೀವು ವೇಸ್ಟ್‌ ಎಸೆಯುವ ಬಾಳೆಹಣ್ಣಿನ ಸಿಪ್ಪೆಯ ಸಿಪ್ಪೆಯೇ ಸಾಕು, ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಗಾಢ ಕಲೆಯನ್ನು ಹೋಗಲಾಡಿಸಲು ಬಾಳೆ ಹಣ್ಣಿನ ಸಿಪ್ಪೆಯೇ ಸಾಕು
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 18, 2025 | 7:09 PM

ಮನೆಯ ಸ್ವಚ್ಛತೆಗೆ ಗಮನಹರಿಸುವಂತೆ ಶೌಚಾಲಯವನ್ನೂ (toilet) ಪ್ರತಿನಿತ್ಯ ಸ್ವಚ್ಛಗೊಳಿಸಬೇಕು. ಇಲ್ಲದಿದ್ದರೆ ರೋಗಾಣುಗಳು ಬೇಗನೆ ಮನೆಯನ್ನು ಆವರಿಸಿಕೊಳ್ಳುತ್ತವೆ. ಸ್ವಚ್ಛತೆಯ ದೃಷ್ಟಿಯಿಂದ ಪ್ರತಿ ಮನೆಯಲ್ಲೂ ಸಹ ಪ್ರತಿನಿತ್ಯ ಶೌಚಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ. ಆದ್ರೆ ಎಷ್ಟೇ ಸ್ವಚ್ಛಗೊಳಿಸಿದರೂ ಏನು ಪ್ರಯೋಜನ ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಹಳದಿ ಕಲೆಗಳು ಮಾತ್ರ ಹೋಗುತ್ತಿಲ್ಲ, ಯಾವುದೇ ಕ್ಲೀನರ್‌ ಬಳಸಿದರೂ ಕೂಡ ಕಲೆಗಳನ್ನು ಹೋಗಲಾಡಿಸಲು ಸಾಧ್ಯವಿಲ್ಲ  ಎಂಬುದು ಹಲವರ ದೂರು. ನಿಮ್ಮ ಮನೆಯ ಟಾಯ್ಲೆಟ್‌ ಕಮೋಡ್‌ ಕೂಡ ಗಾಢ ಕಲೆಯನ್ನು ಹೊಂದಿವೆಯೇ, ಹಾಗಿದ್ರೆ ಇದನ್ನು ತೊಡೆದು ಹಾಕಲು ಯಾವುದೇ ದುಬಾರಿ ಉತ್ಪನ್ನಗಳ ಅವಶ್ಯಕತೆಯೇ ಇಲ್ಲ, ಬಾಳೆಹಣ್ಣಿನ ಸಿಪ್ಪೆಯೇ ಸಾಕು. ಈ ಸಿಪ್ಪೆಯನ್ನು ಟಾಯ್ಲೆಟ್‌ ಸ್ವಚ್ಛಗೊಳಿಸಲು ಹೇಗೆ ಬಳಸುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಬಾಳೆಹಣ್ಣಿನ ಸಿಪ್ಪೆಯಿಂದ ಟಾಯ್ಲೆಟ್‌ ಕಮೋಡ್‌ ಸ್ವಚ್ಛಗೊಳಿಸುವುದು ಹೇಗೆ?

ಟಾಯ್ಲೆಟ್‌ ಕಮೋಡ್‌ನಲ್ಲಿ ಅಂಟಿರುವ ಕಲೆಗಳನ್ನು ಹೋಗಲಾಡಿಸಲು ಯಾವುದೇ ದುಬಾರಿ ಕ್ಲೀನರ್‌ಗಳ ಅವಶ್ಯಕತೆಯೇ ಇಲ್ಲ, ನೀವು ಯಾವುದೇ ಖರ್ಚಿಲ್ಲದೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸಿ ಕ್ಲೀನ್‌ ಮಾಡಬಹುದು. ಹೌದು ನಾವು ನಿಷ್ಪಯೋಜಕವೆಂದು ಬಿಸಾಡುವ ಬಾಳೆಹಣ್ಣಿನ ಸಿಪ್ಪೆಗಳು  ನೈಸರ್ಗಿಕವಾಗಿ ಕೊಳಕು ಮತ್ತು ಕಲೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುವ ಸಂಯುಕ್ತಗಳನ್ನು ಹೊಂದಿರುತ್ತವೆ. ನೀವು ಇದನ್ನು ಟಾಯ್ಲೆಟ್‌ ಕಮೋಡ್‌ ಕ್ಲೀನ್‌ ಮಾಡಲು ಕೂಡ ಬಳಸಬಹುದು.

ಅದಕ್ಕಾಗಿ ಮೊದಲು ಬಾಳೆಹಣ್ಣಿನ ಸಿಪ್ಪೆಯನ್ನು ಕಟ್‌ ಮಾಡಿ ಅದನ್ನು ಮಿಕ್ಸಿಜಾರ್‌ನಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಇದೀಗ ಈ ಪೇಸ್ಟನ್ನು ಒಂದು ಪಾತ್ರೆಗೆ ವರ್ಗಾಯಿಸಿ. ಅದಕ್ಕೆ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿ ದಪ್ಪ ಪೇಸ್ಟ್‌ ತಯಾರಿಸಿಕೊಳ್ಳಿ. ಕೊನೆಗೆ ಅದಕ್ಕೆ ಸ್ವಲ್ಪ ಶಾಂಪೂ ಸೇರಿಸಿ ಇನ್ನೊಮ್ಮೆ ಎಲ್ಲವನ್ನು ಮಿಕ್ಸ್‌ ಮಾಡಿದರೆ ನ್ಯಾಚುರಲ್‌ ಟಾಯ್ಲೆಟ್‌ ಕ್ಲೀನರ್‌ ಸಿದ್ಧ.

ಇದನ್ನೂ ಓದಿ: ತುಕ್ಕು ಹಿಡಿದ ವಸ್ತುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಲು ಒಂದು ತರಕಾರಿಯ ಸಿಪ್ಪೆಯೇ ಸಾಕು

ಇದೀಗ ಈ ಕ್ಲೀನರ್‌ ಮಿಶ್ರಣವನ್ನು ಟಾಯ್ಲೆಟ್‌ ಕಮೋಡ್‌ ಮೇಲೆ ಸುರಿದು, ಸ್ವಲ್ಪ ಹೊತ್ತಿನ ಬಳಿಕ ಚೆನ್ನಾಗಿ ಬ್ರಶ್‌ನಿಂದ ತಿಕ್ಕಿ. ಕೊನೆಗೆ ನೀರು ಹಾಕಿ ಸ್ವಚ್ಛಗೊಳಿಸಿದರೆ ನಿಮ್ಮ ಶೌಚಾಲಯ ಹೊಸದರಂತೆ ಕಾಣಿಸುತ್ತದೆ. ಈ ಸಿಂಪಲ್‌ ಟಾಯ್ಲೆಟ್‌ ಕ್ಲೀನಿಂಗ್‌ ಹ್ಯಾಕ್‌ ಅನ್ನು ನೀವು ಕೂಡ ಪ್ರಯತ್ನಿಸಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:04 pm, Tue, 18 November 25